“ಕೇಸರಿ ಬಿಕಿನಿಯಲ್ಲಿ ಆಕೆ, ಹಸಿರು ಬಟ್ಟೆಯಲ್ಲಿ ಆತ” – ಲವ್ ಜಿಹಾದ್ ಪ್ರೋತ್ಸಾಹದ ಜತೆಗೆ ಕೇಸರಿ ಬಣ್ಣವನ್ನು “ನಾಚಿಕೆಯಿಲ್ಲದ ಬಣ್ಣ” ಎಂದ ಶಾರುಖ್ ಖಾನ್ ಸಿನಿಮಾ !
ಖಾನ್ ಗಳು ಮತ್ತೆ ಹಿಂದೂ ಧರ್ಮವನ್ನು ತಡವಿಕೊಂಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಕೇಸರಿ ಬಣ್ಣವನ್ನು ‘ ಬೇಶರಮ್ ಬಣ್ಣ ‘, ಅಂದ್ರೆ ‘ನಾಚಿಕೆಯಿಲ್ಲದ ಬಣ್ಣ’ ಎಂದು ಕರೆಯಲಾಗಿದೆ. ಈಗ ಆ ನಿಮಿತ್ತ ವಿವಾದವೊಂದು ದೊಡ್ಡದಾಗಿ ಎದ್ದಿದೆ.ಪಠಾಣ್ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಧರಿಸಿದ್ದ ಬಿಕಿನಿ ಬಣ್ಣ ಕುರಿತಂತೆ ವಿವಾದ ಎದ್ದಿದ್ದು, ಸಿನೆಮಾವನ್ನು ಬಾಯ್ಕಾಟ್ ಮಾಡುವಂತೆ ಹಿಂದೂ ಪರ ಕಾರ್ಯಕರ್ತರು ಗೆ ಕರೆ ನೀಡಿದ್ದಾರೆ.
ಅಲ್ಲದೆ, ಚಿತ್ರದ ಈ ಹಾಡಿನ ಬಗ್ಗೆ ಹಲವು ನೆಗೆಟಿವ್ ಕಾಮೆಂಟುಗಳು ಬಂದಿವೆ. ಪಠಾಣ್ ಚಿತ್ರದಲ್ಲಿ “ಕೇಸರಿ ಬಟ್ಟೆಯಲ್ಲಿ ಹುಡುಗಿ, ಹಸಿರು ಬಟ್ಟೆಯಲ್ಲಿ ಹುಡುಗ” ಇದುವೇ ಲವ್ ಜಿಹಾದ್ ಸಂದೇಶ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಕೇಸರಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆಯ ದೇಹದ ಮೂಲೆ-ಕೋಣೆ- ಕೋವೆಗಳಲ್ಲಿ ಕ್ಯಾಮೆರಾವು ನಿರ್ಲಜ್ಜವಾಗಿ ಹರಿದಾಡಿದೆ. ಶಾರುಖ್ ಖಾನ್ ದೀಪಿಕಾ ಪಡುಕೋಣೆಯನ್ನು ಚಿತ್ರದ ‘ ಬೇಶರಾಮ್ ರಂಗ್ ‘ ಹಾಡಿನಲ್ಲಿ ಎಳೆದಾಡಿ ಉಜ್ಜಾಡಿದಂತೆ ಅತ್ಯಂತ ಸೆಕ್ಸಿ ಆಗಿ ಚಿತ್ರಿಸಲಾಗಿದ್ದು ಚಿತ್ರ ಕಂಡಾಗ ರಂಗೀಲಾದ ಊರ್ಮಿಳಾ ಮಾತೋಂಡ್ಕರ್ ಳ ನೆನಪು ಬರ್ತಿದೆ.
‘ಬೇಷರಂ ರಂಗ್..’ ಗೀತೆಯನ್ನು ಗ್ಲಾಮರಸ್ ಆಗಿ ಚಿತ್ರಿಸಲಾಗಿದೆ. ಇದೊಂದು ‘ಅಶ್ಲೀಲ ಸಾಂಗ್’ ಎಂದು ನೆಟ್ಟಿಗರು ಹಣೆಪಟ್ಟಿ ಕಟ್ಟುತ್ತಿದ್ದಾರೆ. ‘ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಬೇಷರಮ್ ರಂಗ್ (ನಾಚಿಕೆಯಿಲ್ಲದ ಬಣ್ಣ) ಎಂದಿರುವುದು ಖಂಡನೀಯ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಬಾಲಿವುಡ್ ಗೆ ಕೇವಲ ಹೆಣ್ಣನ್ನು ಅಶ್ಲೀಲವಾಗಿ ಚಿತ್ರಿಸುವುದು ಮಾತ್ರ ಗೊತ್ತು. ಅದಕ್ಕೇ ಈಗ ಬಾಲಿವುಡ್ ಈ ರೀತಿ ಇದೆ. ಎಲ್ಲಾ ಚಿತ್ರರಂಗಗಳು ಬೆಳೆಯುತ್ತಿದ್ದರೆ, ಬಾಲಿವುಡ್ ಮಾತ್ರ ಕುಗ್ಗಿ ಹೋಗುತ್ತಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಕೆಲವರು, ಪರಿಶುದ್ಧತೆಯ ಮತ್ತು ತ್ಯಾಗದ ಸಂಕೇತವಾಗಿರುವ ಕೇಸರಿಯನ್ನು ಹೀನ ಮಟ್ಟಕ್ಕೆ ಇಳಿಸಿದ ಬಾಲಿವುಡ್ ಬಗ್ಗೆ ಕ್ರೋದಗೊಂಡು ಹಲವರು ಟ್ರೀಟ್ ಮಾಡುತ್ತಿದ್ದಾರೆ.ಶಾರುಖ್ ಖಾನ್ ಹೊಸ ಸಿನಿಮಾ ‘ಪಠಾಣ್’ ಬಿಡುಗಡೆಗೆ ಸಜ್ಜಾಗುವ ಈ ಹೊತ್ತಿನಲ್ಲಿ ಚಿತ್ರಕ್ಕೆ ಬಾಯ್ ಕಾಟ್ ಟ್ರೆಂಡ್ ಶುರುವಾಗಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ #BoycottPathaan ಎಂಬ ಟ್ರೆಂಡ್ ಶುರುವಾಗಿದೆ. ಇದು ಹೀಗೆಯೇ ಮುಂದುವರಿದರೆ ‘ಪಠಾಣ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ.