BSNL Recharge Plan : ಬಿಎಸ್‌ಎನ್‌ಎಲ್‌ ಗ್ರಾಹಕರೇ ನಿಮಗೊಂದು ಬಿಗ್‌ ಶಾಕಿಂಗ್ ನ್ಯೂಸ್

ಪ್ರಸ್ತುತ ದೇಶದಲ್ಲಿ ಹಲವಾರು ಟೆಲಿಕಾಂ ಕಂಪನಿಗಳಿವೆ. ಆದರೆ ಬಿ ಎಸ್​ಎನ್​ಎಲ್ ಒಂದು ಸರ್ಕಾರಿ ಟೆಲಿಕಾಂ ಕಂಪನಿಯಾಗಿದ್ದು ದೇಶದಲ್ಲಿ ಸಾಕಷ್ಟು ದೊಡ್ಡ ಪ್ರೈವೇಟ್​ ಟೆಲಿಕಾಂ ಕಂಪನಿಗಳಿಗೆ ಪೈಪೋಟಿಯನ್ನು ನೀಡುತ್ತಾ ಬಂದಿದೆ. ಆದರೆ ಈಗ ಬಿಎಸ್​ಎನ್​ಎಲ್ ತನ್ನ ಬ್ರಾಡ್​ಬ್ಯಾಂಡ್​ ರೀಚಾರ್ಜ್​ ಪ್ಲಾನ್​ ಅನ್ನು ಸ್ಥಗಿತಗೊಳಿಸುವುದಾಗಿ ನಿರ್ಧರಿಸಿದೆ

ಸದ್ಯ ಬಿಎಸ್​ಎನ್​ಎಲ್ ಟೆಲಿಕಾಂ ಕಂಪನಿ ಕಡಿಮೆ ಬೆಲೆಯ ರೀಚಾರ್ಜ್​ ಪ್ಲಾನ್ (Recharge Plan) ಅನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಟೆಲಿಕಾಂ ಕಂಪನಿಗಳಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಒಂದು ರೀಚಾರ್ಜ್​ ಪ್ಲಾನ್​ಗಳನ್ನು ಜನರಿಗೆ ನೀಡುವ ಕಂಪನಿಯೆಂದರೆ ಅದು ಬಿಎಸ್​ಎನ್​ಎಲ್ ಮಾತ್ರ. ಅದೇ ರೀತಿ ಇದು ದೇಶದ ಹಲವೆಡೆ ಉತ್ತಮ ನೆಟ್​​ವರ್ಕ್​ ಸೇವೆಗಳನ್ನೂ ನೀಡುತ್ತಾ ಬಂದಿದೆ.

ಸದ್ಯ ಬಿಎಸ್‌ಎನ್‌ಎಲ್‌ ಟೆಲಿಕಾಂ ಕಂಪನಿ ಇತ್ತೀಚಿಗಷ್ಟೇ ಪರಿಚಯಿಸಿದ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಒಂದನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿದೆ. ಈ ಪ್ಲಾನ್​ ಗ್ರಾಹಕರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡಿದ್ದು, ಇನ್ನು ಈ ಬ್ರಾಡ್‌ಬ್ಯಾಂಡ್‌ ರೀಚಾರ್ಜ್​ ಪ್ಲಾನ್​ ಇದೇ ಡಿಸೆಂಬರ್‌ 14 ರಿಂದ ಸ್ಥಗಿತವಾಗಲಿದೆ.

ಬಿಎಸ್‌ಎನ್‌ಎಲ್‌ ಟೆಲಿಕಾಂ ಕಂಪನಿಯಿಂದ ಈ ವರ್ಷ ಬಿಡುಗಡೆಯಾಗಿದ್ದಂತಹ 775 ರೂಪಾಯಿಯ ಬ್ರಾಡ್​ಬ್ಯಾಂಡ್​ ರೀಚಾರ್ಜ್​ ಪ್ಲಾನ್​ ಅನ್ನು ಇದೇ ಡಿಸೆಂಬರ್​ 14 ರಿಂದ ನಿಲ್ಲಿಸುವುದಾಗಿ ನಿರ್ಧರಿಸಿದೆ. ಇನ್ನು ಈ ಪ್ಲಾನ್​ 75 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಇದರಲ್ಲಿ 2000ಜಿಬಿ ಡೇಟಾ ಪ್ಲಾನ್ ಅನ್ನು ಗ್ರಾಹಕರಿಗೆ ನೀಡುತ್ತದೆ. ಇದು 150 ಎಮ್​ಬಿಪಿಎಸ್​ ವೇಗದಲ್ಲಿ ಇಂಟರ್ನೆಟ್​ ಕಾರ್ಯನಿರ್ವಹಿಸುತ್ತದೆ.

ಇದಲ್ಲದೆ ಹೆಚ್ಚುವರಿಯಾಗಿ, ಈ ಯೋಜನೆಯು ಡಿಸ್ನಿ+ ಹಾಟ್‌ಸ್ಟಾರ್, ಲಯನ್ಸ್‌ಗೇಟ್, ಶೆಮರೂ, ಹಂಗಾಮಾ, ಸೋನಿಲೈವ್‌, ಝೀ5, ವೂಟ್‌ ಮತ್ತು Yupp ಟಿವಿಯಿಂದ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ಒಟಿಟಿ ಪ್ಲಾನ್ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ವಿಶೇಷ ಏನೆಂದರೆ 775 ರೂಪಾಯಿಯ ಬ್ರಾಡ್​ಬ್ಯಾಂಡ್​ ರೀಚಾರ್ಜ್​ ಪ್ಲಾನ್ ಜೊತೆಗೆ 275 ರೂಪಾಯಿಯ ಪ್ಲಾನ್ ಕೂಡ ಬಿಡುಗಡೆಯಾಗಿತ್ತು. ಆದರೆ ಈ ಪ್ಲಾನ್ ಮುಂದೆಯೂ ಕಾರ್ಯನಿರ್ವಹಿಸಲಿದೆ. ಕೇವಲ 775 ರೂಪಾಯಿಯ ಪ್ಲಾನ್ ಮಾತ್ರ ನಿಲ್ಲಿಸುವುದು ಎಂದು ಕಂಪನಿ ಹೇಳಿಕೊಂಡಿದೆ.

275 ರೂಪಾಯಿಯ ರೀಚಾರ್ಜ್ ಪ್ಲಾನ್ ಕೂಡ 75 ದಿನಗಳವರೆಗಿನ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಯೋಜನೆಯನ್ನು ಹಾಕಿಕೊಂಡ ಗ್ರಾಹಕರು 3300ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಇನ್ನು ಈ ಪ್ಲಾನ್​ನಲ್ಲಿ ದಿನದ ಇಂಟರ್​ನೆಟ್​ ಬಳಕೆ ಮುಗಿದ ನಂತರ ಡೇಟಾ 4ಎಮ್​ಬಿಪಿಎಸ್​ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಯಾರಾದರು 775 ರೂಪಾಯಿಯ ಬ್ರಾಡ್​ಬ್ಯಾಂಡ್​ ರೀಚಾರ್ಜ್​ ಮಾಡಬೇಕೆಂದರೆ ಅದರೆ ಬದಲಿಗೆ 275 ರೂಪಾಯಿ ರೀಚಾರ್ಜ್​ ಮಾಡಿದರೆ ಸಾಕಾಗುತ್ತದೆ.

ಅದಲ್ಲದೆ ಬಿಎಸ್​ಎನ್​ಎಲ್​ನ 499 ರೂಪಾಯಿಯ ಬ್ರಾಡ್​​ಬ್ಯಾಂಡ್​ ರೀಚಾರ್ಜ್​ ಪ್ಲಾನ್​ನಲ್ಲಿ 3300 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ 40 ಎಮ್​ಬಿಪಿಎಸ್​ ವೇಗದಲ್ಲಿ ಇಂಟರ್ನೆಟ್​ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಉಚಿತವಾಗಿ ಅನ್ಲಿಮಿಟೆಡ್​ ವಾಯ್ಸ್​ ಕಾಲ್ ಕೂಡ ಮಾಡಬಹುದಾಗಿದೆ.

ಸದ್ಯ ಬಿಎಸ್​ಎನ್​ಎಲ್ ನ್ನು ಬಳಸುವವರಿಗೆ ಇದೊಂದು ಖುಷಿಯ ವಿಚಾರವಾಗಿದ್ದು ಕಡಿಮೆ ರಿಚಾರ್ಜ್ ಪ್ಲಾನ್ ಜೊತೆಗೆ ಡಿಸ್ನಿ+ ಹಾಟ್‌ಸ್ಟಾರ್, ಲಯನ್ಸ್‌ಗೇಟ್, ಶೆಮರೂ, ಹಂಗಾಮಾ, ಸೋನಿಲೈವ್‌, ಝೀ5, ವೂಟ್‌ ಮತ್ತು Yupp ಟಿವಿಯಿಂದ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಮತ್ತು ಒಟಿಟಿ ಪ್ಲಾನ್ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

Leave A Reply

Your email address will not be published.