ಒಮ್ಮೆ ಚಾರ್ಜ್ ಮಾಡಿದ್ರೆಸಾಕು 200-300ಕಿಮೀ ದೂರ ಚಲಿಸುತ್ತೆ ಈ ಸ್ಕೂಟರ್!
ವಾಹನ ನಮಗೆ ಅಗತ್ಯ ಸಂಪರ್ಕ ಸಾಧನ ಆಗಿದೆ. ಅದರಲ್ಲೂ ಆಧುನಿಕ ಯುಗದಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಹಾಗೆಯೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕ ಉತ್ತಮ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ.
ಅದರಂತೆ ಈಗ ಮಾರುಕಟ್ಟೆಯಲ್ಲಿ ಇಂತಹ ಅನೇಕ ಸ್ಕೂಟರ್‌ಗಳಿವೆ. ಅವುಗಳಲ್ಲಿ ಈಗ ಒಮ್ಮೆ ಚಾರ್ಜ್ ಮಾಡಿದ್ರೆ 200-300ಕಿಮೀ ವ್ಯಾಪ್ತಿಯನ್ನು ನೀಡುವ ಸ್ಕೂಟರ್ ಗಳು ಹೆಚ್ಚು ಸುದ್ದಿಯಲ್ಲಿದೆ. ಅಧಿಕ ವ್ಯಾಪ್ತಿಯ ಜೊತೆಗೆ ಈ ಸ್ಕೂಟರ್‌ಗಳ ವೈಶಿಷ್ಟ್ಯ ಕೂಡ ಅದ್ಭುತವಾಗಿರುವ 3 ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ.
ಓಲಾ ಕಂಪನಿಯ ಜನಪ್ರಿಯ ಮತ್ತು ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ Ola S1 Pro ಕೂಡ ಒಂದಾಗಿದೆ. ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದ್ರೆ 181 ಕಿಮೀ ದೂರ ಇದು ಚಲಿಸಬಲ್ಲದು. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 116 ಕಿಮೀ. ಸೊನ್ನೆಯಿಂದ 40 ಕಿಮೀಗೆ ವೇಗವನ್ನು ಹೆಚ್ಚಿಸಲು 2.9 ಸೆಕೆಂಡುಗಳನ್ನು ಇದು ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ 1,39,999 ರೂಪಾಯಿ. ಇದು ಒಟ್ಟು 14 ಬಣ್ಣಗಳಲ್ಲಿ ಲಭ್ಯವಿದೆ.
ಹಾಗೆಯೇ, ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ 236 ಕಿಮೀವರೆಗೆ ವ್ಯಾಪ್ತಿಯನ್ನು ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 105 ಕಿ.ಮೀ. ಸೊನ್ನೆಯಿಂದ 40 ಕಿಮೀಗೆ ವೇಗವನ್ನು ಹೆಚ್ಚಿಸಲು ಇದು 2.77 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಸಿಂಪಲ್ ಒನ್ ಸ್ಕೂಟರ್ ಬೆಲೆ 1,49,999 ರೂಪಾಯಿ. ಇದು ಎಲ್ಲಾ LED ಲೈಟಿಂಗ್, 30-ಲೀಟರ್ ಸಂಗ್ರಹಣೆ, ಬದಲಾಯಿಸಬಹುದಾದ ಬ್ಯಾಟರಿ, ವೇಗದ ಚಾರ್ಜಿಂಗ್ ಮತ್ತು 7-ಇಂಚಿನ TFT ಉಪಕರಣ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಗರಿಷ್ಠ ವೇಗದ ಸ್ಕೂಟರ್ ಗಳಲ್ಲಿ ಗ್ರಾವ್ಟನ್ ಕ್ವಾಂಟಾ ಕೂಡ ಒಂದು. ಇದು ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್‌ನ ಮಿಶ್ರಣ. ದೇಶದ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದ್ದು, ಕನ್ಯಾಕುಮಾರಿಯಿಂದ ಖರ್ದುಂಗ್ ಲಾವರೆಗೆ ಪ್ರಯಾಣಿಸಿದೆ. ಇದು 3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಪೂರ್ಣ ಚಾರ್ಜ್‌ನಲ್ಲಿ 150KM ಚಲಿಸುತ್ತದೆ. ಎರಡು ಬ್ಯಾಟರಿಗಳನ್ನು ಒಟ್ಟಿಗೆ ಇರಿಸುವ ಸೌಲಭ್ಯವನ್ನು ಹೊಂದಿದೆ ಮತ್ತು ಎರಡೂ ಬ್ಯಾಟರಿಗಳೊಂದಿಗೆ ನೀವು 320KM ವರೆಗೆ ಹೋಗಬಹುದು. ಕಂಪನಿಯ ವೆಬ್ ಸೈಟ್ ಪ್ರಕಾರ ಈ ಎಲೆಕ್ಟ್ರಿಕ್ ಸ್ಕೂಟರ್‌ನ ವೆಲೆ 1,15,000 ರೂಪಾಯಿ.