ಬಾಬಾ ವಂಗಾರನ್ನೇ ಹೋಲುವ 19ರ ಮಹಿಳೆಯ ಭವಿಷ್ಯವಾಣಿ | ಎಲ್ಲವೂ ನುಡಿದಂತೆ ನಡೆದಿದೆ ಈಕೆಯ ಭವಿಷ್ಯ!

ಪ್ರಕೃತಿಯಲ್ಲಿ ನಡೆಯೋ ವಿಚಿತ್ರತೆಗಳ ಬಗ್ಗೆ ಬಲ್ಲವರು ಯಾರು ಇಲ್ಲ. ಆದ್ರೆ ಕೆಲವೊಂದು ಸ್ವಾಮೀಜಿಗಳು ಹೇಳಿರೋ ಮಾತುಗಳು ನಿಜವಾಗಿ ಸಂಭವಿಸಿರೋದು ಉಂಟು. ಕೆಲವೊಂದು ಸುಳ್ಳಾದರೆ ಇನ್ನೂ ಕೆಲವು ನಂಬಲೇ ಬೇಕಾಗಿದೆ. ಅದರಂತೆ ಬಲ್ಗೇರಿಯಾದ ಬಾಬಾ ವಂಗಾ ಅವರು ನುಡಿದಿರುವ ಭವಿಷ್ಯವಾಣಿಗಳೆಲ್ಲಾ ಇದುವರೆಗೂ ಸುಳ್ಳಾಗಲಿಲ್ಲ.

 

ಹೌದು. 1911 ರಲ್ಲಿ ಜನಿಸಿದ ಬಾಬಾ ವಂಗಾ, 12 ನೇ ವಯಸ್ಸಿನಲ್ಲಿ ಭಾರಿ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ತನ್ನ ದೃಷ್ಟಿ ಕಳೆದುಕೊಂಡ ನಂತರ, ಭವಿಷ್ಯವಾಣಿ ಹೇಳುವುದಕ್ಕಾಗಿ ದೇವರಿಂದ ಉಡುಗೊರೆ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ. ಇದೀಗ ಅವರನ್ನೇ ಹೋಲುವ ಮಹಿಳೆಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಅದರಲ್ಲೂ ವಿಶೇಷ ಅಂದ್ರೆ ಅವರ ವಯಸ್ಸು 19 ವರ್ಷ. ಅವರೇ ಹನ್ನಾ ಕ್ಯಾರೊಲ್ ಎಂಬಾಕೆ. ಇವರು ವರ್ಷದ ಆರಂಭದಲ್ಲಿ 28 ಭವಿಷ್ಯವಾಣಿಗಳನ್ನು ಬರೆದಿದ್ದಾರೆ. ಇದಾಗಲೇ ಹಲವು ತಾರೆಯರ ಕುರಿತಾಗಿ ಮೊದಲೇ ಹನ್ನಾ ಭವಿಷ್ಯವನ್ನು ನುಡಿದಿದ್ದಾರೆ. ಇದು ನಿಜವಾಗುತ್ತದೆ ಎನ್ನುವುದು ಅವರ ಮಾತು.

ಇವುಗಳಲ್ಲಿ 12 ಪ್ರಮುಖ ಘಟನೆಗಳು ಈಗಾಗಲೇ ನಿಜವಾಗಿವೆ. ವಿಶೇಷವಾಗಿ ರಾಣಿ ಎಲಿಜಬೆತ್ II ರ ಮರಣವನ್ನು ಸರಿಯಾಗಿ ಊಹಿಸಿದ್ದಾರೆ. ಆಕೆಯ ಇತರ ಕೆಲವು ಭವಿಷ್ಯವಾಣಿಗಳಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಮಗುವನ್ನು ಸ್ವಾಗತಿಸುತ್ತಿರುವುದು, ರಿಹಾನ್ನಾ ತನ್ನ ಗರ್ಭಾವಸ್ಥೆಯನ್ನು ಘೋಷಿಸುವುದು ಮತ್ತು ಹ್ಯಾರಿ ಸ್ಟೈಲ್ಸ್ ಮತ್ತು ಬೆಯಾನ್ಸ್‌ನಿಂದ ಹೊಸ ಆಲ್ಬಂಗಳ ಭವಿಷ್ಯವಾಣಿಯನ್ನೂ ನುಡಿಯಲಾಗಿತ್ತು.

“ನಾನು ಊಹಿಸಿದ ಏನಾದರೂ ಸಂಭವಿಸಿದಾಗ ಅದು ನಿಜವಾಗಿಯೂ ರೋಮಾಂಚನಕಾರಿಯಾಗಿದೆ, ಹಲವರು ಹಲವು ರೀತಿಯ ಪ್ರಶ್ನೆಗಳನ್ನು ನನಗೆ ಕೇಳುತ್ತಿರುತ್ತಾರೆ. ನಾನು ಹೇಳುವುದೆಲ್ಲವೂ ನಿಜವಾಗಿರುತ್ತವೆ ಎಂದು ಅವರು ಪ್ರತಿಕ್ರಿಯೆ ನೀಡಿದಾಗ ನನಗೆ ಸಂತೋಷವಾಗುತ್ತದೆ ಎಂದು ಮಾಧ್ಯಮಗಳ ಜೊತೆ ಹನ್ನಾ ಹೇಳಿದರು.

Leave A Reply

Your email address will not be published.