ರಾಷ್ಟ್ರ ರಾಜಧಾನಿಯಲ್ಲಿ ಹಾಡಹಗಲೇ ಶಾಲಾ ಬಾಲಕಿಗೆ ಆಸಿಡ್‌ ಅಟ್ಯಾಕ್‌ | ಬೈಕ್‌ನಲ್ಲಿ ಬಂದ ವ್ಯಕ್ತಿಯಿಂದ ವಿದ್ಯಾರ್ಥಿನಿ ಮುಖಕ್ಕೆ ಆಸಿಡ್‌ ಎಸೆತ | ವೀಡಿಯೋ ವೈರಲ್

ಇತ್ತೀಚೆಗೆ  ರಾಷ್ಟ್ರ ರಾಜದಾನಿ ದೆಹಲಿಯಲ್ಲಿ  ಪೈಶಾಚಿಕ  ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ದೆಹಲಿಯ ಶ್ರದ್ಧಾ ಪ್ರಕರಣದ ಭಿಬತ್ಸ ಕೃತ್ಯದ ಬಳಿಕ, ಇದೀಗ ಮತ್ತೊಂದು ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಇಂದು ಮುಂಜಾನೆ ಸುಮಾರು 9 ಗಂಟೆ ಹೊತ್ತಿಗೆ ನವದೆಹಲಿಯ  ಶಾಲಾ ವಿದ್ಯಾರ್ಥಿನಿ ಮೇಲೆ  ಯುವಕನೊಬ್ಬ ಆಸಿಡ್ ದಾಳಿ ನಡೆಸಿದ್ದು, ಅವಮಾನವೀಯ ಘಟನೆ ದೆಹಲಿಯ ದ್ವಾರಕಾ ಜಿಲ್ಲೆಯಲ್ಲಿ ನಡೆದಿದೆ.

 

  ರಾಷ್ಟ್ರ ರಾಜಧಾನಿ ದೆಹಲಿ ಮತ್ತೊಂದು ಪೈಶಾಚಿಕ ಕೃತ್ಯ ಎಸಗಿದ್ದು ವರದಿಯಾಗಿದ್ದು, ಇಂದು ಮುಂಜಾನೆ ಸುಮಾರು 9 ಗಂಟೆ ಹೊತ್ತಿಗೆ ಶಾಲಾ ಬಾಲಕಿ ಮೇಲೆ ಯುವಕನೊಬ್ಬ ಆಸಿಡ್ ದಾಳಿ ನಡೆಸಿದ್ದಾನೆ. ದೆಹಲಿಯ ದ್ವಾರಕಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಬಾಲಕಿ ಶಾಲೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯ  ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು,ಆಸಿಡ್ ದಾಳಿಯಿಂದ ಗಂಭೀರ ಗಾಯಗೊಂಡಿರುವ ಬಾಲಕಿಯನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯ ಬಗ್ಗೆ ಮಾಹಿತಿ ತಿಳಿಯದಿದ್ದಂತೆ ದೆಹಲಿ ಪೋಲಿಸರು ಆಸ್ಪತ್ರೆಗೆ ಭೇಟಿ ನೀಡಿದ್ದು, ವಿದ್ಯಾರ್ಥಿನಿಯ ಮೇಲೆ ಆಸಿಡ್ ದಾಳಿ ನಡೆಸಿದ ಯುವಕ ಈ ರೀತಿ ನಡೆದುಕೊಳ್ಳಲು  ಕಾರಣವೇನೆಂದು ತಿಳಿದುಬಂದಿಲ್ಲ.

  ಹೆಣ್ಣು ಮಕ್ಕಳೆಂದ ಮಾತ್ರಕ್ಕೆ ಆಕೆಯನ್ನು ಮನಸೋ ಇಚ್ಛೆಯ ಅನುಸಾರ ದಂಡಿಸುವ, ಹಲ್ಲೆ ಮಾಡುವ ಪ್ರಕರಣಗಳು ವರದಿಯಾಗುತ್ತಿದ್ದು ಈ ರೀತಿಯ ಪ್ರಕರಣಗಳಿಗೆ ಖಾಕಿ ಪಡೆ ಹೆಡೆ ಮುರಿ ಕಟ್ಟುವ ಪ್ರಯತ್ನ ಮಾಡಬೇಕಾಗಿದೆ.

Leave A Reply

Your email address will not be published.