Flipkart Offers : ಉಚಿತ ಸ್ಮಾರ್ಟ್ ಫೋನ್ ನಿಮಗಾಗಿ | ಈ ವೆಬ್ಸೈಟ್ ನಿಂದ ಪಡೆಯಿರಿ ಈ ಬಿಗ್ ಆಫರ್| ಹೇಗೆ ಗೊತ್ತಾ?

ಹೇಳಿ ಕೇಳಿ ಇದು ಡಿಜಿಟಲ್ ಯುಗ.. ಮೊಬೈಲ್ ಎಂಬ ಮಾಯಾವಿ ಪ್ರತಿಯೊಬ್ಬರ ಕೈಯಲ್ಲೂ ಹರಿದಾಡಿ ಟ್ರೆಂಡ್ ಆಗಿ ಬಿಟ್ಟಿದೆ. ಈ ನಡುವೆ ಮೊಬೈಲ್ ಬಳಸದೆ ಇರುವವರೇ ವಿರಳ ಎಂದರೂ ತಪ್ಪಾಗಲಾರದು. ಇದೀಗ ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ ಇದೆ.

 

ಹೌದು!!..ಫ್ಲಿಪ್ ಕಾರ್ಟ್ ವೆಬ್​ಸೈಟ್​​ನಿಂದ ನೀವು ಉಚಿತ ಸ್ಮಾರ್ಟ್​​ಫೋನ್​ ಪಡೆಯಬಹುದಾಗಿದೆ.ಫ್ಲಿಫ್​ಕಾರ್ಟ್​​ನಲ್ಲಿ ಸೂಪರ್​ಡೂಪರ್​ ಆಫರ್​ ಇದ್ದು, ನೀವೇನಾದರೂ ಮೊಬೈಲ್ ಕೊಳ್ಳುವ ಯೋಜನೆ ಇದ್ದರೆ, ಈ ಆಫರ್ ಬಳಸಬಹುದು.

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದ್ದು, ಕೆಲವರು ಹೊಸ ಸ್ಮಾರ್ಟ್​​ಫೋನ್​ ಅನ್ನು ಖರೀದಿಸುವ ಯೋಜನೆ ಹಾಕಿರುವುದು ಸಾಮಾನ್ಯ. ಇದೀಗ ಪ್ರಮುಖ ಇ-ಕಾಮರ್ಸ್​ ವೆಬ್​ಸೈಟ್​ ಆಗಿರುವ ಫ್ಲಿಪ್​ಕಾರ್ಟ್​ ತನ್ನ ಗ್ರಾಹಕರಿಗಾಗಿ ಉಚಿತ ಸ್ಮಾರ್ಟ್​​ಫೋನ್​ ಪಡೆಯುವ ಅವಕಾಶವನ್ನು ಒದಗಿಸುತ್ತಿದೆ.

ಪೋಕೋ ಸಿ31 ಸ್ಮಾರ್ಟ್‌ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 6499 ರೂಪಾಯಿಗೆ ಲಭ್ಯವಿದ್ದು, ಐಡಿಎಫ್​​ಸಿ ಬ್ಯಾಂಕ್ ಗ್ರಾಹಕರು 10 ಶೇಕಡಾದಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಸ್ಮಾರ್ಟ್​ಫೋನ್​ ಅನ್ನು ಇಎಮ್​ಐ ಮೂಲಕವೂ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.

ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ಫೋನ್‌ನಲ್ಲಿ ಶೇಕಡಾ 40% ರಷ್ಟು ರಿಯಾಯಿತಿಯನ್ನು ನೀಡಿದ್ದು, ಈ ಸ್ಮಾರ್ಟ್​ಫೋನ್​ ಮೇಲೆ ಎಕ್ಸ್ ಚೇಂಜ್ ಆಫರ್ ಕೂಡ ನಿಮಗೆ ದೊರೆಯಲಿದೆ. ಅಷ್ಟೆ ಅಲ್ಲದೆ, ಬ್ಯಾಂಕ್ ಆಫರ್‌ ಕೂಡ ಇದ್ದು, ಈ ಆಫರ್ಸ್​ಗಳನ್ನು ಬಳಸಿಕೊಂಡು ನೀವು ಈ ಸ್ಮಾರ್ಟ್‌ಫೋನ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಮೊಬೈಲ್ ಖರೀದಿ ಮಾಡುವ ಯೋಜನೆ ಹಾಕಿದ್ದವರಿಗೆ ಈ ಆಫರ್ ಅತಿ ಪ್ರಯೋಜನಕಾರಿಯಾಗಲಿದೆ.

Leave A Reply

Your email address will not be published.