Kantara : ದೈವದ ಕೂಗು ಕಾಮಿಡಿ ಆಗೋಯ್ತಾ? ರಿಷಬ್ ಶೆಟ್ಟಿ ಮಾತು ಇನ್ನೂ ಜನರಿಗೆ ತಲುಪಿಲ್ವೇ ?
ಕನ್ನಡದ ಹಿಟ್ ಸಿನಿಮಾದಲ್ಲಿ ಕಾಂತಾರ ತನ್ನ ಪಾರುಪತ್ಯ ಕಾಯ್ದು ಕೊಂಡಿದೆ. ತುಳುನಾಡಿನ ಆಚರಣೆ, ಸಂಸ್ಕೃತಿಯನ್ನು ಬಿಂಬಿಸುವ ಈ ಸಿನಿಮಾದಲ್ಲಿ ಪಂಜುರ್ಲಿ ದೈವದ ಪಾತ್ರವನ್ನು ರಿಷಬ್ ಶೆಟ್ಟಿ ಅವರು ತುಂಬಾ ಶ್ರದ್ಧೆಯಿಂದ ಜೊತೆಗೆ ನೋಡುಗರ ಮೈಮನ ರೋಮಾಂಚನ ಗೊಳಿಸುವಂತೆ ನಟಿಸಿದ್ದಾರೆ.
ಆದರೆ, ಈ ಸಿನಿಮಾ ಬಿಡುಗಡೆಯಾದ ಬಳಿಕ ಏಷ್ಟೋ ಮಂದಿ ದೈವದ ಪ್ರತಿರೂಪ ಎಂಬಂತೆ ರಿಷಬ್ ಶೆಟ್ಟಿ ಅವರ ಕಾಲು ಹಿಡಿಯಲು ಕೂಡ ಮುಂದಾಗಿದ್ದು ಅದನ್ನು ಅಷ್ಟೆ ನಯವಾಗಿ ಶೆಟ್ರು ತಿರಸ್ಕರಿಸಿದ್ದು ಕೂಡ ಇದೆ. ಆದರೆ, ಇದೀಗ,ಪಂಜುರ್ಲಿ ದೈವದ ಕೂಗು ನೋಡುಗರ ಪಾಲಿಗೆ ತಮಾಷೆಯ ವಿಷಯವಾಗಿ ಮಾರ್ಪಟ್ಟಿದೆಯಾ??? ಕಾಂತಾರ ನೋಡಿದ್ಮೇಲೆ ಏನ್ ಆಗ್ತಿದೆ ಈ ಜನರಿಗೆ ಎಂಬ ಪ್ರಶ್ನೆ ಬುಗಿಲೆದ್ದಿದಿದೆ.
ಇದೀಗ, ಕಾಂತಾರ ದೈವದ ಕೂಗಿನ ರೀಲ್ಸ್ ಹೆಚ್ಚು ವೈರಲ್ ಆಗುತ್ತಿದ್ದು, ಇದನ್ನು ಮತ್ತಷ್ಟು ವೈರಲ್ ಮಾಡಿ ದೈವದ ಪಾತ್ರವನ್ನು ತಪ್ಪಾಗಿ ಬಿಂಬಿಸುವ ಷಡ್ಯಂತ್ರ ಕೂಡ ನಡೆಯುತ್ತಿದ್ದು, ಫೇಕ್ ಟ್ವಿಟರ್ ಅಕೌಂಟ್ ಮಾಡಿಕೊಳ್ಳುತ್ತಿದ್ದಾರಾ?? ಆದರೆ, ಸಪ್ತಮಿ ಗೌಡ ಹೆಸರಿನ ಜೊತೆಗೆ ಅವರ ಫೋಟೊ ಇರೋ ಅಕೌಂಟ್ ಮೂಲಕ ಒಂದು ವೀಡಿಯೋ ಶೇರ್ ಆಗಿದೆ.
ಕನ್ನಡದ ಕಾಂತಾರ (Kantara movie) ಸಿನಿಮಾದಲ್ಲಿ ಸಾಕಷ್ಟು ಸೂಕ್ಷ್ಮ ವಿಷಯಗಳನ್ನು ಕೂಡ ಒಳಗೊಂಡಿದ್ದು, ಅವುಗಳಲ್ಲಿ ಪ್ರಮುಖವೆನಿಸುವ ದೈವದ ಶಕ್ತಿ ಹಾಗೂ ನೋಡುಗರ ಮನದಲ್ಲಿ ಭಯ ಭಕ್ತಿ ಸೃಷ್ಟಿಸುವ ದೈವ ಕೂಗು ಒಮ್ಮೆ ನೋಡುಗರನ್ನು ದಿಗ್ಭ್ರಮೆಗೊಳಿಸುತ್ತದೆ.
ಕಾಂತಾರ ಸಿನಿಮಾದ ಹಾಡು ಎಷ್ಟು ಸಂಚಲನ ಮೂಡಿಸಿತ್ತೋ ಅಷ್ಟೆ ಮಟ್ಟಿಗೆ ದೈವದ ಕೂಗು ಕೂಡ ದೇಶದ್ಯಂತ ತನ್ನದೇ (Kantara Viral) ಟ್ರೆಂಡ್ ಕ್ರಿಯೇಟ್ ಮಾಡಿದೆ. ಈ ಒಂದು ಕೂಗು ಸಿನಿಮಾ ರಿಲೀಸ್ ಆದ ದಿನದಿಂದಲೂ ಹೆಚ್ಚು ವೈಬ್ ಕ್ರಿಯೆಟ್ ಮಾಡಿದ್ದು ಸುಳ್ಳಲ್ಲ. ಸಿನಿಮಾ ಬಿಡುಗಡೆಯಾದ ಕೂಡಲೇ, ದೈವದ ಕೂಗನ್ನು ಎಲ್ಲರೂ ಕೂಗಬೇಡಿ, ಕೂಗಿ ಅವಮಾನಿಸಬೇಡಿ ಎಂದು ರಿಷಬ್ (Rishab Shetty) ಶೆಟ್ಟಿ ಮನವಿ ಕೂಡ ಮಾಡಿದ್ದರು.
ಯಾರೇನೇ ಅಂದರೂ ಕ್ಯಾರೇ ಎನ್ನದೆ, ಅನೇಕರು ಈ ಪ್ರಯತ್ನ ಮಾಡಿದ್ದಾರೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತನ್ನ ಹೆಂಡ್ತಿಯನ್ನು ಹೆದರಿಸುವ ನಿಟ್ಟಿನಲ್ಲಿ ದೈವದ ಕೂಗ ಅನುಕರಿಸಿದ್ದು, ದೈವವನ್ನೂ ನಂಬುವ ಜನತೆಯ ನಂಬಿಕೆಯನ್ನು ಪ್ರಶ್ನಿಸುವ ರೀತಿಯಲ್ಲಿ ಕಂಡು ಬಂದಿದ್ದು, ಸದ್ಯ ವೀಡಿಯೋ ವೈರಲ್ ಆಗುತ್ತಿದೆ..
ತುಳುನಾಡಿನ ಜನ ಭಕ್ತಿಯಿಂದ ಆರಾಧಿಸುವ ದೈವದ ಬಗ್ಗೆ ದೈವದ ಕೂಗನ್ನು ಎಂದಿಗೂ ಅನುಕರಿಸಿ ಅವಮಾನಿಸೋದಿಲ್ಲ. ಕಾಂತಾರ ಸಿನಿಮಾ ತುಳುನಾಡಿನ ಆಚರಣೆ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಆದರೆ ಜನ ಮಾತ್ರ ವೈರಲ್ ಅನಿಸೋ ಕಂಟೆಂಟ್ ಎತ್ತಿಕೊಂಡು ರೀಲ್ಸ್ ಮಾಡುವುದರಲ್ಲಿ ನಿರತರಾಗಿದ್ದಾರೆ.ಕೆಲವೊಮ್ಮೆ ಏನೋ ಅರಿಯದ ಮಕ್ಕಳು ತಪ್ಪು ಮಾಡಿದಾಗ ಬುದ್ದಿ ಹೇಳಿ ಸರಿ ಮಾಡಬಹುದು. ಆದರೆ, ದೊಡ್ಡವರೆ ತಿಳಿದು ತಿಳಿದು ತಪ್ಪು ಮಾಡಿದರೆ ಏನು ಮಾಡಲು ಸಾಧ್ಯ??
ಕಾಂತಾರ ಸಿನಿಮಾದ ದೈವದ ಕೂಗು ಎಲ್ಲರಲ್ಲಿ ಒಂದು ಭಯ ಹುಟ್ಟಿಸುತ್ತದೆ. ಅದರ ಬೆನ್ನಲ್ಲಿಯೇ ಭಕ್ತಿ-ಭಾವವನ್ನೂ ಹುಟ್ಟಿಸೋದು ಇದೆ. ಇಂತಹ ಕೂಗು ದೈವಕ್ಕೆ ಮಾತ್ರ ಸೀಮಿತ. ಇದನ್ನ ಎಲ್ಲರೂ ಕೂಗಬೇಡಿ. ಕೂಗಿ ಅವಮಾನಿಸಬೇಡಿ ಎಂದು ರಿಷಬ್ ಅನೇಕ ಬಾರಿ ಮನವಿ ಮಾಡಿಕೊಂಡರು ಕೂಡ ಜನತೆ ದೈವ ವನ್ನೂ ತಮಾಷೆಯ ವಿಷಯವಾಗಿ ಪರಿಗಣಿಸುತ್ತಿರುವುದು ವಿಪರ್ಯಾಸ.
ಕಾಂತಾರ ಚಿತ್ರದ ದೈವದ ಕೂಗನ್ನು ಅನುಕರಿಸಿರೋ ಒಂದು ರೀಲ್ಸ್ ಕಳೆದ ಒಂದು ವಾರದಿಂದಲೇ ಹರಿದಾಡುತ್ತಿದ್ದು, ಎಲ್ಲೆಡೆ ಇದು ಅಷ್ಟೇ ವೈರಲ್ ಆಗಿ ಸಂಚಲನ ಮೂಡಿಸಿದೆ. ಇಂತಹ ವೀಡಿಯೋ ಚಿತ್ರದ ನಾಯಕಿ ಸಪ್ತಮಿ ಗೌಡ ಹೆಸರಿನ ಟ್ವಿಟರ್ ಪೇಜ್ನಲ್ಲೂ ಕೂಡ ಶೇರ್ ಆಗಿಬಿಟ್ಟಿದೆ. ಇಂತಹ ಒಂದು ರೀಲ್ಸ್ ಹೆಚ್ಚು ಗಮನ ಸೆಳೆಯುತ್ತಿದ್ದು, ಕಾಂತಾರ ಸಿನಿಮಾದ ದೈವದ ಕೂಗು ಕೂಗುತ್ತಲೇ, ಮಲಗಿದ್ದ ಹೆಂಡತಿಯನ್ನು ಹೆದರಿಸುವ ವೀಡಿಯೋ ಈ ರೀಲ್ಸ್ ನಲ್ಲಿ ಕಂಡುಬರುತ್ತಿದೆ.
ಕಾಂತಾರ ದೈವದ ಕೂಗಿನ ರೀಲ್ಸ್ ಹೆಚ್ಚು ವೈರಲ್ ಆಗಿದೆ. ಇದನ್ನ ಇನ್ನಷ್ಟು ವೈರಲ್ ಮಾಡೋಕೆ ಫೇಕ್ ಟ್ವಿಟರ್ ಅಕೌಂಟ್ ಮಾಡಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಸಪ್ತಮಿ ಗೌಡ ಹೆಸರಿನ ಜೊತೆಗೆ ಅವರ ಫೋಟೋ ಇರೋ ಅಕೌಂಟ್ ನಲ್ಲಿಯೇ ಈ ಒಂದು ವೀಡಿಯೋ ಶೇರ್ ಆಗಿದೆ.
The Vibe After Watching Kantara ಎನ್ನುವ ಟೈಟಲ್ ಕೂಡ ಈ ಒಂದು ವೀಡಿಯೋದಲ್ಲಿ ಶೇರ್ ಆಗಿದ್ದು, ಇದು ಸಪ್ತಮಿ ಗೌಡ ಹೆಸರಿನ ಟ್ವಿಟರ್ ನಲ್ಲಿಯೇ ಶೇರ್ ಆಗಿದ್ದು, ಎಲ್ಲರಿಗೆ ಅಚ್ಚರಿ ಮೂಡಿಸಿದೆ
ಸಿನಿಮಾ ಬಿಡುಗಡೆಯಾದ ಬಳಿಕ ಅದೆಷ್ಟು ಬಾರಿ ರಿಷಬ್ ಶೆಟ್ಟಿ ಅವರು ಮನವಿ ಮಾಡಿದರು ಕೂಡ ಜನತೆಯ ಕಿವಿಗೆ ತಲುಪಿಲ್ಲವೆ?? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಜನತೆ ದೈವದ ಬಗ್ಗೆ ಇಷ್ಟು ಅಸಡ್ಡೆ ತೋರುತ್ತಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿವೆ.