24 ಇಂಚು ಉದ್ದದ 5 ತಲ್ವಾರ್ ನುಂಗಲು ಹೋದ ಮುರುಗುನ್ | ಮುರಿದು ಬಿತ್ತು ಶ್ವಾಸಕೋಶ, ಹೊಟ್ಟೆ, ಯಕೃತ್ತು ಇತ್ಯಾದಿ !
25 ವರ್ಷಗಳ ಪರಿಶ್ರಮ ಮತ್ತು ಪರಿಪೂರ್ಣ ಅಂದುಕೊಂಡ ಕಾರ್ಯವು ನಿರ್ಣಾಯಕ ಕ್ಷಣದಲ್ಲಿ ಸ್ವಲ್ಪ ತಪ್ಪಾದಾಗ ಏನಾಗುತ್ತದೆ? ಎಂಬುದಕ್ಕೆ ಈ ಲೇಖನ ಒಳ್ಳೆಯ ಉದಾಹರಣೆ. “ಮುರುಗುನ್ ದಿ ಮಿಸ್ಟಿಕ್” ಎಂದು ಕರೆಯಲ್ಪಡುವ ಡೇರ್ ಡೆವಿಲ್ ಸ್ಯಾನ್ ಡಿಯಾಗೋದ ಸ್ಕಾಟ್ ನೆಲ್ಸನ್ ‘ಕತ್ತಿ ನುಂಗುವ ‘ ಸಂದರ್ಭ ಭೀಕರ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾನೆ.
ಸ್ಟೇಜ್ ಪರ್ಫಾರ್ಮೆ್ಸ್ ಮಾಡುವ ಸಂದರ್ಭ ಕತ್ತಿ ನುಂಗುವಾಗ ಉಂಟಾದ ಗಂಭೀರ ಗಾಯದಿಂದ ಆತ ಬದುಕಿ ಉಳಿಯುವುದು ಅಸಾಧ್ಯ ಎನ್ನುವುದರ ಮಟ್ಟಿಗೆ ಆತ ಗಾಯಗೊಂಡಿದ್ದ. ಅಷ್ಟಕ್ಕೂ ಅಂತಹ ಕತ್ತಿ ನುಂಗಿದ ಘಟನೆಯಾದರೂ ಏನು ಎಂದು ಮೊದ್ಲು ತಿಳಿಯೋಣ.
ಅವತ್ತು ವಾಷಿಂಗ್ಟನ್ ಡಿಸಿ ನಲ್ಲಿ ಸ್ಟೇಜ್ ಪರ್ಫಾರ್ಮೆನ್ಸ್ ಒಂದು ಏರ್ಪಾಡಾಗಿತ್ತು. ಅಲ್ಲಿ, ಪ್ರೊಫೆಷನಲ್ ಆಗಿ ಕಳೆದ 25 ವರ್ಷಗಳಿಂದ ಕತ್ತಿ ನುಂಗಿ ಅನುಭವ ಇರುವ “ಮುರುಗುನ್ ದಿ ಮಿಸ್ಟಿಕ್” ಸ್ಟೇಜ್ ಪ್ರದರ್ಶನ ನೀಡುತ್ತಿದ್ದ. 24 ರಿಂದ 28 ಇಂಚು ಉದ್ದದ, ಅರ್ಧ ಇಂಚು ಅಗಲದ ಒಟ್ಟು ಐದು ಕತ್ತಿಗಳನ್ನು ಆದ ತನ್ನ ಬಾಯೊಳಗೆ ತುರುಕಿಸಿಕೊಂಡಿದ್ದ. ಇಂತಹಾ ಪ್ರದರ್ಶನವನ್ನು ಆತ ಹಲವು ದಶಕಗಳಿಂದ ನಡೆಸುತ್ತಿದ್ದರೂ, ಮೊನ್ನೆ ಅದೃಷ್ಟ ಕೈಕೊಟ್ಟಿದ್ದರಿಂದ ಆತ ಭೀಕರವಾಗಿ ಗಾಯಗೊಂಡಿದ್ದ. ಕತ್ತಿಗಳು ಆತನ ಜಠರ ಸ್ವಾಶಕೋಶ ಲಿವರ್ ಗಳನ್ನು ತೂರಿಕೊಂಡು ಹೋಗಿತ್ತು. ಶ್ವಾಸಕೋಶವನ್ನು ಛಿದ್ರ ಮಾಡಿಕೊಂಡು ಸಾಗಿತ್ತು ಆತನ ಕತ್ತಿ ನುಂಗೋ ಪ್ರದರ್ಶನ. ಕತ್ತಿ ನುಂಗಿ ಗಂಭೀರ ಸ್ಥಿತಿಯಲ್ಲಿದ್ದ ಮುರುಗುನ್ ದಿ ಮಿಸ್ಟಿಕ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಅವರ ಶ್ವಾಸಕೋಶದ ಒಂದು ಭಾಗವನ್ನು ತೆಗೆದುಹಾಕಲಾಯಿತು. ನೆಲ್ಸನ್ ಚೇತರಿಸಿಕೊಳ್ಳುತ್ತಾರೆ ಎಂದು ವೈದ್ಯರು ಭಾವಿಸಿರಲಿಲ್ಲ. ಆದರೆ.ಆತ ಬದುಕಿ ಬಂದಿದ್ದಾನೆ.
ಸಾವಿನೊಂದಿಗೆ ಹೋರಾಡಿ ಒಂದು ತಿಂಗಳ ಕಾಲ ಅನೇಕ ಶಸ್ತ್ರಚಿಕಿತ್ಸೆಗಳಿಂದ ಹೊರಬಂದ ನಂತರ ಆತನಿಗೆ ಸುರಕ್ಷತೆ ಬಗ್ಗೆ ಅರಿವು ಮೂಡಿದೆ. ಅದರ ಬಗ್ಗೆ ಪೋಸ್ಟ್ ಮಾಡಿದ ಸ್ಕಾಟ್ ನೆಲ್ಸನ್, ತನ್ನ ತಾಯಿ ತನ್ನ ಈ ಅವಘಡದ ಸಂದರ್ಭದಲ್ಲಿ ಭೀಕರ ನರಕವನ್ನು ಅನುಭವಿಸಿದ್ದಾಳೆಂದು ಹೇಳಿದ್ದು, ಮತ್ತೆ ಎಂದೂ ಈ ಕೃತ್ಯವನ್ನು ಮಾಡುವುದಿಲ್ಲ ಎಂದು ಆತ ಪ್ರತಿಜ್ಞೆ ಮಾಡಿದ್ದಾನೆ.