ಮದುವೆಯಾದ ಹತ್ತು ವರ್ಷಗಳ ಬಳಿಕ ಮಗುವಿನ ನಿರೀಕ್ಷೆಯಲ್ಲಿ ಮಗಧೀರ ನಟ

ನಟ ರಾಮ್ ಚರಣ್ ತೇಜ ಹಾಗೂ ಉಪಾಸನಾ ದಂಪತಿ ಮದುವೆಯಾಗಿ 10 ವರ್ಷಗಳ ನಂತರ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ಮಗಧೀರ ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್ ಗೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್, ಕಾಮೆಂಟ್ ಗಳು ಬರುತ್ತಿವೆ. ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ನಟ ರಾಮ್ ಚರಣ್ ತೇಜ ತಮ್ಮ ಪೋಸ್ಟ್ ನಲ್ಲಿ,”ನಾನು, ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಸುರೇಖಾ, ಚಿರಂಜೀವಿ ಹಾಗೂ ಶೋಬನಾ, ಅನಿಲ್ ಕಾಮಿನೇನಿ ಕಡೆಯಿಂದ ಕೃತಜ್ಞತೆಗಳು” ಎಂದು ಬರೆಯಲಾಗಿದೆ.
ಈ ದಂಪತಿಗಳ ಮದುವೆ 2012 ಜೂನ್ 14ರಂದು ಹೈದರಾಬಾದ್ ಹೊರವಲಯದಲ್ಲಿರುವ ಮೊಯಿನಾಬಾದ್ ಫಾರಂ ಹೌಸ್‌ನಲ್ಲಿ ನಡೆಯಿತು. ಉಪಾಸನಾ ಕಾಮಿನೇನಿ ಇವರು ರಾಮ್ ಚರಣ್ ತೇಜ ಅವರ ಬಾಲ್ಯದ ಗೆಳೆತಿ ಹಾಗೂ ಆಪೋಲೊ ಆಸ್ಪತ್ರೆಗಳ ಮುಖ್ಯಸ್ಥ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳು ಆಗಿದ್ದಾರೆ. ಇನ್ನೂ, ಈ ಮದುವೆಗೆ ಹಲವಾರು ಚಿತ್ರರಂಗದ,ರಾಜಕೀಯ ವ್ಯಕ್ತಿಗಳು ಹಾಜರಾಗಿ ಹರಿಸಿ,ಹಾರೈಸಿದ್ದರು. ಇದೀಗ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯ ಸಂಭ್ರಮದಲ್ಲಿದ್ದಾರೆ.
ಇನ್ನೂ, ಈ ಹಿಂದೆ ಸದ್ಗುರು ಜೊತೆಗೆ ಈ ಬಗ್ಗೆ ಮಾತನಾಡಿದ್ದ ಉಪಾಸನಾ ಅವರು, ನಾನು ಮದುವೆಯಾಗಿ ಖುಷಿಯಾಗಿ 10 ವರ್ಷ ಕಳೆದಿದ್ದೇನೆ. ನನಗೆ ನನ್ನ ಜೀವನ, ಕುಟುಂಬ ಅಂದರೆ ತುಂಬ ಇಷ್ಟವಿದೆ, ಆದರೆ ಜನರು ನನ್ನ ಜೀವನದ ಬಗ್ಗೆ, ಮಗುವಿನ ಬಗ್ಗೆ ಯಾಕೆ ಪ್ರಶ್ನೆ ಕೇಳ್ತಾರೆ ಅಂತ ಅರ್ಥ ಆಗುತ್ತಿಲ್ಲ. ಇದಕ್ಕೆ ಉತ್ತರ ಕೊಡಲು ಇಷ್ಟಪಡದಿರುವ ಹಲವಾರು ಮಹಿಳೆಯರಿದ್ದಾರೆ ಎಂದು ಹೇಳಿದ್ದರು.
ಈ ಬಗ್ಗೆ ರಾಮ್ ಚರಣ್ ತೇಜ ಅವರು ಕೆಲವು ಮಾತನ್ನಾಡಿದ್ದರು, ತಾನು ಸಿನಿಮಾಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದು, ಉಪಾಸನಾಗೂ ಕೂಡ ಕೆಲವೊಂದು ಗುರಿಗಳಿವೆ. ಹಾಗಾಗಿ ಒಂದಷ್ಟು ವರ್ಷ ಮಗು ಮಾಡಿಕೊಳ್ಳದಿರುವ ಬಗ್ಗೆ ಯೋಚನೆ ಮಾಡಿದ್ದೇವೆ ಎಂದು ಹೇಳಿದ್ದರು.