ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಮಹತ್ವದ ಮಾಹಿತಿ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ)ದಿಂದ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದಿದ್ದು, ನಿಮ್ಮ ಖಾತೆಯಿಂದಲೂ ಹಣ ಕಡಿತವಾಗಿದ್ರೆ ಇದಕ್ಕೆ ಕಾರಣ ಏನೆಂಬುದನ್ನು ಇಲ್ಲಿ ನೋಡಿ..
ಹೌದು. ಇತ್ತೀಚೆಗೆ ಎಟಿಎಂ ವಿತ್ ಡ್ರಾ ಮಿತಿ ಮೀರದಿದ್ರೂ ಖಾತೆಯಿಂದ 147.5 ರೂ. ಕಡಿತವಾಗಿದೆ. ಇದಕ್ಕೆ ಕಾರಣ ನೀವು ಬಳಸುತ್ತಿರುವ ಡೆಬಿಟ್ ಅಥವಾ ಎಟಿಎಂ ಕಾರ್ಡ್ನ ವಾರ್ಷಿಕ ನಿರ್ವಹಣೆ. ಈ ನಿರ್ವಹಣೆಗಾಗಿ ಸೇವಾ ಶುಲ್ಕದ ರೂಪದಲ್ಲಿ ಕಡಿತ ಮಾಡಲಾಗಿದೆ.
ಯುವ, ಗೋಲ್ಡ್, ಕಾಂಬೋ, ಮೈ ಕಾರ್ಡ್ (ಇಮೇಜ್) ಡೆಬಿಟ್ ಕಾರ್ಡ್ ಮೇಲೆ ವಾರ್ಷಿಕ 175+ಜಿ ಎಸ್ ಟಿ ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ. ಪ್ಲಾಟಿನಂ ಡೆಬಿಟ್ ಕಾರ್ಡ್ ಮೇಲೆ 250 ರೂ. +ಜಿ ಎಸ್ ಟಿ ವಿಧಿಸಲಾಗುತ್ತದೆ. ಇನ್ನು ಪ್ರೈಡ್/ ಪ್ರೀಮಿಯಂ ಬ್ಯುಸಿನೆಸ್ ಡೆಬಿಟ್ ಕಾರ್ಡ್ ಗಳ ಮೇಲೆ 350ರೂ. + ಜಿ ಎಸ್ ಟಿ ವಿಧಿಸಲಾಗುತ್ತದೆ. ಒಂದು ವೇಳೆ ನೀವು ಡೆಬಿಟ್ ಕಾರ್ಡ್ ಬದಲಾಯಿಸಲು ಬಯಸಿದರೆ ಬ್ಯಾಂಕ್ 300+ಜಿ ಎಸ್ ಟಿ ಶುಲ್ಕ ವಿಧಿಸುತ್ತದೆ. ಹೀಗಾಗಿ ಗ್ರಾಹಕರೇ ಇದು ಎಟಿಎಂ ಮಿತಿ ಮೀರಿ ಹಣ ಕಡಿತವಲ್ಲ ಎಂಬುದು ನಿಮಗೆ ಮುಖ್ಯ ಮಾಹಿತಿ.