ಮಹಿಳೆಯರ ಒಳಉಡುಪು, ಬಿಂದಿ, ಸೀರೆ ಧರಿಸಿ SSLC ವಿದ್ಯಾರ್ಥಿ ಆತ್ಮಹತ್ಯೆ

Share the Article

ಕೆಲವೊಂದು ಘಟನೆಗಳು ನಮ್ಮ ಊಹೆಗೂ ಮೀರಿ ನಡೆಯುತ್ತವೆ ಅನ್ನೋದಕ್ಕೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಹೌದು ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ವಿಚಿತ್ರ ರೀತಿಯಲ್ಲಿ ಮರಣವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದ ಸಿಲಿಗುರಿಯ ಶಾಂತಿನಗರ ಎಂಬ ಪ್ರದೇಶದಲ್ಲಿನ ಮನೆಯೊಂದರಲ್ಲಿ ಸೋಮವಾರ ರಾತ್ರಿ ಬಾಲಕನೊಬ್ಬ ಕಿರುಚಿಕೊಂಡ ಸದ್ದು ಕೇಳಿ ನೆರೆಮನೆಯವರು ಓಡಿ ಹೋಗಿ ನೋಡಿದ್ದರು. ಆಗ ಹುಡುಗನೊಬ್ಬ ನೇಣು ಹಾಕಿಕೊಂಡು ಸಾವಿಗೀಡಾಗಿದ್ದುದು ಕಂಡುಬಂದಿತ್ತು. ವಿಚಿತ್ರವೆಂದರೆ ಆತ ಸೀರೆ, ಬಿಂದಿ, ಬಳೆ ಧರಿಸಿದ್ದಲ್ಲದೆ, ಮಹಿಳೆಯ ಒಳ ಉಡುಪನ್ನೂ ಹಾಕಿಕೊಂಡಿರುವುದು ಗಮನಕ್ಕೆ ಬಂದಿತ್ತು. ಈತ ಸಿಲಿಗುರಿಯ ಬರದಕಂಠ ವಿದ್ಯಾಪೀಠದಲ್ಲಿ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.

ಪಕ್ಕದ ಮನೆಯ ಬಿಸ್ವಜೀತ್ ದಾಸ್ ಪ್ರಕಾರ ಸಾವಿಗೀಡಾದ ವಿದ್ಯಾರ್ಥಿಯನ್ನು ಈ ಹಿಂದೆ ನೋಡಿದ್ದರೂ ಆತ ಹುಡುಗಿಯ ಥರ ವರ್ತಿಸಿದ್ದನ್ನು ಎಂದೂ ಕಂಡಿರಲಿಲ್ಲ. ಸಭ್ಯನಂತೆಯೇ ಇದ್ದಿದ್ದ ಈ ಹುಡುಗ ಯಾವತ್ತೂ ಮದ್ಯಪಾನ ಅಥವಾ ಇನ್ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿದ್ದನ್ನೂ ಗಮನಿಸಿಲ್ಲ ಎಂದು ಹೇಳಿದ್ದಾರೆ.

ಈ ಯುವಕನ ಅಣ್ಣ ಕೆಲವು ವರ್ಷಗಳ ಹಿಂದೆ ಹೀಗೆ ಹಠಾತ್ ಆಗಿ ಸಾವಿಗೀಡಾಗಿದ್ದ ಎಂದೂ ಸ್ಥಳೀಯರು ಹಾಗೂ ಕುಟುಂಬಸ್ಥರು ನೆನಪಿಸಿಕೊಂಡಿದ್ದಾರೆ.

ಸ್ಥಳೀಯರು ಸಾವಿನ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪೊಲೀಸ್ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಹುಡುಗ ಮನೆಯಲ್ಲಿ ಒಂಟಿಯಾಗಿದ್ದ. ಹಾಗೂ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಕುರಿತ ವಿಚಿತ್ರ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ್ ವಿಚಾರಣೆ ನಂತರ ತಿಳಿದು ಬರಬೇಕಿದೆ.

Leave A Reply