Jio : ಜಿಯೋ ಸಿಮ್‌ ಜೊತೆಗೆ ಒನ್‌ಪ್ಲಸ್‌ ಮೊಬೈಲ್‌ ಬಳಸೋ ಎಲ್ಲರಿಗೂ ಇಲ್ಲಿದೆ ಸಿಹಿ ಸುದ್ದಿ

ಮೊಬೈಲ್ ಎಂಬ ಮಾಯಾವಿ ಪ್ರತಿಯೊಬ್ಬರ ಕೈಯಲ್ಲಿಯೂ ಹರುದಾಡುತ್ತಾ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಇದೀಗ ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ ಇದ್ದು, ಜಿಯೋ ಸಿಮ್ ಜೊತೆಗೆ ಒನ್ ಪ್ಲಸ್ ಬಳಸುತ್ತಿದ್ದರೆ ನಿಮಗೆ ಗುಡ್ ನ್ಯೂಸ್ ಒಂದು ಕಾದಿದೆ.

ಜಿಯೋ ಮತ್ತು ಒನ್‌ಪ್ಲಸ್  ಟೀಂ ಭಾರತೀಯ ಗ್ರಾಹಕರಿಗೆ 5G ತಂತ್ರಜ್ಞಾನ ಹೆಚ್ಚು ಸಂಪರ್ಕಿಸುವಂತೆ ಮಾಡಲು ಬ್ಯಾಕ್‌ಎಂಡ್‌ನಲ್ಲಿ ಸಕ್ರಿಯವಾಗಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ.  ಒನ್‌ಪ್ಲಸ್ ತನ್ನ 5G ತಂತ್ರಜ್ಞಾನ ಸೇವೆಗಳನ್ನು ವಿಸ್ತರಿಸುವುದನ್ನು ಮುಂದುವರಿಸಿದ್ದು, ಡಿಸೆಂಬರ್ 13 ರಿಂದ ಡಿಸೆಂಬರ್ 18 ರವರೆಗೆ ಒನ್‌ಪ್ಲಸ್ ವಾರ್ಷಿಕೋತ್ಸವದ ಮಾರಾಟದ ಅವಧಿಯಲ್ಲಿ ಅರ್ಹ ಒನ್‌ಪ್ಲಸ್ ಮತ್ತು ಜಿಯೋ 5G ಬಳಕೆದಾರರಿಗೆ ಒದಗಿಸಲಾಗುವ ರೂ. 10,800 ಮೌಲ್ಯದ ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ಈ ಅವಧಿಯಲ್ಲಿ ಮೊದಲ 1000 ಮಂದಿಗೆ ಹೆಚ್ಚುವರಿಯಾಗಿ ರೂ. 1499 ಮೌಲ್ಯದ ಪೂರಕ ರೆಡ್ ಕೇಬಲ್ ಕೇರ್ ಯೋಜನೆ ಮತ್ತು ರೂ. 399 ಮೌಲ್ಯದ ಜಿಯೋ ಸಾವನ್ ಪ್ರೊ ಯೋಜನೆ ದೊರೆಯಲಿದೆ ಎಂದು ಒನ್‌ಪ್ಲಸ್ ಕಂಪೆನಿ ಹೇಳಿದೆ.

ಭಾರತದಲ್ಲಿ ಸ್ಟ್ಯಾಂಡ್ ಅಲೋನ್ 5G ತಂತ್ರಜ್ಞಾನ ವ್ಯವಸ್ಥೆಯನ್ನು ತರಲು ಜಾಗತಿಕ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒನ್‌ಪ್ಲಸ್‌ ಮತ್ತು ದೇಶದ ಅತಿದೊಡ್ಡ ಟೆಲಿಕಾಂ ಬ್ರ್ಯಾಂಡ್ ಜಿಯೋ ಕಂಪೆನಿಗಳು ಒಗ್ಗೂಡಿವೆ.  ಒನ್‌ಪ್ಲಸ್ ಕಂಪೆನಿಯ ಇತ್ತೀಚಿನ ಒನ್‌ಪ್ಲಸ್ 10 ಸರಣಿ, ಒನ್‌ಪ್ಲಸ್ 9R, ಒನ್‌ಪ್ಲಸ್ 8 ಸರಣಿ ಸ್ಮಾರ್ಟ್‌ಫೋನ್‌ಗಳ ಜತೆಗೆ ನಾರ್ಡ್, ನಾರ್ಡ್ 2T, ನಾರ್ಡ್ 2, ನಾರ್ಡ್ CE, ನಾರ್ಡ್ CE 2 ಮತ್ತು ನಾರ್ಡ್ CE 2 ಲೈಟ್ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಜಿಯೋ ಟ್ರೂ 5G ತಂತ್ರಜ್ಞಾನದಿಂದ ಬೆಂಬಲಿತವಾಗಿದೆ. ಅತಿ ಶೀಘ್ರದಲ್ಲೇ ಒನ್‌ಪ್ಲಸ್ 9 ಪ್ರೊ, ಒನ್‌ಪ್ಲಸ್ 9 ಮತ್ತು ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್‌ಗಳು ಕೂಡ ಜಿಯೋ ಟ್ರೂ 5G ನೆಟ್‌ವರ್ಕ್‌ಗೆ ಸಂಪರ್ಕ ಪಡೆಯುತ್ತವೆ ಎಂಬ ಕುರಿತಾಗಿ ಜಿಯೋ ಹಾಗೂ ಒನ್‌ಪ್ಲಸ್ ಕಂಪೆನಿಗಳು ಮಾಹಿತಿ ನೀಡಿವೆ.

ಒನ್‌ಪ್ಲಸ್ ಇಂಡಿಯಾ ಸಿಇಒ ಮತ್ತು ಭಾರತದ ವಲಯದ ಮುಖ್ಯಸ್ಥ ನವನಿತ್ ನಕ್ರಾ ಅವರು ಅಭಿಪ್ರಾಯ ಹಂಚಿಕೊಂಡಿದ್ದು,  “ಭಾರತದಲ್ಲಿರುವ ನಮ್ಮ ಸಮುದಾಯಕ್ಕೆ 5G ತಂತ್ರಜ್ಞಾನವನ್ನು ತರಲು ಜಿಯೋ ತಂಡದೊಂದಿಗೆ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಲು ಸಂತಸ ವ್ಯಕ್ತಪಡಿಸಿದರು.

ಜಗತ್ತಿನಾದ್ಯಂತ ಗ್ರಾಹಕರಿಗೆ 5G ಸಾಧನಗಳನ್ನು ತರಲು ಉದ್ಯಮದಲ್ಲಿ ವೇಗವಾಗಿ ಮುನ್ನಡೆ ಸಾಧಿಸಿದ್ದು, ಒನ್‌ಪ್ಲಸ್ 2020ರಲ್ಲಿ ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ಗಳ ಮೊದಲ ಶ್ರೇಣಿಯನ್ನು ಒನ್‌ಪ್ಲಸ್ 8 ಸರಣಿಯೊಂದಿಗೆ ಬಿಡುಗಡೆ ಮಾಡಿದ್ದು ಅಂದಿನಿಂದ, ನಮ್ಮ ಎಲ್ಲಾ ಸ್ಮಾರ್ಟ್‌ಫೋನ್‌ಗಳು 5G-ಸಿದ್ಧವಾಗಿಯೇ ಬರುತ್ತಿವೆ” ಎಂದು ತಿಳಿಸಿದರು.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC)ನಲ್ಲಿ ಜಿಯೋ ಮತ್ತು ಒನ್‌ಪ್ಲಸ್ ಮಧ್ಯದ ನವೀನ 5G ಸಹಯೋಗವನ್ನು ಭಾರತೀಯ ಗ್ರಾಹಕರು  ಗಮನಿಸಿದ್ದಾರೆ. ಇದರಲ್ಲಿ ಅತ್ಯಾಕರ್ಷಕ 5G ಬಳಕೆ  ಹೊಂದಿರುವ ಅರ್ಹ ಒನ್‌ಪ್ಲಸ್ ಸಾಧನಗಳೊಂದಿಗೆ ಜಿಯೋ ಬಳಕೆದಾರರಿಗೆ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ. ಕೌಂಟರ್‌ಪಾಯಿಂಟ್ ರೀಸರ್ಚ್ ಇಂಡಿಯಾ ಸ್ಮಾರ್ಟ್‌ಫೋನ್ ಮಾಡೆಲ್ ಟ್ರ್ಯಾಕರ್ 2022ರ ಮೂರನೇ ತ್ರೈಮಾಸಿಕದ ಅನುಸಾರ , ಒನ್‌ಪ್ಲಸ್ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಹಾಗೂ ಕೈಗೆಟಕುವ  ಪ್ರೀಮಿಯಂ ವಿಭಾಗದಲ್ಲಿ (ಭಾರತದ ರೂಪಾಯಿ ಲೆಕ್ಕದಲ್ಲಿ 30ರಿಂದ 45 ಸಾವಿರ) ಮುನ್ನಡೆ ಸಾಧಿಸಿದೆ. 

ಭಾರತದಲ್ಲಿ 20 ಸಾವಿರದಿಂದ 30 ಸಾವಿರ ಬೆಲೆ ವಿಭಾಗದಲ್ಲಿ ಮೂರನೇ ತ್ರೈಮಾಸಿಕ 2022ರಲ್ಲಿ ರವಾನೆಗೆ ಸಂಬಂಧಿಸಿದಂತೆ ಮುನ್ನಡೆ ಸಾಧಿಸಿದೆ.

ಇದೆ ವೇಳೆ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಸುನಿಲ್ ದತ್ ಅವರು, “ಭಾರತದಲ್ಲಿ ಗಟ್ಟಿಯಾದ 5G ಸಾಧನ ಪರಿಸರ ವ್ಯವಸ್ಥೆಯನ್ನು ಜಿಯೋಗೆ ಸಕ್ರಿಯಗೊಳಿಸಲು ನಮ್ಮೊಂದಿಗೆ ಕೆಲಸ ಮಾಡಿದ ಒನ್‌ಪ್ಲಸ್ ಕಾರ್ಯತಂತ್ರದ ಪಾಲುದಾರರಾಗಿರಲು ನಾವು ಸಂತೋಷಪಡುತ್ತೇವೆ ಎಂದಿದ್ದು, 5G ಸ್ಮಾರ್ಟ್‌ಫೋನ್‌ನ ನೈಜ ಶಕ್ತಿಯನ್ನು ಜಿಯೋದಂಥ ನಿಜವಾದ 5G ನೆಟ್‌ವರ್ಕ್‌ನಿಂದ ಮಾತ್ರ ಬಿಡುಗಡೆ ಮಾಡಬಹುದಾಗಿದ್ದು, ಅದು ಸ್ವತಂತ್ರ 5G ನೆಟ್‌ವರ್ಕ್‌ನಂತೆ  ಜಾರಿಗೆ ತರಲಾಗಿದೆ.

ಒನ್‌ಪ್ಲಸ್ ಸಾಧನಗಳನ್ನು ಬಳಸುವ ಎಲ್ಲ ಜಿಯೋ ಬಳಕೆದಾರರು ಜಿಯೋ ಟ್ರೂ 5G ಅನ್ನು ಹೊಂದಿರುವ ಅಥವಾ ವೇಗವಾಗಿ ಹೊರತರುತ್ತಿರುವ ಪ್ರದೇಶಗಳಲ್ಲಿ ಜಿಯೋ ವೆಲ್‌ಕಮ್ ಆಫರ್ ಅಡಿಯಲ್ಲಿ ನಿಜವಾದ ಅನಿಯಮಿತ 5G ಇಂಟರ್‌ನೆಟ್ ಅನ್ನು ಪಡೆಯಲು ಸಾಧ್ಯವಾಗುವ ಕುರಿತು ಮಾಹಿತಿ ನೀಡಿದ್ದಾರೆ.



Leave A Reply

Your email address will not be published.