Viral Video : ಮೊಸಳೆಯ ನಕಲಿ ವೇಷಭೂಷಣ ತೊಟ್ಟ ವ್ಯಕ್ತಿ | ಮೊಸಳೆಯನ್ನೇ ಮಂಗ ಮಾಡಲು ಹೋಗಿ ….ಕೊನೆಗೆ‌..

Share the Article

ಮನುಷ್ಯನಿಗು ಪ್ರಾಣಿ ಪಕ್ಷಿಗಳಿಗೂ ಹಲವಾರು ವ್ಯತ್ಯಾಸಗಳಿವೆ. ಅಲ್ಲದೆ ಮನುಷ್ಯ ಬುದ್ಧಿ ಜೀವಿ ಆಗಿದ್ದಾನೆ. ಆದರೆ ಕೆಲವೊಮ್ಮೆ ಮನುಷ್ಯ ಬುದ್ಧಿ ಇದ್ದರೂ ಸಹ ಪ್ರಾಣಿ ಪಕ್ಷಿಗಳನ್ನು ಸುಖಾ ಸುಮ್ಮನೆ ಕೆದಕುತ್ತಾರೆ. ಕೆಲವೊಮ್ಮೆ ಅಪಾಯಕಾರಿ ಪ್ರಾಣಿಗಳಿಗೂ ಹೀಗೆ ಮಾಡಲು ಹೋಗಿ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ.

ಹಾಗೆಯೇ ಇಲ್ಲೊಬ್ಬ ಮೊಸಳೆ ಯನ್ನು ಕೆಣಕಲು ಹೋಗಿದ್ದಾನೆ . ಆದರೆ ಮೊಸಳೆ ಯಾವಾಗ ಆಕ್ರಮಣಕಾರಿಯಾಗಿರುತ್ತವೆ ಎಂಬುದು ಊಹಿಸಲು ಸಹ ಸಾಧ್ಯ ಇಲ್ಲ.

ಸುಮ್ಮನೇ ನಿಂತಿದ್ದ ಮಲಗಿದ್ದ ಮೊಸಳೆಯನ್ನು ಒಬ್ಬಾತ ಮೊಸಳೆಯಂತೆ ವೇಷ ಕೆಣಕಲು ಹೋಗಿದ್ದಾನೆ. ತಾನೇನೋ ದೊಡ್ಡ ಸಾಹಸ ಮಾಡುತ್ತಿರುವುದಾಗಿ ಅಂದುಕೊಂಡಿರುವ ಈತ ಅದನ್ನು ವಿಡಿಯೋ ಮಾಡುವಂತೆ ಸ್ನೇಹಿತನಿಗೆ ಹೇಳಿದ್ದ.

ಸದ್ಯ ಮೊಸಳೆಯನ್ನು ಕೆಣಕಲು ಹೋದ ಯುವಕನೊಬ್ಬನ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನರೇಂದ್ರ ಸಿಂಗ್‌ ಎನ್ನುವ ಟ್ವಿಟರ್‌ ಬಳಕೆದಾರರೊಬ್ಬರು ನದಿಯ ದಂಡೆಯ ಬದಿಯಲ್ಲಿದ್ದ ಮೊಸಳೆಯೊಂದನ್ನು ಯುವಕ ಕೆಣಕಲು ಹೋಗಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊಸಳೆಯೊಂದು ನದಿಯ ದಂಡೆಯಲ್ಲಿ ಕೂತಿದೆ. ಯುವಕನೊಬ್ಬನ ಮೊಸಳೆಯ ವೇಷಭೂಷಣವನ್ನು ತೊಟ್ಟು ಮೊಸಳೆಯ ಕಾಲನ್ನು ಎಳೆದು ಕೆಣಕುವಂತೆ ಮಾಡಿದ್ದಾನೆ.

10 ಸೆಕೆಂಡ್‌ ಗಳ ಈ ವಿಡಿಯೋ ಕ್ಲಿಪ್‌ ವೈರಲ್‌ ಆಗಿದೆ. ಮೊಸಳೆಯ ವೇಷಭೂಷಣ ತೊಟ್ಟು ಹುಚ್ಚಾಟ ಮರೆದ ಯುವಕನಿಗೆ, ಒಂದು ವೇಳೆ ನಿಜವಾದ ಮೊಸಳೆ ನಿನ್ನ ಕಡೆ ತಿರುಗಿದರೆ ಯಾರೂ ಕೂಡ ನಿನ್ನನು ಉಳಿಸಲು ಆಗಲ್ಲ ಎಂದು ಬಳಕೆದಾರರೊಬ್ಬರು ಟ್ವೀಟ್‌ ಮಾಡಿದ್ದಾರೆ. ಮತ್ತೊಬ್ಬರು ಪ್ರಾಣಿಗಳಿಗೆ ತೊಂದರೆ ಕೊಡುವುದು ಕಾನೂನು ವಿರುದ್ಧ ಆಗಿದೆ ಎಂದು ಗದರಿದ್ದಾರೆ.

ಹೌದು ಮನುಷ್ಯ ಮಾಡುವ ಕೆಲವೊಂದು ಹುಚ್ಚಾಟ ನೋಡಿದಾಗ ಎಲ್ಲೋ ಇರುವ ಸಮಸ್ಯೆಯನ್ನು ತನ್ನ ಮೇಲೆ ಹೇರಿಕೊಳ್ಳುವುದು ಆಗಿದೆ ಎನ್ನಬಹುದು. ಇದೊಂದು ಮನುಷ್ಯನ ಅತೀ ಬುದ್ಧಿ ವಂತಿಕೆಯನ್ನು ತೊರ್ಪಡಿಸುತ್ತಿದೆ.

Leave A Reply