ಮಹಿಳೆಯ ಕಿವಿಯೊಳಗೆ ಜೀವಂತ ಜೇಡ | ಯಶಸ್ವಿಯಾಗಿ ಹೊರತೆಗೆದ ವೈದ್ಯರು|ವೀಡಿಯೋ ವೈರಲ್

ವಿಪರೀತ ಕಿವಿನೋವು ಎಂದು ಆಸ್ಪತ್ರೆಗೆ ಹೋದ ಮಹಿಳೆಯ ಕಿವಿಯೊಳಗೆ ಜೀವಂತ ಜೇಡ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈದ್ಯರು ಜೇಡವನ್ನು ಹೊರತೆಗೆಯುವಲ್ಲಿ ಯಶಸ್ಸಿಯಾಗಿದ್ದು, ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

ಘಟನೆಯ ವಿವರ ಹೀಗಿದೆ, ವಿಪರೀತ ಕಿವಿ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನೋವಿನ ಕಾರಣ ತಿಳಿಯದೆ ಭಯಭೀತರಾಗಿ ಹಾಗೂ ನೋವನ್ನು ತಡೆಯಲಾರದೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಮಹಿಳೆಯ ಕಿವಿಯನ್ನು ಪರಿಶೀಲಿಸಿದ ವೈದ್ಯರಿಗೆ ಕಿವಿಯೊಳಗೆ ಜೀವಂತ ಜೇಡ ಇರುವುದು ಪತ್ತೆಯಾಗಿದೆ. ಕೂಡಲೇ Ear Drops ಹಾಕಿ ಜೇಡವನ್ನು ಹೊರತೆಗೆಯುವಲ್ಲಿ ಯಶಸ್ಸಿಯಾಗಿದ್ದಾರೆ. ಇಷ್ಟು ದಿನ ಕಿವಿ ನೋವಿನಿಂದ ಬಳಲುತ್ತಿದ್ದ ಮಹಿಳೆಯು, ಕಿವಿಯಿಂದ ಜೇಡವನ್ನು ಹೊರತೆಗೆದ ನಂತರ ನಿರಾಳವಾಗಿದ್ದಾರೆ.

Unilad ಇನ್‍ಸ್ಟಾಗ್ರಾಮ್‍ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋವನ್ನು ಸಾಕಷ್ಟು ಜನರು ವೀಕ್ಷಿಸಿದ್ದು, ಸಾವಿರಕ್ಕೂ ಅಧಿಕ ಜನರು ಲೈಕ್ ಹಾಗೂ ವಿಭಿನ್ನ ರೀತಿಯ ಕಾಮೆಂಟ್ ಕೂಡ ಮಾಡಿದ್ದಾರೆ. ಇನ್ನೂ ಈ ಪೋಸ್ಟ್ ಗೆ, ‘Imagine finding out this is what’s causing your earache’ ಎಂದು ಕ್ಯಾಪ್ಶನ್ ನೀಡಲಾಗಿದೆ.

https://www.instagram.com/reel/CmE8TeQN14m/?igshid=YmMyMTA2M2Y=

Leave A Reply

Your email address will not be published.