ವಧುವಿನ ನಿಗೂಢ ನಡೆ: ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ನಡೆದೆಹೊಯ್ತು ಘೋರ ದುರಂತ!!

ಮದುವೆ ಎಂಬ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಬೇಕಿದ್ದ ವಧು ಕಾಲದ ಕರೆಗೆ ಓಗೊಟ್ಟು ಇಹಲೋಕದ ಯಾತ್ರೆಯನ್ನ ಮುಗಿಸಿದ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ಈ ದುರ್ಘಟನೆ ನಡೆದಿದ್ದು ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ನವೀಪೇಟೆ ಎಂಬಲ್ಲಿ!!! ನವ ಜೀವನದ ಕನಸು ಹೊತ್ತ ಜೋಡಿಗೆ ಆಘಾತ ಕಾದಿತ್ತು!!.. ಹೌದು… ಇನ್ನೇನು ಕೆಲವೇ ಗಂಟೆಗಳಲ್ಲಿ ವಧುವಿಗೆ ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ಸಾವಿನ ಕದ ತಟ್ಟಿದ ಆತಂಕಕಾರಿ ಘಟನೆ ನಡೆದಿದೆ.

 

ಇಂದು ಮುಂಜಾನೆ ಈ ದುರ್ಘಟನೆ ನಡೆದಿದ್ದು, ಎಲ್ಲೆಡೆ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಯಾರ ಕೆಟ್ಟ ದೃಷ್ಟಿ ಈ ಜೋಡಿಯ ಮೇಲೆ ಬಿತ್ತೋ ತಿಳಿಯದು. ನೂರಾರು ಕನಸು ಹೊತ್ತ ಜೋಡಿಗೆ ವಿಧಿ ಲಿಖಿತವೆ ಬೇರೆ ಇತ್ತು ಎಂದು ಯಾರು ತಾನೇ ಊಹಿಸಲು ಸಾಧ್ಯ!! ವಧುವಿನ ಸಾವಿನ ಸುದ್ದಿ ಕೇಳಿ ಸಂಭ್ರಮದ ವಾತಾವರಣ ಮಾಯವಾಗಿ ಸೂತಕದ ಛಾಯೆ ಆವರಿಸಿತ್ತು.

ಈ ದುರ್ಘಟನೆ ಯಿಂದ ಶುಭ ಗಳಿಗೆಗೆ ಬಂದವರೆಲ್ಲ ಆಘಾತಕ್ಕೀಡಾಗಿದ್ದರು. ಮೃತ ವಧುವನ್ನು ರಾವಲ್ಲಿ ಎಂದು ಗುರುತಿಸಲಾಗಿದ್ದು, ಶುಭ ಗಳಿಗೆಗೆ ಅಂತಿಮ ತಯಾರಿಯಲ್ಲಿದ್ದ ಎರಡು ಕುಟುಂಬಸ್ಥರಿಗೆ ನಿಜಕ್ಕೂ ಆಘಾತ ಉಂಟಾಗಿದೆ. ರಾವಲ್ಲಿ ಮದುವೆ ನಿಜಾಮಾಬಾದ್​ ಮೂಲದ ಸಂತೋಷ್ ಎಂಬುವರ ಜೊತೆ ನಿಗದಿಯಾಗಿದ್ದು, ಆದರೆ, ಮದುವೆ ದಿನವೇ ನಡೆದ ದುರಂತ ಎಲ್ಲರನ್ನು ಆಘಾತಕ್ಕೆ ದೂಡಿದ್ದು, ಮೃತಳ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಬಲವಂತವದ ಮದುವೆಗೆ ಒಪ್ಪಿಗೆ ಇಲ್ಲದೆ ಇದ್ದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರ ಬಹುದೇನೋ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ . ಇನ್ನೊಂದೆಡೆ ಭಾವಿ ಪತಿಯ ಕಿರುಕುಳದಿಂದ ರಾವಲ್ಲಿ ಸಾವಿಗೀಡಾಗಿದ್ದಾಳೆ ಎಂದು ಪಾಲಕರು ಆರೋಪ ಮಾಡಿದ್ದು, ಆದರೆ, ವಧುವಿನ ಸಾವಿಗೆ ನಿಖರ ಕಾರಣ ಬಹಿರಂಗವಾಗಿಲ್ಲ. ಸದ್ಯ ಖಾಕಿ ಪಡೆ ಈ ಪ್ರಕರಣದ ಕುರಿತು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.