ತನ್ನದೇ ಕರುಳಬಳ್ಳಿಯನ್ನು ಕಟ್ಟಡದಿಂದ ಎಸೆದು ಕೊಂದ 15ರ ಬಾಲಕಿ |

ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮುಂದುವರಿದಷ್ಟೇ ಮನುಷ್ಯರು ಸಹ ಅಷ್ಟೇ ಕಠೋರ ಮನಸಿನಿಂದ ಕೂಡಿದವರು ಆಗಿರುತ್ತಾರೆ. ಮೊಬೈಲ್, ಇಂಟರ್ನೆಟ್ ಬಂದ ನಂತರ ಮನುಷ್ಯ ರ ವರ್ತನೆ ವಿಚಿತ್ರ ಆಗಿರುತ್ತದೆ. ಈ ಕುರಿತಂತೆ ನಾವು ಎಷ್ಟೋ ನಿದರ್ಶನಗಳನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಅದಲ್ಲದೆ ಕೆಲವೊಂದು ಘಟನೆಗಳು ನಮ್ಮ ಊಹೆಗೂ ಮೀರಿ ನಡೆಯುತ್ತವೆ ಅನ್ನೋದಕ್ಕೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಹೌದು ತನ್ನ ನವಜಾತ ಶಿಶುವನ್ನು ಕಟ್ಟಡದಿಂದ ಎಸೆದು ಕೊಂದ ಘೋರ ಘಟನೆ ನಡೆದಿದೆ.

 

15 ವರ್ಷದ ಬಾಲಕಿಯೊಬ್ಬಳು ತಾನು ಹೆತ್ತ ಮಗುವನ್ನು ಕಟ್ಟಡದಿಂದ ಎಸೆದು ಕೊಂದ ಘಟನೆ ಗುಜರಾತ್‌ನ ಸೂರತ್ ನಗರದಲ್ಲಿ ನಡೆದಿದ್ದು ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ ಬಾಲಕಿ 20 ವರ್ಷದ ಯುವಕನೊಂದಿಗೆ ಸಂಬಂಧ ಹೊಂದಿದ್ದು, ಆತನಿಂದ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ತಪ್ಪಿಸಿಕೊಳ್ಳಲು, ಆಕೆ ಮಗುವನ್ನು ಎಸೆಸಿದ್ದಾಳೆ ಎಂದು ತಿಳಿದುಬಂದಿದೆ.

ಸಾರ್ವಜನಿಕರು ಸೋಮವಾರ ಬೆಳಿಗ್ಗೆ ನಗರದ ಮಗ್ದಲ್ಲಾ ಪ್ರದೇಶದಲ್ಲಿ ರಸ್ತೆಯ ಮೇಲೆ ಬಿದ್ದಿರುವ ನವಜಾತ ಶಿಶುವನ್ನು ಗಮನಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗು ಸಾವನ್ನಪ್ಪಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಸದ್ಯ ನವಜಾತ ಶಿಶುವನ್ನು ಕಟ್ಟಡದಿಂದ ಎಸೆದಿರುವುದು ತನಿಖೆಯಿಂದ ತಿಳಿದುಬಂದಿದೆ ಮತ್ತು ಸಿಸಿಟಿವಿ ದೃಶ್ಯಗಳು ಸಹ ಅದನ್ನು ದೃಢಪಡಿಸಿವೆ.

ಅದಲ್ಲದೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 315ರ ಅಡಿಯಲ್ಲಿ ಬಾಲಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ 20 ವರ್ಷದ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ.

Leave A Reply

Your email address will not be published.