ಆಸ್ಪತ್ರೆಗೆ ದಾಖಲಾದ ಕಾಲಿವುಡ್ ನಟ ಶರತ್ ಕುಮಾರ್!!!

ಕಾಲಿವುಡ್‌ ನ ಜನಪ್ರಿಯ ನಟ ಶರತ್‌ ಕುಮಾರ್‌ (Sarath Kumar ) ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸದ್ಯ ಚೆನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕನ್ನಡದ ಹಲವು ಸಿನಿಮಾಗಳಲ್ಲಿ ಶರತ್‌ ಕುಮಾರ್‌ ಆರಂಭದಲ್ಲಿ ಪೋಷಕ ಕಲಾವಿದರರಾಗಿ ನಟಿಸಿದ್ದು ಮಾತ್ರವಲ್ಲದೇ, ಅಭಿನಯ ಚಕ್ರವರ್ತಿ ನಟ ಪುನೀತ್‌ ರಾಜಕುಮಾರ್‌ ಅಭಿನಯದ ʻರಾಜಕುಮಾರʼ ದಲ್ಲಿ ಕೂಡ ಅಭಿನಯಿಸಿದ್ದಾರೆ.

 

ಸದ್ಯ, ನಟರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪತ್ನಿ ರಾಧಿಕಾ ಶರತ್ ಕುಮಾರ್ ಹಾಗೂ ಪುತ್ರಿ ವರಲಕ್ಷ್ಮಿ ಶರತ್‌ಕುಮಾರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಕನ್ನಡದ ಜೊತೆಗೆ ತಮಿಳು ಚಿತ್ರರಂಗ ಪ್ರವೇಶಿಸಿದ ಶರತ್ ಕುಮಾರ್ ಹೀರೊ ಆಗಿ ಹೊರ ಹೊಮ್ಮಿದ್ದಾರೆ. ‘ನಾಟಮ್ಮೈ’, ‘ಸೂರ್ಯವಂಶ’, ‘ನಟ್ಪುಕ್ಕಾಗ’ ಶರತ್‌ ಕುಮಾರ್ ಹೀರೊ ಆಗಿ ನಟಿಸಿದ ಹಿಟ್ ಚಿತ್ರಗಳಾಗಿವೆ.ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ʻಸಾರಥಿʼ, ʻಸೀತಾರಾಮ ಕಲ್ಯಾಣʼ ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. .

Leave A Reply

Your email address will not be published.