ಫ್ಲಿಪ್‌ ಕಾರ್ಟ್‌ನಲ್ಲಿ ಭರ್ಜರಿ ಸೇಲ್‌ | ಸ್ಮಾರ್ಟ್‌ಫೋನ್‌ಗಳ ಮೇಲೆ ಅಮೋಘ ರಿಯಾಯಿತಿ | ಈ ಅವಕಾಶ ಡಿ.21 ರವರೆಗೆ ಮಾತ್ರ

ಇತ್ತೀಚಿಗೆ ಫ್ಲಿಪ್​ಕಾರ್ಟ್ ನಲ್ಲಿ ಸ್ಮಾರ್ಟ್ ಫೋನ್ ಗಳ ಮೇಲಿನ ಆಫರ್ ಹೆಚ್ಚಾಗಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಹಾಗೇ ಇದೀಗ ಫ್ಲಿಪ್​ಕಾರ್ಟ್ ನಲ್ಲಿ ಕೆಲವು ಸ್ಮಾರ್ಟ್​​ಫೋನ್​ಗಳು ಭರ್ಜರಿ ಆಫರ್ಸ್​ನೊಂದಿಗೆ ಲಭ್ಯವಾಗಲಿದೆ. ಇನ್ನೂ, ಈ ಆಫರ್ ಡಿಸೆಂಬರ್ 16ರಿಂದ ಆರಂಭವಾಗಲಿದ್ದು, ಡಿಸೆಂಬರ್ 21 ಕ್ಕೆ ಅಂತ್ಯವಾಗಲಿದೆ ಎಂದು ಹೇಳಲಾಗಿದೆ.

 

ಈ ಫ್ಲಿಪ್​ಕಾರ್ಟ್​ ಬಿಗ್​ ಸೇವಿಂಗ್​ ಡೇಸ್​ ಸೇಲ್​ನಲ್ಲಿ ಸ್ಮಾರ್ಟ್​​ಫೋನ್​ಗಳು, ಲ್ಯಾಪ್​ಟಾಪ್​ಗಳು, ಎಲೆಕ್ಟ್ರಾನಿಕ್ಸ್​ ಸಾಧನಗಳು, ಗ್ಯಾಜೆಟ್​ಗಳನ್ನು ರಿಯಾಯಿತಿ ದರದೊಂದಿಗೆ ಖರೀದಿ ಮಾಡಬಹುದಾಗಿದೆ. ಹಾಗೇ ಈ ಸೇಲ್​ನಲ್ಲಿ ರಿಯಲ್​ಮಿ, ಒಪ್ಪೋ, ಸ್ಯಾಮ್​ಸಂಗ್​, ಆ್ಯಪಲ್​ ಕಂಪನಿಯ ಸ್ಮಾರ್ಟ್​​ಫೋನ್​ಗಳು ಕೂಡ ಭರ್ಜರಿ ಆಫರ್ ​ನಲ್ಲಿ ಲಭ್ಯವಾಗಲಿದೆ. ಇನ್ನೂ ರಿಯಾಯಿತಿ ದರದಲ್ಲಿ ಲಭ್ಯವಾಗುವ ಸ್ಮಾರ್ಟ್​​ಫೋನ್​ಗಳು ಯಾವುದೆಲ್ಲಾ? ಅದರ ಫೀಚರ್ಸ್ ಹೇಗಿದೆ? ಬೆಲೆ ಎಷ್ಟು? ಇದರ ಬಗ್ಗೆ ಮಾಹಿತಿ ತಿಳಿಯೋಣ.

ಪೋಕೋ ಎಫ್​4 5ಜಿ: ಫ್ಲಿಪ್​ಕಾರ್ಟ್​ ಆಫರ್ಸ್​ನಲ್ಲಿ ಈ ಸ್ಮಾರ್ಟ್​ಫೋನ್​ ಕೇವಲ 22,999 ರೂಪಾಯಿಯ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಇದು 6ಜಿಬಿ ರ್‍ಯಾಮ್ ಮತ್ತು 128 ಇಂಟರ್ನಲ್​ ಸ್ಟೋರೇಜ್​ ಅನ್ನು ಹೊಂದಿದೆ. ಹಾಗೇ ಪೋಕೋ ಎಫ್4 5ಜಿ ಸ್ಮಾರ್ಟ್​ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 870 5G ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ. ಮತ್ತು 120 Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದ್ದು, ನೀವು ಈ ಸ್ಮಾರ್ಟ್​​ಫೋನ್ ಅನ್ನು ಬ್ಯಾಂಕ್ ಡೆಬಿಟ್​ ಕಾರ್ಡ್​ ಮೂಲಕ ಕೂಡ ಖರೀದಿ ಮಾಡಬಹುದಾಗಿದೆ.

ಪೋಕೋ ಎಕ್ಸ್​4 ಪ್ರೋ 5ಜಿ: ಈ ಫೋಕೋ ಎಕ್ಸ್​4 ಪ್ರೋ 5ಜಿ ಸ್ಮಾರ್ಟ್​​ಫೋನ್ ನ ಬೆಲೆ 14,499 ರೂಪಾಯಿ ಆಗಿದೆ. ಈ ಸ್ಮಾರ್ಟ್​ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 695 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸಲಿದ್ದು, 120Hz ರಿಫ್ರೆಶ್ರೇಟ್​ನೊಂದಿಗೆ 6.67-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಇದೆ. ಹಾಗೂ ಸೆಲ್ಫಿ ಕ್ಯಾಮೆರಾವನ್ನು 16 ಮೆಗಾಪಿಕ್ಸೆಲ್​ನಿಂದ ರಚಿಸಲಾಗಿದೆ.

ಪೋಕೋ ಎಮ್​4 5ಜಿ: ಈ ಸ್ಮಾರ್ಟ್​ಫೋನ್ ಅನ್ನು ಫ್ಲಿಪ್​ಕಾರ್ಟ್​ ಆಫರ್ಸ್​ನಲ್ಲಿ ಕೇವಲ 10,249 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 700ಎಸ್​​ಒಸಿ ನಿಂದ ಕಾರ್ಯನಿರ್ವಹಿಸುತ್ತದೆ. ಹಾಗೇ 5000mAh ಬ್ಯಾಟರಿ ಬ್ಯಾಕಪ್​ ಸಾಮರ್ಥ್ಯವನ್ನು ಹೊಂದಿದ್ದು, ಇದು 2MP ಡೆಪ್ತ್ ಸೆನ್ಸಾರ್‌ನೊಂದಿಗೆ 50MP ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾವನ್ನು 8MP ನಿಂದ ರಚಿಸಲಾಗಿದೆ.

ಪೋಕೋ ಸಿ31 ಸ್ಮಾರ್ಟ್​ಫೋನ್: ಇನ್ನೂ ಪೋಕೋ ಸಿ31 ಸ್ಮಾರ್ಟ್​ಫೋನ್ ಇದು 3GB RAM ಮತ್ತು 32GB ಇಂಟರ್​ನಲ್​ ಸ್ಟೋರೇಜ್​ ಹೊಂದಿದ್ದು, ಕೇವಲ 6,499 ರೂಪಾಯಿಯ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್ ಫೋನ್ ಮೀಡಿಯಾಟೆಕ್ ಹೀಲಿಯೋ ಜಿ35 SoC ನಿಂದ ಕಾರ್ಯನಿರ್ವಹಿಸುತ್ತದೆ. ಹಾಗೇ 6.53 ಇಂಚಿನ ಐಪಿಎಸ್​ ಎಲ್​ಸಿಡಿಇ ಡಿಸ್​​ಪ್ಲೇಯನ್ನು ಹೊಂದಿದೆ. 5000mAh ಬ್ಯಾಟರಿಯನ್ನು ಹೊಂದಿದ್ದು, 10 ವ್ಯಾಟ್​ ವೇಗದಲ್ಲಿ ಬ್ಯಾಟರಿ ಚಾರ್ಜ್​ ಆಗುವಂತಹ ಸಾಮರ್ಥ್ಯವನ್ನು ಕೂಡ ಹೊಂದಿರುವುದಾಗಿದೆ.

Leave A Reply

Your email address will not be published.