Kantara : ಕಾಂತಾರ ಸಿನಿಮಾ ಹೊಗಳಿದ ಹೃತಿಕ್‌ ರೋಷನ್‌ | ನಂತರ ಫುಲ್‌ ಟ್ರೋಲ್‌, ಯಾಕೆ ಗೊತ್ತಾ? ಕಾರಣ ಇಲ್ಲಿದೆ

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಸಿನಿಮಾ ದೇಶದಾದ್ಯಂತ ಭರ್ಜರಿ ಸದ್ದು ಮಾಡಿದ್ದು, ಈಗಲೂ ಅದರ ಹವಾ ಕಮ್ಮಿಯೇನು ಆಗಿಲ್ಲ. ಇನ್ನೂ ಸಿನಿಮಾ ನೋಡಿದ ಹಲವರು ಹಲವು ರೀತಿಯಲ್ಲಿ ಸಿನಿಮಾ ಬಗ್ಗೆ ವಿಶ್ಲೇಷಿಸಿದ್ದಾರೆ. ಇದೀಗ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ.

 

ನಟ ಹೃತಿಕ್ ರೋಷನ್ ಸಿನಿಮಾದ ಬಗ್ಗೆ, ಅದ್ಭುತವಾದ ನಿರ್ದೇಶನ, ನಿರೂಪಣೆ ಮತ್ತು ನಟನೆ. ಕ್ಲೈಮ್ಯಾಕ್ಸ್ ನೋಡಿ ಗೂಸ್‌ಬಮ್ಸ್ ಬಂತು. ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು. ಇನ್ನೂ, ಹೃತಿಕ್ ರೋಷನ್ ನ ಈ ಟ್ವೀಟ್‌ಗೆ ಒಂದು ವರ್ಗದ ಜನರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಹೃತಿಕ್ ರೋಷನ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

https://twitter.com/iHrithik/status/1601969831061983232?s=20&t=joeRoLqauI7337qWdk0scw

ಕಾಮೆಂಟ್ಗಳಲ್ಲಿ ನೆಟ್ಟಿಗನೊಬ್ಬ ಪ್ರತಿಕ್ರಿಯೆ ನೀಡಿದ್ದು, ‘ಪ್ರಾಮಾಣಿಕವಾಗಿ ಹೇಳೋದಾದ್ರೆ ಈ ಸಿನಿಮಾದಲ್ಲಿ ನಟನೆ ಅದ್ಭುತವಾಗಿದೆ. ಈ ಸಿನಿಮಾವನ್ನು ಚಿತ್ರಮಂದಿರಕ್ಕಾಗಿ ಮಾತ್ರ ನಿರ್ಮಿಸಲಾಗಿದೆ. ನೀವು ಅದನ್ನು ಒಟಿಟಿಯಲ್ಲಿ ನೋಡಿದ್ರೆ ನಿಮಗೆ ಅಸಮಾನ್ಯ ಸಿನಿಮಾ ಹೇಗಾಗುತ್ತದೆ. ಸಾಮಾನ್ಯ ಸಿನಿಮಾ ಆಗುತ್ತೆ, ಗೂಸ್‌ಬಮ್ಸ್ ಹೇಗೆ ಬರುತ್ತೆ ಎಂದು ಹೇಳಿದ್ದಾರೆ.

ಮತ್ತೋರ್ವ, ಇದು ನನ್ನ ದೃಷ್ಟಿಯಲ್ಲಿ ಸಿನಿಮಾ ಅಲ್ಲ, ಸಿನಿಮಾ ಎಂದರೆ ಸಮಾಜಕ್ಕೆ ಏನಾದರೂ ಸಂದೇಶವನ್ನು ಕೊಡುವಂತಿರಬೇಕು. ಈ ಚಿತ್ರ ಮೂಢನಂಬಿಕೆಯನ್ನು ಮಾತ್ರ ಹರಡುತ್ತಿದೆ. ಹಣ ಗಳಿಸುವುದು ಎಲ್ಲಕ್ಕಿಂತ ಮುಖ್ಯವಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ನಟನ ಟ್ವೀಟ್ ಗೆ ಇನ್ನೊಬ್ಬ ನೆಟ್ಟಿಗ ಪ್ರತಿಟ್ವೀಟ್ ನೀಡಿದ್ದು, ‘ಓಹ್ ನಿಜವಾಗಿಯೂ? ಆ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಬಿಟ್ಟರೆ ಬೇರೇನೂ ಇರಲಿಲ್ಲ. ಡ್ರಾಮ ಮಾಡಬೇಡಿ ಎಂದು ಹೇಳಿದ್ದಾರೆ. ಹಾಗೇ ಮತ್ತೋರ್ವ ಮುಂದಿನ ಸಿನಿಮಾ ಹೊಂಬಾಳೆ ಫಿಲ್ಮ್ಸ್ ಜೊತೆ ಮಾಡುತ್ತಿದ್ದಾರೆ ಅನಿಸುತ್ತದೆ, ಅದಕ್ಕೆ ಇಷ್ಟೆಲ್ಲ ಹೊಗಳಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೇ ವಿವಿಧ ರೀತಿಯಲ್ಲಿ ಈ ಟ್ವೀಟ್ ಗೆ ಪ್ರತಿಟ್ವೀಟ್ ನೀಡಿದ್ದಾರೆ.

Leave A Reply

Your email address will not be published.