BSF Recruitment 2023: ಡಿಗ್ರಿ ಆದವರಿಗೆ ಉದ್ಯೋಗವಕಾಶ| ಗಡಿ ಭದ್ರತಾ ಪಡೆಯಲ್ಲಿ ಹುದ್ದೆ ನಿಮ್ಮದಾಗಿಸಿ | ಸಂಬಳ ₹ 1.77 ಲಕ್ಷ
BSF Recruitment 2023: ಗಡಿ ಭದ್ರತಾ ಪಡೆ(Border Security Force) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಮಾಡಬಯಸುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು.
ಸಂಸ್ಥೆ : ಗಡಿ ಭದ್ರತಾ ಪಡೆ
ಹುದ್ದೆ : ವೆಟರಿನರಿ ಅಸಿಸ್ಟೆಂಟ್ ಸರ್ಜನ್
ಒಟ್ಟು ಹುದ್ದೆ : 20
ವೇತನ ಮಾಸಿಕ : ₹56,100-1,77,500
ಉದ್ಯೋಗದ ಸ್ಥಳ : ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 10/12/2022
ಅರ್ಜಿ ಸಲ್ಲಿಸಲು ಕೊನೆ ದಿನ- 09/01/2023
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂಡ ಕಡ್ಡಾಯವಾಗಿ ವೆಟರಿನರಿ ಸೈನ್ಸಸ್ & ಅನಿಮಲ್ ಹಸ್ಬ್ಯಾಂಡ್ರಿ ವಿಭಾಗದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಜನವರಿ 9, 2023ಕ್ಕೆ ಕನಿಷ್ಠ 23 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.
ಒಬಿಸಿ ಅಭ್ಯರ್ಥಿಗಳು- 3 ವರ್ಷ, SC/ST ಅಭ್ಯರ್ಥಿಗಳು- 5 ವರ್ಷ, ಕೇಂದ್ರ ಸರ್ಕಾರಿ ನೌಕರರು (UR)ಅಭ್ಯರ್ಥಿಗಳು-5 ವರ್ಷ, ಕೇಂದ್ರ ಸರ್ಕಾರಿ ನೌಕರರು (OBC) ಅಭ್ಯರ್ಥಿಗಳು- 8 ವರ್ಷ, ಕೇಂದ್ರ ಸರ್ಕಾರಿ ನೌಕರರು (SC/ST) ಅಭ್ಯರ್ಥಿಗಳು- 10 ವರ್ಷ
ಅರ್ಜಿ ಶುಲ್ಕ: SC/ST/BSF ಸರ್ವಿಂಗ್ ಸಿಬ್ಬಂದಿ/ ಮಹಿಳಾ ಅಭ್ಯರ್ಥಿಗಳು- 47.2 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 447.2 ರೂ.
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ, ಫಿಜಿಕಲ್ ಸ್ಟ್ಯಾಂಡರ್ಡ್ ಟೆಸ್ಟ್ , ಫಿಜಿಕಲ್ ಎಫಿಸಿಯೆನ್ಸಿ ಟೆಸ್ಟ್ , ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ