ಈ ಟೆಲಿಕಾಂ ಕಂಪನಿ ಕೇವಲ 225ರೂ.ನಲ್ಲಿ ಕೊಡುತ್ತಿದೆ ಲೈಫ್ ಟೈಮ್ ವ್ಯಾಲಿಡಿಟಿ |ಒಮ್ಮೆ ರೀಚಾರ್ಜ್ ಮಾಡಿ ಆಮೇಲೆ ಟೆನ್ಶನೇ ಇಲ್ಲ
ಇದೀಗ ಟೆಲಿಕಾಂ ಕಂಪನಿಯೊಂದು ಲೈಫ್ಟೈಮ್ ರೀಚಾರ್ಜ್ ಪ್ಲಾನ್ ಅನ್ನು ಕೇವಲ 225 ರೂಪಾಯಿಗೆ ಲಭ್ಯವಾಗುವಂತೆ ಮಾಡಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಹಲವಾರು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿವೆ. ಈ ಟೆಲಿಕಾಂ ಕಂಪನಿಗಳು ನಿರಂತರವಾಗಿ ತಮ್ಮ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ, ವಿವಿಧ ರೀತಿಯ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತಿವೆ.
ಇತ್ತೀಚಿನ ದಿನಗಳಲ್ಲಿ ಜಿಯೋ ಮಾತ್ರವಲ್ಲದೆ, ಏರ್ಟೆಲ್, ವಿಐ, ಬಿಎಸ್ಎನ್ಎಲ್, MTN LO ಕೂಡ ತಮ್ಮ ಬಳಕೆದಾರರಿಗೆ ಆಫರ್ ನೀಡುತ್ತಿವೆ. ಸದ್ಯ MTN LO ತಮ್ಮ ಗ್ರಾಹಕರಿಗೆ ಬಂಪರ್ ರೀಚಾರ್ಜ್ ಆಫರ್ ಅನ್ನು ನೀಡಿದೆ.
ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL) ಗ್ರಾಹಕರನ್ನು ಆಕರ್ಷಿಸಲು ಇದೀಗ ರೀಚಾರ್ಜ್ ಆಫರ್ ಅನ್ನು ಬಿಡುಗಡೆ ಮಾಡಿದೆ. ಈ ಆಫರ್ ನಲ್ಲಿ ಗ್ರಾಹಕರು ಕೇವಲ ರೂ. 225 ರ ರೀಚಾರ್ಜ್‌ನೊಂದಿಗೆ ಲೈಫ್ಟೈಮ್ ವ್ಯಾಲಿಡಿಟಿಯನ್ನು ಪಡೆಯಬಹುದು ಎನ್ನಲಾಗಿದೆ. ಹಾಗೇ ಈ ಹಣವನ್ನು ಒಂದು ಬಾರಿ ಮಾತ್ರ ರೀಚಾರ್ಜ್ ಮಾಡಬೇಕು.
ಇನ್ನೂ MTNL ನ ಈ ಯೋಜನೆ, ಸಿಮ್ ಮತ್ತು ರೀಚಾರ್ಜ್ ಪ್ಲಾನ್ನ ವ್ಯಾಲಿಡಿಯನ್ನು ಲೈಫ್ಟೈಮ್ ಆಗಿ ನೀಡುತ್ತದೆ. ಹಾಗೇ ಕರೆ ಮಾಡಲು ಬಳಕೆದಾರರಿಗೆ 100 ನಿಮಿಷಗಳ ಕಾಲ ಉಚಿತ ಅವಧಿಯನ್ನು ಕೂಡ ನೀಡಲಾಗುತ್ತದೆಯಂತೆ. ಇನ್ನೂ ಹೋಮ್ ನೆಟ್‌ವರ್ಕ್ ಕರೆಗಳಿಗೆ, ರೂ. 0.02 ದರ ಕಟ್ ಆಗುತ್ತದೆ ಎನ್ನಲಾಗಿದೆ. ಎಸ್ಟಿಡಿ ಕರೆಗಳ ದರ ಹಾಗೆಯೇ ಇದ್ದು, ವಿಡಿಯೋ ಕರೆಗೆ ನಿಮಿಷಕ್ಕೆ 0.60 ರೂಪಾಯಿ ಹಣ ಕಟ್ ಆಗುತ್ತದೆ.
ಹಾಗೇ ಉಳಿದು ಬೇರೆ ನೆಟ್‌ವರ್ಕ್ ಕರೆಗಳಿಗೆ ರೂ. 0.90 ಪೈಸೆಯಷ್ಟು ಹಣ ಕಟ್ ಆಗಲಿದ್ದು, ಸ್ಥಳೀಯ ಎಸ್ಎಮ್ಎಸ್ ವೆಚ್ಚ 0.50 ಪೈಸೆ. ಹಾಗೂ ರಾಷ್ಟ್ರೀಯ ಎಸ್ಎಮ್ಎಸ್ ವೆಚ್ಚ ರೂ. 1.50 ಆಗಿದೆ. ಇನ್ನೂ ಅಂತಾರಾಷ್ಟ್ರೀಯ ಎಸ್ಎಮ್ಎಸ್ ಬೆಲೆ ರೂ. 4 ರಿಂದ 5 ರೂಪಾಯಿ ಆಗಿರುತ್ತದೆ. ಪ್ರತಿ ಎಮ್ಬಗೆ 3 ಪೈಸೆ ಡೇಟಾ ಆಗಿದೆ.