Viral News : ಮರದಲ್ಲಿ ಮೂಡಿತು ನಂದಿಯ ಚಿತ್ರ | ಆದರೂ ಮರ ಕಡಿಯೋಕೆ ಬಂದ ಜೆಸಿಬಿ, ನಂತರ ಆದದ್ದು ಪವಾಡ !

ಈಗಿನ ಕಾಲದವರರು ತಂತ್ರಜ್ಞಾನನಕ್ಕೆ ಒಗ್ಗಿಕೊಂಡರು ಸಹ ನಂಬಿಕೆಗಳು ಯಾವುತ್ತೂ ಸುಳ್ಳಾಗುವುದಿಲ್ಲ. ಜೀವನ ಶೈಲಿ ಬದಲಾದರೂ ನಂಬಿಕೆಗಳು ಸುಳ್ಳಾಗಳು ಸಾಧ್ಯವಿಲ್ಲ. ಇದಕ್ಕೆ ನಮ್ಮ ಹಿರಿಯರೇ ಸಾಕ್ಷಿ.

 

ಮುಖ್ಯವಾಗಿ ದೈವಿಕ ಶಕ್ತಿ ಮೇಲೆ ಜನರಿಗೆ ಅಪಾರ ನಂಬಿಕೆ ಇರುವುದನ್ನು ನಾವು ಕಣ್ಣಾರೆ ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಹಾಗೆಯೇ ಇಲ್ಲೊಂದು ಕಡೆ ವಿಶಿಷ್ಟ ಮರವಿದೆ. ಈ ಮರವನ್ನು ಕಡಿಯಲು ಬಂದ ಜೆಸಿಬಿ ವಾಹನ ಸಹ ಕೆಟ್ಟು ಹೋಗುತ್ತೆ . ಪ್ರತಿ ಬಾರಿ ಮರ ಕಡಿಯಲು ಬಂದಾಗ ಏನಾದರೊಂದು ವಿಘ್ನಗಳು ಬರುತ್ತಿದ್ದು ಈ ಮರದ ವಿಶೇಷತೆಯನ್ನು ಇಲ್ಲಿ ಹೇಳಲಿದ್ದೇವೆ.

ಈ ವಿಶಿಷ್ಟ ಮರವಿರುವುದು ಕಲಬುರಗಿಯಿಂದ ಜೇವರ್ಗಿಗೆ ಹೋಗುವ ನಂದಿಕೂರು ಗ್ರಾಮದ ಬಳಿ. ಆದಿ ಬಸವಣ್ಣ ದೇವಸ್ಥಾನದ ಎದುರಿಗೆ ಇರುವ ಈ ಬೇವಿನ ಮರದಲ್ಲಿ ನಂದಿ ವಿಗ್ರಹ ಉದ್ಭವವಾಗಿದೆ ಅನ್ನೋ ನಂಬಿಕೆ ಭಕ್ತ ಜನರದ್ದು.

ಹೌದು ಹೈವೆಗೆ ಹೊಂದಿಕೊಂಡಂತಿರೋ ಮರ, ಮರಕ್ಕೆ ಶ್ರದ್ಧಾ ಭಕ್ತಿಯಿಂದ ನಮಿಸುತ್ತಿರೋ ಜನ. ಮರದಲ್ಲಿ ಮೂಡಿದ ಆಕೃತಿಯ ದರ್ಶನ ಮಾಡೋಕೆ ನಾ ಮುಂದು ತಾಮುಂದು ಅಮತ ಆಗಮಿಸ್ತಿರೋ ಸ್ಥಳೀಯರು. ಇದಕ್ಕೆಲ್ಲ ಕಾರಣ ಈ ಕಹಿಬೇವಿನ ಮರದಲ್ಲಿ ಮೂಡಿರೋ ಒಂದು ಆಕೃತಿ! ಹೌದು, ಕಲಬುರಗಿಯ ಕಹಿ ಬೇವಿನ ಮರವೊಂದರಲ್ಲಿ ಮೂಡಿದ ನಂದಿ ವಿಗ್ರಹದ ರೂಪ ಜನರ ಗಮನ ಸೆಳೆಯುತ್ತಿದೆ. ಅದಲ್ಲದೆ ಅಲ್ಲೇ ಹಿಂದೆ ಇರುವ ಆದಿ ಬಸವಣ್ಣ ದೇವಸ್ಥಾನಕ್ಕೆ ಇನ್ನಷ್ಟು ಮಹತ್ವ ಬರುವಂತೆ ಮಾಡಿದೆ.

ಕಳೆದ 20 ವರ್ಷದ ಹಿಂದೆ ಈ ಮರದ ಕೆಳಗೆ ಸಣ್ಣದೊಂದು ಆದಿಬಸವಣ್ಣನ ದೇವಸ್ಥಾನವಿತ್ತು. ರಸ್ತೆ ನಿರ್ಮಾಣದ ವೇಳೆ ಆ ದೇವಸ್ಥಾನವನ್ನು ಸ್ವಲ್ಪ ಹಿಂದಕ್ಕೆ ಕಟ್ಟಲಾಗಿತ್ತು. ಆ ವೇಳೆ ಈ ಮರದಲ್ಲಿ ನಂದಿ ವಿಗ್ರಹ ಉದ್ಭವವಾಗಿತ್ತು ಎನ್ನುತ್ತಾರೆ ಗ್ರಾಮಸ್ಥರು. ನಂತರ ನಂದಿಯ ಪ್ರತಿ ರೂಪದಂತೆ ಕಾಣುವ ಮೂರ್ತಿ ಕಾಣಿಸಿ ಕೊಂಡ ಈ ಮರವನ್ನು ಇಲ್ಲಿನ ಜನರು ದೇವರು ಎಂದೇ ಪೂಜಿಸ್ತಾರೆ. ಅಷ್ಟೇ ಅಲ್ಲ, ಹೆದ್ದಾರಿಯಲ್ಲಿ ಸುತ್ತಾಡುವ ಜನರೆಲ್ಲರೂ ತಮ್ಮ ವಾಹನವನ್ನು ನಿಲ್ಲಿಸಿ ಆದಿ ಬಸವಣ್ಣನಿಗೆ ಕೈಮುಗಿದು, ಜೊತೆಗೆ ಈ ನಂದಿ ಹೊಂದಿರೋ ಮರಕ್ಕೂ ಭಕ್ತಿಯಿಂದ ನಮಸ್ಕರಿಸಿಯೇ ಮುಂದೆ ಹೋಗೋದು.

ಸುಮಾರು 20ವರ್ಷಗಳಿಂದ ಭಕ್ತ ಜನರು ಈ ನಂದಿ ಬಸವಣ್ಣನ ಮಹಿಮೆಗೆ ಇಡೀ ಗ್ರಾಮವೇ ಭಕ್ತಿಯಿಂದ ಪೂಜೆ ನೆರವೇರುತ್ತಿದೆ. ಪ್ರತಿವರ್ಷ ಜಾತ್ರೆ,ಭಜನೆ, ಕೀರ್ತನೆಗಳನ್ನು ಮಾಡುತ್ತ ಭಕ್ತಿಯಿಂದ ನಂದಿ ದೇವರನ್ನು ನಂಬಲಾಗುತ್ತಿದೆ.

ಒಟ್ಟಿನಲ್ಲಿ ಜನರ ನಂಬಿಕೆ ಇಲ್ಲಿ ಅಘಾದವಾಗಿ ಬೆಳೆದಿರುವುದು ಸತ್ಯ. ಇದು ಪ್ರಕೃತಿ ವಿಸ್ಮಯ ಎನ್ನಬಹುದು.

Leave A Reply

Your email address will not be published.