Indian Railways : ರೈಲು ಟಿಕೆಟ್ ದರ ಏರಿಕೆ?

ರೈಲು ಪ್ರಯಾಣಿಕರಿಗೆ ಇದೀಗ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಇಂದು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮುಂದಿನ ದಿನಗಳಲ್ಲಿ ರೈಲು ಪ್ರಯಾಣ ದರವನ್ನು ಹೆಚ್ಚಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಚಿವರ ಈ ಹೇಳಿಕೆಯಿಂದ ಮುಂಬರುವ ದಿನಗಳಲ್ಲಿ ರೈಲ್ವೇ ಟಿಕೆಟ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

 

ಲೋಕಸಭೆಯಲ್ಲಿ, ಕೋವಿಡ್ -19 ಕ್ಕಿಂತ ಮೊದಲು ಹಿರಿಯ ನಾಗರಿಕರಿಗೆ ರೈಲ್ವೇ ಟಿಕೆಟ್ ದರದಲ್ಲಿ ರಿಯಾಯಿತಿಯನ್ನು ಮರು ಪರಿಚಯಿಸುವ ಬಗ್ಗೆ ರೈಲ್ವೆ ಸಚಿವರ ಬಳಿ ಕೇಳಲಾಯಿತು. ಈ ಬಗ್ಗೆ ರೈಲ್ವೆ ಸಚಿವರು, ಇದೀಗ ಟ್ರಯಲ್ ಮೂಲಕ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೆ ಶೇ. 55 ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಹಾಗೇ ಇದೀಗ ಟಿಕೆಟ್ ದರದಲ್ಲಿ ಪ್ರತಿ ಕಿ.ಮೀ.ಗೆ ರೈಲ್ವೇ ವೆಚ್ಚ ಸುಮಾರು 1.16 ರೂ. ಇದ್ದು, ಇದಕ್ಕೆ ರೈಲ್ವೆ ಪ್ರತಿ ಕಿ.ಮೀ.ಗೆ ಕೇವಲ 45 ರಿಂದ 48 ಪೈಸೆ ವಿಧಿಸುತ್ತಿದ್ದರೆ. ಕಳೆದ ವರ್ಷದ ಟಿಕೇಟ್ ದರದ ಬಗ್ಗೆ ವಿವರ ನೀಡಿದ ಅವರು, ಟಿಕೇಟ್ ದರದಲ್ಲಿ ರೈಲ್ವೆಯಿಂದ 59 ಸಾವಿರ ಕೋಟಿ ರೂ.ಗಳ ಸಬ್ಸಿಡಿ ನೀಡಲಾಗಿದೆ.

ರೈಲು ಪ್ರಯಾಣಿಕರ ಸೌಲಭ್ಯಗಳ ಕುರಿತಾಗಿ ರೈಲ್ವೆ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ರೈಲುಗಳ ಕಾರ್ಯಾಚರಣೆ ಒಳಗೊಂಡಂತೆ ರೈಲು ಮಾರ್ಗವನ್ನು ವಿಸ್ತರಣೆ ಮಾಡಲಾಗುತ್ತಿದೆ. ಹಾಗಾಗಿ ಜನರು ರೈಲ್ವೆಯ ಸ್ಥಿತಿಯನ್ನು ಗಮನಿಸಬೇಕು ಎಂದು ಹೇಳಿದರು.

ಹಾಗೇ ಮುಂಬರುವ ದಿನಗಳಲ್ಲಿ ರೈಲ್ವೇ ಪ್ರಯಾಣಿಕರಿಗೆ ಹಲವು ನೂತನ ಸೌಲಭ್ಯಗಳು ಬರಲಿವೆ ಎಂದಿದ್ದಾರೆ. ರೈಲು ಟಿಕೇಟ್ ದರ ಏರಿಕೆಯನ್ನು ಸೂಚಿಸಿ, ಮುಂಬರುವ ದಿನಗಳಲ್ಲಿ ಹೆಚ್ಚಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. ಇದೀಗ ದೊಡ್ಡ ನಿಲ್ದಾಣಗಳ ಜೊತೆಗೆ ಬೇರೆ ನಿಲ್ದಾಣಗಳಲ್ಲೂ ಕೆಲಸ ಆಗುತ್ತಿದೆ. ರೈಲ್ವೇ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಬಹುದೊಡ್ಡ ದೃಷ್ಟಿಕೋನವಿದೆ ಎಂದು ಸಚಿವರು ಹೇಳಿದರು.

Leave A Reply

Your email address will not be published.