Bluetooth Neckbands : ಜಸ್ಟ್‌ 899ರೂ. ಗೆ ದೊರೆಯಲಿದೆ ಬ್ಲೂಟೂತ್‌ ನೆಕ್‌ಬ್ಯಾಂಡ್‌ | ಇದರಲ್ಲಿದೆ ನಿಜಕ್ಕೂ ಅಚ್ಚರಿಯ ಫೀಚರ್

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಈ ನಡುವೆ ಕಂಪನಿಗಳು ತಾನು ಹೆಚ್ಚು ನಾನು ಹೆಚ್ಚು ಎಂದು ಬೀಗುತ್ತಿದೆ. ಪ್ರಸ್ತುತ ಭಾರತದ ಕಂಪನಿಯೊಂದು ಈ ಬಾರಿ ಹೊಸ ಬ್ಲೂಟೂತ್​​ ನೆಕ್​ಬ್ಯಾಂಡ್​ ಅನ್ನು ಬಿಡುಗಡೆ ಮಾಡುತ್ತಿದೆ.

ಇತ್ತೀಚೆಗೆ ವೈರ್​ಲೆಸ್ ಸಾಧನಗಳು ಬಹಳ ಪ್ರಸಿದ್ಧಿಯಲ್ಲಿದೆ . ಭಾರತೀಯ ಟೆಕ್ನಾಲಜಿ ಕಂಪನಿಗಳಲ್ಲಿ ಹಲವಾರು ಉತ್ತಮ ಗುಣಮಟ್ಟದ ಕಂಪನಿಗಳಿವೆ. ಈ ಕಂಪನಿಗಳು ದಿನದಿಂದ ದಿನಕ್ಕೆ ಹೊಸಹೊಸ ಸಾಧನಗಳನ್ನು ದೇಶದ ಮಾರುಕಟ್ಟೆಗಳಿಗೆ ತರಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಸ್ಮಾರ್ಟ್​ಫೋನ್​ಗಳ ಜೊತೆ ಒಂದು ಇಯರ್​ಫೋನ್​ ಅಥವಾ ಬ್ಲೂಟೂತ್​ ನೆಕ್​ಬ್ಯಾಂಡ್​ಗಳನ್ನು ಹೆಡ್​ಫೋನ್​ಗಳನ್ನು ಇಟ್ಟುಕೊಳ್ಳುವುದು ಸಹಜ . ಇದೀಗ ದೇಶದಲ್ಲಿ SWOTT ನೆಕಾನ್​ 102 ಎಂಬ ಬ್ಲೂಟೂತ್​ ನೆಕ್​ಬ್ಯಾಂಡ್ ಬಿಡುಗಡೆಯಾಗುತ್ತಿದ್ದು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಇದನ್ನು ಖರೀದಿಸಬಹುದಾಗಿದೆ.

ಪ್ರಸ್ತುತ ಮಾರುಕಟ್ಟೆಗಳಲ್ಲಿ ಹೆಚ್ಚು ಬೇಡಿಕೆಯಲ್ಲಿರುವಂತಹ ಸಾಧನಗಳೆಂದರೆ ಬ್ಲೂಟೂತ್​ ನೆಕ್​ಬ್ಯಾಂಡ್​ಗಳು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಕಂಪನಿಯೊಂದು ಈ ಬಾರಿ ಹೊಸ ಬ್ಕೂಟೂತ್​​ ನೆಕ್​ಬ್ಯಾಂಡ್​ ಅನ್ನು ಬಿಡುಗಡೆ ಮಾಡುತ್ತಿದೆ.

ಈ ನೆಕಾನ್​ 102 ಬ್ಲೂಟೂತ್​ ನೆಕ್​ಬ್ಯಾಂಡ್​ ಅನ್ನು ಗ್ರಾಹಕರು ಪ್ರಮುಖ ಇಕಾಮರ್ಸ್​ ವೆಬ್​​ಸೈಟ್​ ಆಗಿರುವಂತಹ ಅಮೆಜಾನ್​ ಮತ್ತು ನೆಕಾನ್​ ಕಂಪನಿಯ ಅಧಿಕೃತ ವೆಬ್​ ಸೈಟ್​ನಿಂದ ಖರೀದಿಸಬಹುದಾಗಿದೆ
ಕಂಪನಿಯು ಈ ಬ್ಲೂಟೂತ್ ನೆಕ್​ಬ್ಯಾಂಡ್​ ಅನ್ನು 899 ರೂಪಾಯಿಯ ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ.

Swott ನೆಕಾನ್​ 102 ನೆಕ್​ಬ್ಯಾಂಡ್​ನ ವಿಶೇಷತೆ :

  • ಈ ಬ್ಲೂಟೂತ್ ನೆಕ್‌ಬ್ಯಾಂಡ್ ಅನ್ನು ಸಿಲಿಕಾನ್​ನಿಂದ ತಯಾರಿಸಲಾಗಿದೆ. ಆದ್ದರಿಂದ ಇದು ಬಳಕೆದಾರರ ಚರ್ಮಕ್ಕೆ ಹಾನಿಯಾಗುವುದಿಲ್ಲ. ಅಲ್ಲದೆ, ಬಳಕೆದಾರರು ಇದನ್ನು ದೀರ್ಘಕಾಲದವರೆಗೆ ಹಾಕಿಕೊಳ್ಳಬಹುದಾಗಿದೆ.
  • ವ್ಯಾಯಾಮಗಳು, ಜಾಗಿಂಗ್, ಓಟ ಮತ್ತು ಕ್ರೀಡಾ ಅವಧಿಗಳಲ್ಲಿ ನೀವು ಈ ನೆಕ್‌ಬ್ಯಾಂಡ್ ಅನ್ನು ಆರಾಮವಾಗಿ ಬಳಸಬಹುದು.
  • ಈ ನೆಕ್​ಬ್ಯಾಂಡ್​ ಅನ್ನು ನಿಮ್ಮ ಸ್ಮಾರ್ಟ್​​ಫೋನ್​ಗೆ ಒಮ್ಮೆ ಕನೆಕ್ಟ್​ ಮಾಡಿದರೆ ನಂತರ ಮ್ಯೂಸಿಕ್​ ಕೇಳುವಾಗ, ಕಾಲ್ ಸ್ವೀಕರಿಸುವಾಗ, ಮಾತನಾಡುವಾಗ ಇದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ.
  • ನೆಕಾನ್ 102 ದೀರ್ಘ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಈ ನೆಕಾನ್​ 102 ನೆಕ್‌ಬ್ಯಾಂಡ್ 40 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಮತ್ತು 40 ಗಂಟೆಗಳವರೆಗೆ ನಿರಂತರವಾಗಿ ಈ ಬ್ಲೂಟುತ್​ ಅನ್ನು ಬಳಸಬಹುದಾಗಿದೆ.
  • ಈ ಬ್ಲೂಟೂತ್ ನೆಕ್‌ಬ್ಯಾಂಡ್ ಗೂಗಲ್ ಅಸಿಸ್ಟೆಂಟ್​ ಮತ್ತು ಸಿರಿ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ.
  • ಬಳಕೆದಾರರು 2 ಸೆಕೆಂಡುಗಳ ಕಾಲ ಪವರ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸೌಂಡ್​ ಅಸಿಸ್ಟೆಂಟ್​ ಅನ್ನು ಆನ್​ ಮಾಡಬಹುದಾಗಿದೆ.
  • ಈ ನೆಕಾನ್ 102 ಬ್ಲೂಟೂತ್​ ಕಾಲ್​ನಲ್ಲಿ ಮಾತಾಡಬೇಕಾದರೆ ಸ್ಪಷ್ಟವಾಗಿ ಕೇಳುವಂತಹ ಫೀಚರ್ಸ್ ಅನ್ನು ಹೊಂದಿದೆ.
  • ಈ ಬ್ಲೂಟೂತ್​ ಮ್ಯಾಗ್ನಟಿಕ್​ ಮೆಟಲ್​ ಇಯರ್​​ಬಡ್​ಗಳನ್ನು ಒಳಗೊಂಡಿದ್ದು ಬ್ಲೂಟೂತ್​ 5.0 ದಲ್ಲಿ ಕಾರ್ಯನಿರ್ವಹಿಸುತ್ತದೆ.
  • ಈ ನೆಕಾನ್​ 102 ಬ್ಲೂಟೂತ್​ ನೆಕ್​ಬ್ಯಾಂಡ್​ನ ವಿಶೇಷತೆಯೆಂದರೆ ಏಕಕಾಲದಲ್ಲಿ ಎರಡು ಸಾಧನಗಳಿಗೆ ಕನೆಕ್ಟ್​ ಆಗುವಂತಹ ಸಾಮರ್ಥ್ಯವನ್ನು ಇದು ಹೊಂದಿದೆ. Swott ನೆಕಾನ್​ 102 ನೆಕ್​ಬ್ಯಾಂಡ್ ​ 10 ಎಮ್​ಎಮ್​ ಡ್ರೈವರ್​ನೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ ಈ ಬ್ಲೂಟೂತ್ ಗ್ರೇ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಇದನ್ನು ಖರೀದಿಸಬಹುದಾಗಿದೆ.
Leave A Reply

Your email address will not be published.