White Hair Problem: ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಈ ವಿಧಾನಗಳನ್ನು ಅನುಸರಿಸದೇ ಇರುವುದು ಉತ್ತಮ
ನಮ್ಮ ಸೌಂದರ್ಯ ನಿರ್ವಹಣೆಯಲ್ಲಿ ನಮ್ಮ ಕೂದಲಿನ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ನಮಗೆಲ್ಲಾ ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಂಗತಿ. ಆದರೆ ಪ್ರಸ್ತುತ ಟೆನ್ಶನ್ ಯುಗದಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿಯೇ ಯುವಕರ ಕೂದಲು ಬಿಳಿಯಾಗಲಾರಂಭಿಸಿವೆ, ಇದರಿಂದ ಯುವಕರು ಕಡಿಮೆ ಆತ್ಮವಿಶ್ವಾಸ ಮತ್ತು ಮುಜುಗರವನ್ನು ಎದುರಿಸುತ್ತಿರುವುದು ಸುಳ್ಳಲ್ಲ. ನಮಗೆ ವಯಸ್ಸಲ್ಲದ ವಯಸ್ಸಿಗೆ ಕೂದಲು ಬೆಳ್ಳಗಾಗುವುದು ಒಂದು ಅನಾರೋಗ್ಯಕರ ಬೆಳವಣಿಗೆಯಾಗಿದ್ದೂ, ಈ ರೀತಿಯ ಸಮಸ್ಯೆಗಳಿಗೆ ನಾವು ಸಾಧ್ಯವಾದಷ್ಟು ಮನೆ ಮದ್ದುಗಳ ಬಳಕೆ ಮಾಡಿದರೆ ಉತ್ತಮ.
ಮಾರುಕಟ್ಟೆಯಲ್ಲಿ ನಾನ ಬಗೆಯ ಕೆಮಿಕಲ್’ಯುಕ್ತ ಉತ್ಪನ್ನಗಳು ಮತ್ತು ಹೇರ್ ಡೈಗಳನ್ನು ಬಳಸುವುದರಿಂದ ಲಾಭದ ಬದಲು ಹಾನಿಯೇ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ತಜ್ಞರು ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಶಿಫಾರಸ್ಸು ಮಾಡುತ್ತಾರೆ. ನೈಸರ್ಗಿಕವಾಗಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಯಲ್ಲಿಯೇ ಇರುವ ಕೆಲ ವಸ್ತುಗಳನ್ನು ಬಳಸಲಾಗುತ್ತದೆ, ಇದರಿಂದ ನೀವು ಬಯಸಿದ ಫಲಿತಾಂಶವನ್ನು ಕೂಡ ನೀವು ಕಾಣಬಹುದು.
ಆದರೆ ನೆನಪಿಡಿ, ಕೆಲವರು ಕಪ್ಪು ಕೂದಲನ್ನು ಮರಳಿ ಪಡೆಯಲು ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳನ್ನೇ ಬಳಸುತ್ತಾರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ. ಬಹುಶಃ ನಿಮ್ಮ ಸಮಯ ವ್ಯರ್ಥ ಎಂದೇ ಹೇಳಬಹುದು. ಈ 3 ವಸ್ತುಗಳಿಂದ ಬಿಳಿ ಕೂದಲು ಹೋಗುತ್ತದೆ ಎಂದು ನೀವು ನಂಬಿದ್ದರೆ ಖಂಡಿತ ಅದು ಸಾಧ್ಯವಿಲ್ಲ.
ಈರುಳ್ಳಿ:- ಸಾಮಾನ್ಯವಾಗಿ ಕೂದಲಿನ ಬಲವರ್ಧನೆ ಮತ್ತು ಕೂದಲಿನ ಬೆಳವಣಿಗೆಗೆ ಈರುಳ್ಳಿ ಪರಿಣಾಮಕಾರಿ ಔಷಧವೆಂದು ಪರಿಗಣಿಸಲಾಗುತ್ತದೆ, ಇದರಲ್ಲಿರುವ ಗಂಧಕವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಆದರೆ, ಅನೇಕ ಜನರು ಈ ತರಕಾರಿಯನ್ನು ಬಿಳಿ ಕೂದಲಿಗೆ ಪರಿಹಾರವೆಂದು ತಪ್ಪಾಗಿ ಭಾವಿಸುತ್ತಾರೆ, ಆದರೆ ಸತ್ಯವೆಂದರೆ ಕೂದಲು ಕಪ್ಪಾಗಿಸಲು ಈರುಳ್ಳಿ ಉಪಯುಕ್ತವಲ್ಲ.
ಮೊಸರು:- ಮೊಸರಿನ ಔಷಧೀಯ ಗುಣಗಳು ಅಘಾದವಾಗಿದೆ. ಮೊಸರಿನ ಬ್ಯಾಕ್ಟಿರಿಯಾ ವಿರೋಧಿ ಗುಣದಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಆದರೆ ವಿಪರ್ಯಾಸ ಎಂಬಂತೆ ತಲೆಗೂದಲು ಕಪ್ಪಾಗುತ್ತದೆ ಎಂಬ ಆಸೆಯಿಂದ ಕೆಲವರು ಸ್ನಾನ ಮಾಡುವಾಗ ಮೊಸರನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ ಆದರೆ ಅಂತಹ ಯಾವುದೇ ಪ್ರಯೋಜನ ಆಗುವುದಿಲ್ಲ.
ಬೆಳ್ಳುಳ್ಳಿ:- ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಲ್ಫರ್ ಅಂಶವಿದೆ, ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಆದರೆ ನೀವು ತಲೆ ಕೂದಲು ಕಪ್ಪಾಗಲೆಂದು ಪೇಸ್ಟ್ ತಯಾರಿಸಿ ತಲೆಗೆ ಹಚ್ಚಿದರೆ ಅದು ಎಂದಿಗೂ ಆಗುವುದಿಲ್ಲ, ನೀವೂ ಕೂಡ ಒಂದು ವೇಳೆ ಈ ರೀತಿ ಪ್ರಯತ್ನಿಸುತ್ತಿದ್ದರೆ, ಅದನ್ನು ಇಂದೇ ಬಿಟ್ಟುಬಿಡಿ.
ಯಾವುದೇ ಮನೆಮದ್ದನ್ನು ಅನುಸರಿಸುವ ಮುನ್ನ ವೈದ್ಯರ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.