ಹೆಸರು ಕಾಳಿನಲ್ಲೂ ಇದೆ ಮುಖದ ಸೌಂದರ್ಯ ಹೆಚ್ಚಿಸುವ ಶಕ್ತಿ | ಹಾಗಿದ್ರೆ ಇನ್ಯಾಕೆ ತಡ, ಬಳಸಿ ಸಿಂಪಲ್ ಬ್ಯೂಟಿ ಟಿಪ್ಸ್
ಹೆಸರು ಕಾಳು ಚಿಕ್ಕ ಕಾಳಾದರೂ ಇದರಲ್ಲಿ ಇರುವ ಆರೋಗ್ಯದ ಗುಣವು ಅದ್ಭುತ ಸಂಗತಿಗಳಿಂದ ಕೂಡಿದೆ. ಗಣನೀಯವಾಗಿ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ದಲಾವಣೆ ಉಂಟಾಗುವುದು. ಜೊತೆಗೆ ಕೆಲವು ಆರೋಗ್ಯ ಸಮಸ್ಯೆ ಇದ್ದರೂ ಗುಣಮುಖವಾಗುತ್ತದೆ.
ದೇಹದಲ್ಲಿ ಪ್ರೋಟೀನ್‍ಗಳ ಕೊರತೆ ಉಂಟಾದಾಗ ಸಾಕಷ್ಟು ಅನಾರೋಗ್ಯಗಳು ಕಾಣಿಸಿಕೊಳ್ಳುತವೆ. ನಿತ್ಯದ ಆಹಾರದಲ್ಲಿ ಹೆಸರು ಕಾಳನ್ನು ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತಕಣಗಳ ಉತ್ಪತ್ತಿ ಮತ್ತು ಮೂಳೆಗಳು ಬಲಗೊಳ್ಳುವುದು. ಯಾಕೆಂದರೆ ಒಂದು ಕಪ್ ಹೆಸರುಕಾಳಿನಲ್ಲಿ ಶೇ 28ರಷ್ಟು ಪ್ರೋಟಿನ್‍ಗಳಿರುತ್ತವೆ. ಹೀಗಾಗಿ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅದರಲ್ಲೂ ಮುಖ್ಯವಾಗಿ ಹೆಸರುಕಾಳು ಸೌಂದರ್ಯ ವೃದ್ಧಿಸುವುದರಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ. ಹೌದು. ಮುಖ ಅಂದವಾಗಿ ಕಾಣಲು ಆಹಾರ ಸೇವನೆ ಕೂಡ ಮುಖ್ಯ. ಇಂತಹ ಉತ್ತಮ ಆಹಾರವಾದ ಹೆಸರುಕಾಳನ್ನು ಬಳಸಿ ಹೇಗೆ ನಾವು ಸೌಂದರ್ಯ, ಆರೋಗ್ಯ ಹೆಚ್ಚಿಸಿಕೊಳ್ಳಬಹುದು ಎಂದು ನೋಡೋಣ..
ಹೆಸರುಕಾಳನ್ನು ಪುಡಿ ಮಾಡಿ, ಒಂದು ಡಬ್ಬದಲ್ಲಿ ಹಾಕಿಟ್ಟುಕೊಳ್ಳಿ. ಪ್ರತಿದಿನ ಮುಖ ತೊಳೆಯುವಾಗ, ಸೋಪಿನ ಬದಲು ಈ ಪುಡಿಯನ್ನು ಬಳಸಿ. ಇದರಿಂದ ಮುಖ ಸಾಫ್ಟ್ ಆಗಿರುತ್ತದೆ. ಗುಳ್ಳೆ, ಮೊಡವೆ ಕಲೆಗಳಿದ್ದರೆ, ಅದು ಕೂಡ ಮಾಯವಾಗುತ್ತದೆ. ಒಂದು ವಾರಕ್ಕಾಗುವಷ್ಟು ಹೆಸರುಕಾಳನ್ನು ಪುಡಿ ಮಾಡಿ ಇಟ್ಟುಕೊಳ್ಳಬಹುದು.
ರಾತ್ರಿ ಹೆಸರು ಕಾಳು ನೆನೆಹಾಕಿ, ಮರುದಿನ ಅದನ್ನ ಸ್ಮೂತ್ ಆಗಿ ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಕೊಂಚ ಜೇನುತುಪ್ಪ ಬೆರೆಸಿ, ಫೇಸ್‌ಪ್ಯಾಕ್ ಹಾಕಿ. 15 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ನೀವು ಜೇನುತುಪ್ಪದ ಬದಲು, ಮೊಸು ಕೂಡ ಬಳಸಬಹುದು. ವಾರದಲ್ಲಿ ಒಮ್ಮೆ ಈ ಪ್ಯಾಕ್ ಹಾಕಿದ್ರೆ ಸಾಕು, ಉತ್ತಮ ಫಲಿತಾಂಶ ದೊರೆಯುತ್ತದೆ.
ಇನ್ನು ಪ್ರತಿದಿನ ಮೊಳಕೆ ಬಂದ ಹೆಸರುಕಾಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ, ನಿಮ್ಮ ದೇಹದ ತೂಕ ಕಡಿಮೆಯಾಗತ್ತೆ. ಇನ್ನು ಮೊಳಕೆ ಬರಿಸದೇ, ಹೆಸರು ಕಾಳು ನೆನೆಸಿ ತಿಂದ್ರೆ, ನಿಮ್ಮ ದೇಹದ ತೂಕ ಹೆಚ್ಚುತ್ತದೆ. ತ್ವಚೆ ಸುಂದರವಾಗತ್ತೆ. ಕೂದಲು ಆರೋಗ್ಯಕರವಾಗಿರತ್ತೆ.
ಹೆಸರು ಕಾಳಿನಲ್ಲಿ ಫೋಲೇಟ್, ವಿಟಮಿನ್ ಬಿ9 ಸಮೃದ್ಧವಾಗಿವೆ. ಇವು ದೇಹದಲ್ಲಿ ಹೊಸ ರಕ್ತಕಣಗಳ ಸೃಷ್ಟಿಗೆ ಸಹಾಯ ಮಾಡುತ್ತವೆ. ಅದರಲ್ಲೂ ಕೆಂಪು ರಕ್ತ ಕಣಗಳನ್ನು ಹೆಚ್ಚುವಂತೆ ಮಾಡುವುದು. ಹಾಗಾಗಿ ಗರ್ಭಿಣಿಯರಿಗೆ ಅತ್ಯುತ್ತಮವಾದದ್ದು. ಯಾರು ಗರ್ಭಾವಸ್ಥೆಯನ್ನು ಹೊಂದಲು ಯೋಜನೆ ಮಾಡುವರೋ ಅಂತಹವರು ಸಹ ತಮ್ಮ ಆಹಾರದಲ್ಲಿ ಹೆಸರು ಕಳನ್ನು ಸೇರಿಸಿಕೊಳ್ಳಬಹುದು. ಆರೋಗ್ಯಕರ ರಕ್ತಕಣಗಳಿಂದಾಗಿ ಮಗುವಿನ ಬೆಳವಣಿಗೆಯು ಉತ್ತಮವಾಗುವುದು. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದು. ಗರ್ಭಾವಸ್ಥೆಯಲ್ಲಿ ಇರುವವರು ಹೆಸರು ಕಾಳಿನ ದೋಸೆಯನ್ನು ಸೇವಿಸಬಹುದು.
ಅಷ್ಟೇ ಅಲ್ಲದೆ, ಬೇಳೆ ಕಾಳುಗಳಲ್ಲಿ ಇರುಳುಗಣ್ಣು ಸಮಸ್ಯೆಯನ್ನು ನಿವಾರಿಸುವ ಶಕ್ತಿಯಿರುತ್ತದೆ. ಹೆಸರು ಕಾಳಿನಲ್ಲಿ ಇರುವ ಜಿಂಕ್ ಅಂಶವು ವಿಟಮಿನ್ ಎ ಉತ್ಪಾದನೆಗೆ ಸಹಾಯ ಮಾಡುವುದು. ದೇಹದಲ್ಲಿ ಅಗತ್ಯವಾದ ವಿಟಮಿನ್ ಎ ಪ್ರಮಾಣವು ಸಮತೋಲನದಲ್ಲಿ ಇದ್ದಾಗ ರಾತ್ರಿ ಕುರುಡು ನಿವಾರಣೆಯಾಗುವುದು. ಹೆಸರು ಕಾಳನ್ನು ಪಾಲಕ್ ಸೊಪ್ಪುಗಳೊಂದಿಗೆ ಬೆರೆಸಿ ಆಹಾರವನ್ನು ತಯಾರಿಸಿದರೆ ಅದರ ಶಕ್ತಿಯು ದ್ವಿಗುಣವಾಗುವುದು. ಇಲ್ಲವೇ ಮೊಳಕೆ ಬರಿಸಿದ ಹೆಸರುಕಾಳನ್ನು ಸೇವಿಸಬಹುದು.