Ambulance Theft : ಆಸ್ಪತ್ರೆಯಲ್ಲಿದ್ದ ಆಂಬ್ಯುಲೆನ್ಸ್ ಕದ್ದು, 8 ಕಿ.ಮೀ.ಓಡಿಸಿದ ಬಾಲಕ |

ಇತ್ತೀಚಿನ ಕಾಲದಲ್ಲಿ ಮಕ್ಕಳು ಯಾವ ರೀತಿ ಸಾರ್ವಜನಿಕ ಸ್ಥಳದಲ್ಲಿ ನಡೆದುಕೊಳ್ಳುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ. ಹೌದು ಇಲ್ಲೊಬ್ಬ ಬಾಲಕ ಆ್ಯಂಬುಲೆನ್ಸ್ ಕದ್ದು 8 ಕಿಮೀ ಓಡಿಸಿದ ಘಟನೆ ನಡೆದಿದೆ.

 

ಆ್ಯಂಬುಲೆನ್ಸ್ ವಾಹನ ಚಾಲಕ ಬಿಜೋ ಎಂಬ ವ್ಯಕ್ತಿ ಕೀಲಿಯನ್ನು ವಾಹನದೊಳಗೆ ಬಿಟ್ಟು ನೀರು ಸಂಗ್ರಹಿಸಲು ಹೊರಟಿದ್ದಾಗ ಅಪ್ರಾಪ್ತ ಬಾಲಕ ವಾಹನವನ್ನು ಕಳ್ಳತನ ಮಾಡಿದ್ದಾನೆ ಎಂದು ಮಾಹಿತಿ ದೊರೆತಿದೆ.

ವರದಿಗಳ ಪ್ರಕಾರ, ಕೇರಳದ ತ್ರಿಶೂರ್‌ನಲ್ಲಿ 13 ವರ್ಷದ ಬಾಲಕನೊಬ್ಬ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಕದ್ದು 8 ಕಿ.ಮೀ ದೂರ ಓಡಿಸಿದ ಘಟನೆ ಮಂಗಳವಾರ ನಡೆದಿದೆ. ಸದ್ಯ ಆ್ಯಂಬುಲೆನ್ಸ್ ಚಾಲಕ ಕಳ್ಳತನದ ದೂರು ದಾಖಲಿಸಿದ್ದಾರೆ. 10 ನೇ ತರಗತಿಯಲ್ಲಿ ಓದುತ್ತಿರುವ ಹುಡುಗ ಸುಮಾರು ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಕಾರಣವಾಗಿ ಜ್ವರಕ್ಕೆ ಎಂದು ತ್ರಿಶೂರ್ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಾಲಕನ ತಂದೆ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಸದ್ಯ ಬಾಲಕ ಆ್ಯಂಬುಲೆನ್ಸ್ ವಾಹನ ಚಲಾಯಿಸವಾಗ ಯಾವುದೇ ಅಪಾಯಗಳು ಸಂಭವಿಸದೆ ಪಾರಾಗಿರುವುದಾಗಿ ಪೊಲೀಸ್ ಹೇಳಿಕೆ ನೀಡಿದ್ದಾರೆ.

Leave A Reply

Your email address will not be published.