ಭಲೇ ಮದುಮಗ : ಬರೋಬ್ಬರಿ 11 ಲಕ್ಷ ವರದಕ್ಷಿಣೆ ನಿರಾಕರಿಸಿದ ಹುಡುಗ | ಈತ ತಗೊಂಡದ್ದು ಎಷ್ಟು ಗೊತ್ತಾ?

ಮದುವೆ ಎಂಬ ಶುಭ ಕಾರ್ಯಕ್ರಮಕ್ಕೆ ಅಣಿಯಾಗುವ ಸಂದರ್ಭದಲ್ಲಿ ಮೊದಲು ಬರುವ ಪ್ರಶ್ನೆಯೇ ವರದಕ್ಷಿಣೆ!! ವಧುವಿನ ಕಡೆಯವರು ತಮ್ಮ ಮುದ್ದಿನ ಮಗಳನ್ನು ಮತ್ತೊಬ್ಬರ ಕೈಗೆ ಮದುವೆ ಮಾಡಿಸಿಕೊಟ್ಟಾಗ ವರದಕ್ಷಿಣೆ ನೀಡಿ ಮಗಳ ಮುಂದಿನ ಜೀವನ ಸುಖಮಯವಾಗಿರಬೇಕು ಎಂದು ಪ್ರತಿ ಹೆಣ್ಣು ಹೆತ್ತವರ ಮನದ ಅಭಿಲಾಷೆಯಾಗಿರುತ್ತದೆ. ಹಾಗಾಗಿ, ವರನ ಕಡೆಯವರು ಎಷ್ಟೇ ಬೇಡಿಕೆ ಇಟ್ಟರು ಹೆತ್ತು ಹೊತ್ತ ಮಗಳ ಜೀವನದ ದೃಷ್ಟಿಯಿಂದ ಅದೆಷ್ಟೇ ಕಷ್ಟ ಎದುರಾದರೂ ಕೂಡ ಸಾಲ ಮಾಡಿ ವರನ ಕಡೆಯವರಿಗೆ ವರದಕ್ಷಿಣೆ ನೀಡುವ ಪರಿಪಾಠ ಇಂದಿಗೂ ಮುಂದುವರೆಯುತ್ತಾ ಬಂದಿದೆ .

 


ಹಿಂದಿನ ಕಾಲದಿಂದಲೂ ವರದಕ್ಷಿಣೆಯನ್ನು (Dowry) ಪಡೆಯುವ ಕ್ರಮ ರೂಡಿಯಾಗಿದ್ದು, ಅದನ್ನು ಭಾರತದಲ್ಲಿ ನಿಷೇಧಿಸಲಾಗಿದ್ದರೂ, ಈ ಸಂಪ್ರದಾಯ ದೇಶದ ಅನೇಕ ಭಾಗಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವುದನ್ನು ನಾವು ಈಗಲೂ ಕಾಣಬಹುದಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಅನೇಕ ಮದುವೆಗಳು (Marriages) ಮುರಿದು ಬೀಳುವುದಕ್ಕೆ ಕಾರಣ ವರದಕ್ಷಿಣೆ (Dowry Case News) ಎಂಬುದು ಅನೇಕ ಬಾರಿ ತಿಳಿದು ಬಂದಿದೆ. ಇದಕ್ಕೆ ತದ್ವಿರುದ್ಧವಾದ ಜೊತೆಗೆ ಉಳಿದವರಿಗೆ ಮಾದರಿಯಾದ ವರನ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಇಲ್ಲೊಬ್ಬ ವರ ಎಲ್ಲರಿಗು ಮಾದರಿಯಾಗಿದ್ದಾರೆ!! ಅರೇ.. ಹೇಗೆ ಅಂತೀರಾ??

ಹೌದು!!! ಉತ್ತರ ಪ್ರದೇಶದ ವರನೊಬ್ಬ ವರದಕ್ಷಿಣೆ ತೆಗೆದುಕೊಳ್ಳಲು ನಿರಾಕರಿಸಿದ್ದಾನೆ. ಈ ಸುದ್ದಿ ಕೇಳಿದಾಗ ಎಲ್ಲರಿಗು ಅಚ್ಚರಿಯಾಗೋದು ಪಕ್ಕಾ!! ಮದುವೆ ಸಮಾರಂಭಕ್ಕೆ ಅದರಲ್ಲೂ ವಿಶೇಷವಾಗಿ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ವರದಕ್ಷಿಣೆಗೆ ಬೇಡಿಕೆ ಇಡುವುದನ್ನು ವರದಕ್ಷಿಣೆ ಕೊಡದೆ ಇರುವುದರಿಂದ ಮದುವೆಗಳನ್ನು ರದ್ದುಗೊಳಿಸಿದ ಅನೇಕ ಘಟನೆಗಳನ್ನು ನೋಡಿರಬಹುದು.

ಅದರಲ್ಲೂ ಹುಡುಗನು ಒಳ್ಳೆಯ ಕೆಲಸದಲ್ಲಿದ್ದರೆ ಇಲ್ಲವೇ ಸರ್ಕಾರಿ ಉದ್ಯೋಗವನ್ನು ಹೊಂದಿದ್ದು, ಹುಡುಗಿಯ ಕುಟುಂಬದವರಿಗೆ ಭಾರಿ ಮೊತ್ತದ ಉಡುಗೊರೆ ಬೇಡಿಕೆ ಇಡೋದು ವಾಡಿಕೆ.ಆದ್ರೆ, ವರ ಸೌರಭ್ ಚೌಹಾಣ್ ಕಂದಾಯ ಅಧಿಕಾರಿಯಾಗಿದ್ದು, ವಧು ನಿವೃತ್ತ ಸೈನಿಕರೊಬ್ಬರ ಮಗಳಾಗಿದ್ದು, ಪ್ರಿನ್ಸಿ ಲಖನ್ ಗ್ರಾಮದ ನಿವಾಸಿಯಾಗಿದ್ದಾರೆ.

ಆದರೆ ಮುಜಾಫರ್ ನಗರದ ಸೌರಭ್ ಚೌಹಾಣ್ ಎಂಬ ವರ ತಮ್ಮ ವಿವಾಹದಲ್ಲಿ ತಮ್ಮ ಅತ್ತೆ-ಮಾವನಿಂದ ವರದಕ್ಷಿಣೆ ರೂಪದಲ್ಲಿ ಪಡೆದ 11 ಲಕ್ಷ ರೂಪಾಯಿಗಳು ಮತ್ತು ಆಭರಣಗಳನ್ನು ಅವರಿಗೆ ಹಿಂದಿರುಗಿಸಿದ್ದಾರೆ. ಇವರ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ಸಿಕ್ಕಿದ್ದೇ ಚಾನ್ಸ್ ಎಂದು ಇನ್ನೂ ಸಿಕ್ಕರೆ ಪರವಾಗಿಲ್ಲ ಎಂದು ಚಿಂತಿಸಿದರು ಅಚ್ಚರಿಯಿಲ್ಲ. ಆ ದೊಡ್ಡ ಮೊತ್ತದ ಬದಲಿಗೆ ಕೇವಲ 1 ರೂಪಾಯಿಯನ್ನು ಶಗುನ್ ರೂಪದಲ್ಲಿ ಸ್ವೀಕರಿಸಿದ ವರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ದೊಡ್ದ ಮೊತ್ತದ ಬದಲಿಗೆ ವರ ಕೇವಲ ಒಂದು ರೂಪಾಯಿಯನ್ನು ‘ಶಗುನ್’ ಅಂತ ಸ್ವೀಕರಿಸಿ ವಧುವನ್ನು ವರಿಸಿದ ಅಪರೂಪದ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಬೆಳಕಿಗೆ ಬಂದಿದೆ.

ಸೌರಭ್ ತನ್ನ ಮದುವೆಯ ಮೆರವಣಿಗೆಯೊಂದಿಗೆ ಲಖನ್ ಹಳ್ಳಿಯನ್ನು ತಲುಪಿದ್ದಾರೆ. ಈ ಬಳಿಕ, ಮದುವೆಗೆ ಮೊದಲು ಹುಡುಗಿಯ ಕುಟುಂಬವು ವರದಕ್ಷಿಣೆಯನ್ನು ಅವರ ಕಡೆಯಿಂದ ನೀಡಿದಾಗ, ಅವರು ಅದನ್ನು ಸ್ವೀಕರಿಸದೆ “ಮದುವೆ ಸಮಾರಂಭದಲ್ಲಿ ನಡೆಯುವ ದುಂದು ವೆಚ್ಚವನ್ನು ಸಹ ಕಡಿಮೆ ಮಾಡಿಕೊಳ್ಳಬೇಕು” ಎಂಬ ಉತ್ತಮ ಸಂದೇಶ ಕೂಡ ನೀಡಿದ್ದಾರೆ. ವರ ಸೌರಭ್ ಅವರ ನಿರ್ಧಾರವನ್ನು ಕೇಳಿದ ಜನ ಮೆಚ್ಚುಗೆಯ ಸುರಿಮಳೆಗೈದು ಶ್ಲಾಘಿಸಿದ್ದಾರೆ.

Leave A Reply

Your email address will not be published.