ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚುತ್ತಿದೆ ಬೊಕ್ಕತಲೆಯ ಸಮಸ್ಯೆ
ಪ್ರತಿಯೊಬ್ಬರೂ ತಮ್ಮ ತಲೆಕೂದಲಿನ ಬಗ್ಗೆ ಸಾಕಷ್ಟು ಕಾಳಜಿವಹಿಸುತ್ತಾರೆ. ಅತಿಯಾಗಿ ತಲೆಕೂದಲು ಉದುರುವುದರಿಂದ ಕೆಲವರು ಚಿಂತೆಗೀಡಾಗುತ್ತಾರೆ. ಇನ್ನೂ ಮಹಿಳೆಯರಲ್ಲಿ ಕಾಡುವ ಅರೆ ಬೊಕ್ಕತಲೆ ಸಮಸ್ಯೆ ಹಿಂಸೆ ಉಂಟುಮಾಡುತ್ತದೆ. ಈ ಸಮಸ್ಯೆ ಒಂದು ರೀತಿಯ ಕೂದಲು ಉದುರುವಿಕೆಯಾಗಿದೆ. ಇದನ್ನು ಅಂಡ್ರೋಕೆನೆಟಿಕ್ ಅಲೋಪೆಸಿಯಾ ಎನ್ನಲಾಗುತ್ತದೆ. ಬೊಕ್ಕತಲೆಯ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಿದ್ದು, ಇದರಿಂದ ಸಾಮಾನ್ಯವಾಗಿ ಕೂದಲು ತೆಳ್ಳಗಾಗುತ್ತದೆ. ಕೂದಲು ತೆಳ್ಳಗಾಗಿ ಕೆಲ ಭಾಗಗಳಲ್ಲಿ ಅಗಲವಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ನೆತ್ತಿ ಕಾಣುತ್ತದೆ.
ಇದು ಮಹಿಳೆಯರಲ್ಲಿ ಸ್ವಭಾವತಃ ಅನುವಂಶಿಕವಾಗಿದೆ ಮತ್ತು ಸಾಮಾನ್ಯವಾಗಿ 50 ವರ್ಷದ ಕೊನೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅಂದ್ರೆ ಮಹಿಳೆಯರು ಋತುಬಂಧವನ್ನು ತಲುಪಿದ ನಂತರ ಕೂದಲು ತೆಳ್ಳಗಾಗಿ ಬೊಕ್ಕತಲೆ ಕಾಣುತ್ತದೆ. ಕೆಲಹಾರ್ಮೋನುಗಳು ಬೋಳು ತಲೆಗೆ ಪ್ರಾಥಮಿಕ ಕಾರಣ ಎಂದು ತಜ್ಞರು ಹೇಳುತ್ತಾರೆ.
ಇನ್ನೂ, ಪುರುಷರಲ್ಲಿ ‘M’ ಆಕಾರದಲ್ಲಿ ಕೂದಲು ಉದುರಿದರೆ, ಮಹಿಳೆಯರ ಬೋಳು ತಲೆ ಪ್ರಕೃತಿಯಲ್ಲಿ ಹೆಚ್ಚು ಹರಡಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ನೆತ್ತಿಯಲ್ಲಿನ ವಿಭಜನೆ ರೇಖೆಯಿಂದ ಪ್ರಾರಂಭವಾಗುತ್ತದೆ ಹಾಗೂ ಕ್ರಮೇಣ ಇಡೀ ನೆತ್ತಿಯ ಮೇಲೆ ಪರಿಣಾಮ ಬೀರುತ್ತದೆ. ವೈದ್ಯರು ಇದನ್ನು ಮೂರು ಹಂತದಲ್ಲಿ ವಿಂಗಡಿಸಿದ್ದಾರೆ.
ಕೂದಲು ವಿಭಜನೆಯಿಂದ ಕೂದಲು ಉದುರುವಿಕೆಯ ಪ್ರಮಾಣವು ತೀವ್ರವಾಗಿರದ ಕಾರಣ ಮಹಿಳೆಯರು ಸ್ತಿçà ಅಲೋಪೇಸಿಯಾದಿಂದ ಬಳಲುತ್ತಿದ್ದಾರೆ ಎಂದು ತಿಳಿದಿರುವುದಿಲ್ಲ. ಕೂದಲು ತೆಳ್ಳಗಾಗಿ ಉದುರಲು ಆರಂಭಿಸುತ್ತದೆ. ನಂತರ ಕೂದಲ ವಿಭಜನೆಯ ಭಾಗದಲ್ಲಿ ಕೂದಲು ಕ್ರಮೇಣ ತೆಳ್ಳಗಾಗುತ್ತದೆ.
ಈ ಹಂತದಲ್ಲಿ ಕೂದಲು ಉದುರುವುದು ಹೆಚ್ಚಾಗಿದ್ದು, ಪೀಡಿತ ಪ್ರದೇಶ ಚಿಕ್ಕದಾಗಿದ್ದು, ವಿಭಜನೆಯ ಪ್ರದೇಶ ಅಗಲವಾಗಿದ್ದು, ಅರೆ ಬೊಕ್ಕು ಬುರುಡೆಗೆ ಕಾರಣವಾಗುತ್ತದೆ. ಹಾಗೇ ಈ ಹಂತದಲ್ಲಿ ಕೂದಲು ಉದುರುವುದು ಹಾಗೂ ತೆಳ್ಳಗಾಗುವುದು ಹೆಚ್ಚಾಗಿದ್ದು, ನೆತ್ತಿಯ ಉದ್ದಕ್ಕೂ ಹೆಚ್ಚು ಹರಡಿ, ಬುರುಡೆ ಕಾಣಿಸಿಕೊಳ್ಳುತ್ತದೆ. ನೆತ್ತಿಯ ಎಲ್ಲಾ ಭಾಗಗಳಲ್ಲಿ ಕೂದಲು ತೆಳುವಾಗುತ್ತದೆ. ಹಾಗೂ ಆ ಜಾಗದಲ್ಲಿ ಮತ್ತೆ ಕೂದಲು ಬೆಳೆಯುವ ಸಾಧ್ಯತೆ ಕಡಿಮೆ ಇದೆ.
ಇನ್ನೂ ಮಹಿಳೆಯರ ಬೋಳು ತಲೆಗೆ ಕಾರಣ ಏನೆಂದರೆ, ಹಾರ್ಮೋನ್ ಗಳು ಇವು ಆಂಡ್ರೋಜೆನ್ಗಳ ಹೆಚ್ಚಿದ ಮಟ್ಟಗಳು ಕೂದಲು ಉದುರುವಿಕೆ ಮತ್ತು ಕೂದಲು ತೆಳುವಾಗುವುದಕ್ಕೆ ಕಾರಣವಾಗಬಹುದು. ಹಾಗೇ ಅನುವಂಶಿ ಕೂಡ ಕಾರಣ, ಇದು ಕೂದಲು ಉದುರುವಿಕೆ ಮತ್ತು ಕಡಿಮೆ ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗೇ ಫೋಲಿಕ್ಯುಲರ್ ಮಿನಿಯೇಟರೈಸೇಶನ್ ಸಂಭವಿಸುತ್ತದೆ. ದಪ್ಪವಾದ ಕೂದಲನ್ನು ಚಿಕ್ಕದಾದ ಮತ್ತು ತೆಳ್ಳಗಿನ ಕೂದಲಿನಿಂದ ಬದಲಾಯಿಸಲಾಗುತ್ತದೆ.
ಹಾಗೇ 50 ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ಕಬ್ಬಿಣದ ಅಂಶದ ಕೊರತೆಯಿಂದ ರಕ್ತಹೀನತೆಯನ್ನು ಹೊಂದಿರುತ್ತಾರೆ. ಇದು ಕೂದಲು ಉದುರುವಿಕೆ ಮತ್ತು ಕಡಿಮೆ ಕೂದಲ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗೂ ವೃದ್ಧಾಪ್ಯ, ಋತುಬಂಧದ ನಂತರ ದೇಹದಲ್ಲಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಕಡಿಮೆ ಉತ್ಪಾದನೆಯಾಗುತ್ತದೆ ಹಾಗಾಗಿ ಕೂದಲು ಉದುರುವುದು ಹೆಚ್ಚಾಗುತ್ತದೆ.
ಇನ್ನೂ, ಒತ್ತಡ ಹೆಚ್ಚಿದ ಕಾರ್ಟಿಕೊಸ್ಟೆರಾನ್ ಮಟ್ಟಗಳಿಗೆ ಕಾರಣವಾಗುತ್ತದೆ. ಇದು ಕೂದಲಿನ ಕಿರುಚೀಲಗಳನ್ನು ವಿಶ್ರಾಂತಿಯ ಹಂತಕ್ಕೆ ತಳ್ಳುತ್ತದೆ. ಹಾಗೂ ಕೂದಲಿನ ಪುನರುತ್ಪಾದನೆಗಾಗಿ ವಿಭಜಿಸುವ ಕಾಂಡಕೋಶಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಹಾಗೇ ಆಂತರಿಕ ಕಾಯಿಲೆಗಳು ಇವು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ನಂತಹ ಕಾಯಿಲೆ ಕೂದಲು ಉದುರುವಿಕೆಗೆ ಕಾರಣವಾಗುತ್ತವೆ. ಹಾಗೇ ನೆತ್ತಿಯ ರೋಗ ಇದು ರಿಂಗ್ವಾರ್ಮ್, ಸೋರಿಯಾಸಿಸ್, ಅಥವಾ ಹೊಟ್ಟಿನಂತಹ ಶಿಲೀಂಧ್ರಗಳ ಸೋಂಕು ಕೂದಲು ನಷ್ಟಕ್ಕೆ ಕಾರಣವಾಗುತ್ತದೆ.
ಮಹಿಳೆಯರಲ್ಲಿ ಈ ಬೊಕ್ಕ ತಲೆ ಸಮಸ್ಯೆಯನ್ನು ತಡೆಯುವ ಕ್ರಮ ಇಲ್ಲಿದೆ. ಮೊದಲನೆಯದಾಗಿ ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸಿ. ಹಾನಿಕರವಾದ ಕೇಶ ವಿನ್ಯಾಸವನ್ನು ತಪ್ಪಿಸಿ ಮತ್ತು ಕಲರ್ಗಳು ಮತ್ತು ಸ್ಟ್ರೈಟ್ನರ್ಗಳಂತಹ ಎಲೆಕ್ಟ್ರಾನಿಕ್ ತಾಪನ ಉಪಕರಣಗಳ ಬಳಕೆ ಮಾಡಬೇಡಿ. ಹಾಗೇ ಹೊರಗೆ ತೆರಳುವಾಗ ಕೂದಲನ್ನು ರಕ್ಷಿಸಿಕೊಳ್ಳಿ. ಒಮೆಗಾ-3 ಕೊಬ್ಬಿನಾಮ್ಲಗಳಂತಹ ಕೆಲವು ಪೂರಕಗಳು ಸಹಾಯಕವಾಗಿವೆ.