ವಕೀಲ ಗಂಡನಿಂದ SI ಹೆಂಡತಿಯ ಮೇಲೆ ಮನಬಂದಂತೆ ಥಳಿತ | ನೋವು ಹಂಚಿಕೊಂಡ ಲೇಡಿ ಪೊಲೀಸ್‌ | ಹಲ್ಲೆ ಮಾಡೋ ಶಾಕಿಂಗ್‌ ವೀಡಿಯೋ ವೈರಲ್‌

ದಿನಂಪ್ರತಿ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ವರದಿಯಾಗುತ್ತಲೇ ಇರುತ್ತವೆ. ಹೆಣ್ಣನ್ನು ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಘಟನೆಗಳು ಕೂಡ ಇದ್ದು, ಕೆಲವೊಂದು ಪ್ರಕರಣಗಳು ಜನರನ್ನು ಬೆಚ್ಚಿ ಬೀಳಿಸುತ್ತದೆ. ಇದೇ ರೀತಿಯ, ಪ್ರಕರಣವೊಂದು ಬೆಳಕಿಗೆ ಬಂದಿದೆ.

 

ನವದೆಹಲಿಯ ನೈಋತ್ಯ ದಿಲ್ಲಿಯ ದ್ವಾರಕಾದಲ್ಲಿ ದೆಹಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್ (ಎಸ್‌ಐ) ಅವರನ್ನು ಆಕೆಯ ವಕೀಲ ಪತಿ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮಹಿಳೆ ತುಂಬು ಗರ್ಭಿಣಿಯಾಗಿದ್ದರು ಕೂಡ ಪತಿ ಅಮಾನವೀಯವಾಗಿ ನಡೆದುಕೊಂಡಿದ್ದು ವಿಪರ್ಯಾಸ.


ಈ ಕುರಿತಾಗಿ ನೊಂದ ಮಹಿಳೆ ಪೋಸ್ಟ್ ಮಾಡಿದ್ದು, ತಾನು ದೆಹಲಿ ಪೋಲೀಸ್‌ನಲ್ಲಿ ಸಬ್-ಇನ್‌ಸ್ಪೆಕ್ಟರ್ ಆಗಿದ್ದು, ಪ್ರಸ್ತುತ ಹೆರಿಗೆ ರಜೆಯಲ್ಲಿದ್ದೇನೆ . ಆದರೆ, ತನ್ನ ಪತಿ ವಕೀಲ ತರುಣ್ ದಾಬಸ್‌ನಿಂದ ತಾನು ನಿರಂತರವಾಗಿ ದೌರ್ಜನ್ಯ ಎದುರಿಸುತ್ತಿದ್ದು, ಇಂದು ಅವನು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ.

ಈ ಕುರಿತಾಗಿ ದಯವಿಟ್ಟು ಕ್ರಮ ತೆಗೆದುಕೊಳ್ಳಿ” ಎಂದು ನೊಂದ ಮಹಿಳೆ ತಮ್ಮ ವೈಯಕ್ತಿಕ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ್ದಾರೆ.
ಎಸ್‌ಐ ಡೋಲಿ ತೆವಾಥಿಯಾ ಅವರು ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಸದ್ಯ ಘಟನೆಯ ವೀಡಿಯೋ ವೈರಲ್​ ಆಗಿದ್ದು, ತಮ್ಮ ಪತಿ ಮಾಡುತ್ತಿರುವ ಹಲ್ಲೆಯ ವಿಡಿಯೋ ಅವರು ಪೋಸ್ಟ್​ ಮಾಡಿದ್ದು, ಸದ್ಯ ಈ ಪೋಸ್ಟ್ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಪತ್ನಿಯ ಮೇಲೆ ಹಲ್ಲೆ ಮಾಡುವ ಜೊತೆಗೆ ನಿಂದಿಸಿ ಥಳಿಸಿ ಕೊಲೆ ಬೆದರಿಕೆ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಕುರಿತಾಗಿ ಪೊಲೀಸರು ವಕೀಲನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.