ಎಣ್ಣೆ ಪ್ರಿಯರಿಗೆ ಹಬ್ಬವೋ ಹಬ್ಬ! ಇನ್ನು ಮುಂಜಾನೆವರೆಗೂ ಸಿಗುತ್ತೆ ಮದ್ಯ!
ದೇಶದಲ್ಲಿ ಕ್ರೀಡೆಗೆ ವಿಶೇಷ ಸ್ಥಾನಮಾನ ನೀಡುವುದು ತಿಳಿದಿರುವ ವಿಚಾರವೇ!!.. ಅದರಲ್ಲೂ ಯಾವುದಾದರೂ ಕ್ರೀಡೆ ಆರಂಭವಾದರೆ ಸಾಕು ಜನ ನಿದ್ದೆ, ಊಟ ಬಿಟ್ಟು ಆಸಕ್ತಿಯಿಂದ ಕ್ರೀಡೆಯನ್ನು ನೋಡಲು ಉತ್ಸುಕರಾಗಿರುತ್ತಾರೆ.ಭಾರತದಲ್ಲಿ ಕ್ರಿಕೆಟ್ ಹೆಚ್ಚು ಇಷ್ಟಪಡುವ ಅಭಿಮಾನಿಗಳಿರುವಂತೆ ಫುಟ್ ಬಾಲ್ ಪ್ರಿಯರು ಕೂಡ ಅಷ್ಟೆ ಸಂಖ್ಯೆಯಲ್ಲಿದ್ದಾರೆ ಅಲ್ಲದೆ, ಆಟದ ಕ್ರೇಜ್ ಹೊಂದಿದ್ದಾರೆ ಎಂಬುದು ಸುಳ್ಳಲ್ಲ.
ಇದೀಗ ಫಿಫಾ ವಿಶ್ವಕಪ್ ನೋಡುಗರಿಗೆ ಅದರಲ್ಲಿಯೂ ವಿಶೇಷವಾಗಿ ಬೆಂಗಳೂರಿನ ಜನರಿಗೆ ಭರ್ಜರಿ ಗುಡ್ನ್ಯೂಸ್ ದೊರೆತಿದೆ. ಫಿಫಾ ಸೆಮೀಸ್ ಹಿನ್ನಲೆ ಬೆಂಗಳೂರಿನ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ (Bar and Restaurant) ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಫಿಫಾ ವಿಶ್ವಕಪ್ ಸೆಮೀಸ್ ಹಣಾಹಣಿಯ ರೋಚಕ ಸೆಣಸಾಟ ವನ್ನು ನೋಡಲು ಪ್ರಪಂಚವೇ ಎದುರು ನೋಡುತ್ತಿದೆ. ಇದೀಗ, ಫಿಫಾ ವಿಶ್ವಕಪ್ 2022 ಸೆಮಿಪೈನಲ್ ಹಂತ ತಲುಪಿದ್ದು, ಈ ಬಾರಿ ಫುಟ್ಬಾಲ್ನಲ್ಲಿ ಅನೇಕ ಬಲಿಷ್ಠತಂಡಗಳು ಟೂರ್ನಿಯಿಂದ ಹೊರಬಿದ್ದಿದ್ದು, ಕೊನೆಯ ಟೈಟ್ ಫೈನಲ್ ಪಂದ್ಯದ ಕುರಿತು ಅಭಿಮಾನಿಗಳಲ್ಲಿ ಮುಂದೇನಾಗಬಹುದು ಎಂಬ ಕುತೂಹಲ ಮನೆ ಮಾಡಿದೆ.
ಡಿಸೆಂಬರ್ 14ರ ರಾತ್ರಿ 12.30ಕ್ಕೆ ಅರ್ಜೆಂಟೀನಾ ಹಾಗೂ ಕ್ರೊವೇಷ್ಯಾ ಮಧ್ಯೆ ಮೊದಲ ಸೆಮೀಸ್ ಫೈಟ್ ನಡೆಯಲಿದ್ದು, ಬುಧವಾರ ಮದ್ಯರಾತ್ರಿ ಫ್ರಾನ್ಸ್ ಮತ್ತು ಮೊರೊಕ್ಕೋ ನಡುವೆ 2ನೇ ಸಿಮೀಸ್ ನಡುವೆ ಹಣಾಹಣಿ ನಡೆಯಲಿದೆ.ಉಳಿದಂತೆ ಸೆಮೀಸ್ನಲ್ಲಿ ಗೆದ್ದ ತಂಡಗಳು ಡಿಸೆಂಬರ್ 18ರಂದು ರವಿವಾರ, ಫೈನಲ್ ನಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.
ಫಿಫಾ ವಿಶ್ವಕಪ್ ನೋಡುಗರಿಗೆ ಅದರಲ್ಲಿಯೂ ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ನೀಡಿದ್ದು, ಫಿಫಾ ಸೆಮೀಸ್ ನಿಟ್ಟಿನಲ್ಲಿ ಬೆಂಗಳೂರಿನ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ (Bar and Restaurant) ಅವಧಿ ವಿಸ್ತರಣೆ ಮಾಡಿ ಆದೇಶ ನೀಡಲಾಗಿದೆ.
ಫಿಫಾ ವಿಶ್ವಕಪ್ ಹಿನ್ನಲೆ ಪೆಡರೇಷನ್ ಆಫ್ ಕ್ಲಬ್ಸ್ ಕರ್ನಾಟಕ ಈ ಮೊದಲು ಅವಧಿ ವಿಸ್ತರಣೆ ಮಾಡುವಂತೆ ಅವಧಿ ವಿಸ್ತರಣೆ ಮಾಡುವಂತೆ ಮನವಿ ಸಲ್ಲಿಸಿತ್ತು. ಈ ಮನವಿಯ ಅನುಸಾರ 2 ದಿನ ಅವಧಿ ವಿಸ್ತರಣೆ ಮಾಡಿರುವುದಾಗಿ ನಗರ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ.
ಈ ಮೊದಲು ಕೇವಲ 1 ಗಂಟೆ ರಾತ್ರಿಯವರೆಗೆ ಮಾತ್ರ ಬಾರ್ ಮತ್ತು ಪಬ್ಗಳನ್ನು ತೆರೆಯಲು ಅವಕಾಶವಿದ್ದಲ್ಲಿ ಆದರೆ ಫಿಫಾ ವಿಶ್ವಕಪ್ ಸೆಮಿಪೈನಲ್ ಇರುವ ನಿಟ್ಟಿನಲ್ಲಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 14 ಹಾಗೂ 15 ರಂದು ಬೆಳಗಿನ ಜಾವ 3.30 ರ ತನಕ ಬೆಂಗಳೂರಿನಲ್ಲಿ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ತರೆಯಲು ಅನುಮತಿ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಆದೇಶ ಹೊರಡಿಸಿದ್ದಾರೆ.