ಜೀವಕ್ಕೆ ಕುತ್ತು ತಂದ ಗರ್ಭನಿರೋಧಕ ಮಾತ್ರೆ | ಗಂಡನಿಗೆ ತಿಳಿಸದೇ ಮಾತ್ರೆ ತಗೊಂಡ ಹೆಂಡತಿ | 11 ತಿಂಗಳ ಕೂಸು ತಾಯಿಯಿಲ್ಲದೇ ಅನಾಥ
ಗರ್ಭ ನಿರೋಧಕ ಮಾತ್ರೆ ಮಹಿಳೆಯ ಜೀವಕ್ಕೆ ಕುತ್ತು ತಂದಿದ್ದು, ಗಂಡನಿಗೆ ತಿಳಿಸದೇ ಪ್ರೀತಿ ಕುಶ್ವಾಸ್ ಎಂಬಾಕೆ ಗರ್ಭ ನಿರೋಧಕ ಮಾತ್ರೆಯನ್ನು ತಗೆದುಕೊಂಡಿದ್ದಾರೆ. ನಂತರ ಅತಿಯಾದ ಬ್ಲೀಡಿಂಗ್ ನಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ಪ್ರೀತಿ ಕುಶ್ವಾಸ್ಗೆ 11 ತಿಂಗಳ ಗಂಡು ಮಗು ಇದ್ದು, ಮಹಿಳೆ ಇತ್ತೀಚಿಗೆ ಪ್ರಗ್ನೆನ್ಸಿ ತಪಾಸಣೆ ಮಾಡಿಸಿದ್ದಾರೆ ಎನ್ನಲಾಗಿದೆ. ಆಗ ಆಕೆ ಪ್ರಗ್ನೆಂಟ್ ಎಂಬ ವಿಷಯ ದೃಡಪಟ್ಟಿದೆ. ತಾನು ಪ್ರಗ್ನೆಂಟ್ ಆಗಿರೋ ವಿಚಾರ ಮಹಿಳೆ ಗಂಡನ ಬಳಿ ಹೇಳಿದ್ದರಂತೆ. ಆಗ ಪತಿ ಆಸ್ಪತ್ರೆಗೆ ಹೋಗೋಣ ಎಂದಿದ್ದಕ್ಕೆ ಒಪ್ಪದ ಪ್ರೀತಿ, ಗರ್ಭ ನಿರೋಧಕ ಮಾತ್ರೆಯನ್ನು ತೆಗೆದುಕೊಂಡಿದ್ದಾಳೆ.
ಅದು ಕೂಡ ಗಂಡನಿಗೆ ತಾನು ಮಾತ್ರೆ ತೆಗೆದುಕೊಳ್ಳುವ ವಿಚಾರ ತಿಳಿಸಿಲ್ಲ. ತಿಳಿಸದೇ ಮಹಿಳೆ ಗರ್ಭ ನಿರೋಧಕ ಮಾತ್ರೆಯನ್ನು ತಗೆದುಕೊಂಡಿದ್ದಾರೆ ಎನ್ನಲಾಗಿದೆ. ಮಾತ್ರೆ ತೆಗೆದುಕೊಂಡ ಕಾರಣ ಮಹಿಳೆಗೆ ಬ್ಲಿಡಿಂಗ್ ಆಗಿದೆ. ಬ್ಲೀಡಿಂಗ್ ನಿಲ್ಲದೆ, ಹೆಚ್ಚು ಬ್ಲೀಡಿಂಗ್ ಆಗುತ್ತಿದ್ದಂತೆ ಪತಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾರೆ.
ವಿಷಯ ತಿಳಿದ ಪತಿ ಕೂಡಲೇ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬ್ಲೀಡಿಂಗ್ ಹೆಚ್ಚಾಗಿ ಪ್ರೀತಿ ಕುಶ್ವಾಸ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಹಿಳೆಯ ಸಹೋದರ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನೂ ಕೇಸ್ ದಾಖಲಾಗಿದ್ದು, ಬೇಗೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.