12 ನಿಮಿಷದಲ್ಲಿ ಫುಲ್ ಚಾರ್ಜ್​ ಆಗುವ 200 ಮೆಗಾಪಿಕ್ಸೆಲ್​ ಕ್ಯಾಮೆರಾದ ಎರಡು ಸ್ಮಾರ್ಟ್ ಫೋನ್ ಬಿಡುಗಡೆ!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆಮಾಡದೆ ಇರುವವರೇ ವಿರಳ. ಅದರಲ್ಲಿ ಕೂಡ ಇತ್ತೀಚೆಗೆ ಹೊಸ ಹೊಸ ಫೀಚರ್ ಮೂಲಕ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದು ಕೂಡ ಬಂಪರ್ ಆಫರ್ ಜೊತೆಗೆ ಹೀಗಿದ್ದಾಗ ಹೊಸ ಮೊಬೈಲ್ ಕೊಳ್ಳುವ ಪ್ಲಾನ್ ಹಾಕಿದ್ದರೆ ಭರ್ಜರಿ ಕೊಡುಗೆ ನಿಮ್ಮದಾಗಿಸಿಕೊಳ್ಳಬಹುದು. ಅದು ಹೇಗೆ ಅಂತೀರಾ???

ಅದ್ಭುತ ಫೀಚರ್‌ಗಳನ್ನು ಒಳಗೊಂಡ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ವಿಶೇಷವಾಗಿ ಇದು 200 ಮೆಗಾಪಿಕ್ಸೆಲ್​ ಕ್ಯಾಮೆರಾವನ್ನು ಹೊಂದಿರಲಿದೆ. ಹಾಗಿದ್ರೆ ಆ ಎರಡು ಸ್ಮಾರ್ಟ್​ಫೋನ್​ಗಳು ಯಾವುದು ಎಂಬ ಮಾಹಿತಿ ಇಲ್ಲಿದೆ ನೋಡಿ:


ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುವ ಯೋಜನೆ ಹಾಕಿಕೊಂಡಿದ್ದರೆ , ಸ್ಮಾರ್ಟ್​​ಫೋನ್​ ಕಂಪನಿಯಿಂದ ನಿಮಗೆ ಗುಡ್ ನ್ಯೂಸ್ ಇದೆ. ಅದ್ಭುತ ಫೀಚರ್‌ಗಳನ್ನು ಒಳಗೊಂಡ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಸದ್ಯದಲ್ಲೇ ಕಾಲಿಡಲಿದೆ.

ಇನ್ಫಿನಿಕ್ಸ್​ ಮತ್ತು ರೆಡ್​​ಮಿ ಕಂಪನಿಗಳು ಮಾರುಕಟ್ಟೆಗೆ ವಿಶೇಷ ಫೀಚರ್ಸ್​ನೊಂದಿಗೆ 5G ಫೋನ್‌ಗಳನ್ನು ಬಿಡುಗಡೆ ಮಾಡಲು ಅಣಿಯಾಗಿದೆ. ಇನ್ಫಿನಿಕ್ಸ್​ ಕಂಪನಿ ಝೀರೋ ಅಲ್ಟ್ರಾ 5ಜಿ ಎಂಬ ಹೊಸ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ 200 ಮೆಗಾಪಿಕ್ಸೆಲ್​ ಕ್ಯಾಮೆರಾದೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಲಿದೆ. ಈ ಫೋನ್ 180 ವ್ಯಾಟ್ ಸೂಪರ್ ಫಾಸ್ಟ್ ಚಾರ್ಜಿಂಗ್ ಫೀಚರ್ಸ್​ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಕೇವಲ 12 ನಿಮಿಷಗಳಲ್ಲಿ ಈ ಫೋನ್‌ನ ಬ್ಯಾಟರಿ ಫುಲ್​ ಆಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಇದರ ವಿಶೇಷತೆಯೆಂದರೆ 180 ವ್ಯಾಟ್​ ಸೂಪರ್​​ ಫಾಸ್ಟ್​ ಚಾರ್ಜಿಂಗ್​​ ಬ್ಯಾಟರಿ ಹೊಂದಿದ ಮೊದಲ ಸ್ಮಾರ್ಟ್​ಫೋನ್​ ಇದಾಗಿದೆ.

ಕಂಪನಿಯು ಈಗಾಗಲೇ ಈ ಫೋನ್‌ನ ಟೀಸರ್ ಅನ್ನು ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿದೆ ಬಿಡುಗಡೆಯಾದ ಬಳಿಕ ಈ ಸ್ಮಾರ್ಟ್​​ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರಲಿದೆ.
ಇನ್ಫಿನಿಕ್ಸ್​ ಕಂಪನಿ ಝೀರೋ ಅಲ್ಟ್ರಾ 5ಜಿ ಎಂಬ ಹೊಸ ಫೋನ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಈಗಾಗಲೇ ಈ ಫೋನ್‌ನ ಟೀಸರ್ ಅನ್ನು ತನ್ನ ಗ್ರಾಹಕರಿಗೆ ತೋರಿಸಿದೆ.

ಬಿಡುಗಡೆಯಾದ ಬಳಿಕ ಈ ಸ್ಮಾರ್ಟ್​​ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ. ಡಿಸೆಂಬರ್ 20 ರಂದು ಈ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದರ ಬೆಲೆ ಸುಮಾರು 42 ಸಾವಿರ ರೂಪಾಯಿ ಎಂದು ಊಹಿಸಲಾಗಿದೆ.

ಈ ಸ್ಮಾರ್ಟ್ ಫೋನ್ 8ಜಿಬಿ RAM, 256 ಜಿಬಿ ಮೆಮೊರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದು 5G ಯಂತಹ ಇತರ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ 4500 mAh ಬ್ಯಾಟರಿ, 32 MP ಸೆಲ್ಫಿ ಕ್ಯಾಮೆರಾ, 6.8 ಇಂಚಿನ ಸ್ಕ್ರೀನ್​, ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಕೂಡ ಹೊಂದಿದೆ.

ಇದರ ಜೊತೆಗೆ , ಶಿಯೋಮಿ ರೆಡ್​ಮಿಯ ಹೊಸ ಸ್ಮಾರ್ಟ್​​ಫೋನ್​ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ರೆಡ್​ಮಿ ನೋಟ್​ 12 ಪ್ರೋ 5ಜಿ ಜನವರಿ 5 ರಂದು ಮಾರುಕಟ್ಟೆಗೆ ಈ ಸ್ಮಾರ್ಟ್​ಫೋನ್​ ಕಾಲಿಡಲಿದೆ ಎನ್ನಲಾಗಿದೆ.

ಇದು 200 ಮೆಗಾಪಿಕ್ಸೆಲ್​​ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ ಎನ್ನಲಾಗಿದೆ. ಶಿಯೋಮಿ ಈಗಾಗಲೇ ಈ ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದ್ದು, ಇದು ಮೀಡಿಯಾಟೆಕ್​ ಡಿಮೆನ್ಶಿಯಾ 1080 ಪ್ರೊಸೆಸರ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್​​ಫೋನ್​ ಭಾರತದಲ್ಲಿ ಬಿಡುಗಡೆಯಾದರೆ 23 ಸಾವಿರ ರೂಪಾಯಿಗೆ ಖರೀದಿ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಈ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಶಿಯೋಮಿ ಕಂಪನಿಯು ಇತರ ರೂಪಾಂತರಗಳನ್ನು ಸಹ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ರೆಡ್​ಮಿ ನೋಟ್​ 12, ರೆಡ್​ಮಿ ನೋಟ್​ 12 ಪ್ರೋ ಮತ್ತು ರೆಡ್​ಮಿ ನೋಟ್​ 12 ಪ್ರೋ ಪ್ಲಸ್​ ಎಂಬ ಮೂರು ಫೋನ್‌ಗಳು ಮಾರುಕಟ್ಟೆಗೆ ಬರಲಿವೆ ಎನ್ನಲಾಗಿದ್ದು, ಮೊಬೈಲ್ ಪ್ರಿಯರಿಗೆ ಹೊಸ ಆಫರ್ ಮೂಲಕ ಹೊಸ ಫೀಚರ್ ಮೊಬೈಲ್ ಕೊಳ್ಳಬಹುದಾಗಿದೆ.

Leave A Reply

Your email address will not be published.