ದಕ್ಷಿಣ ಕನ್ನಡ : ಆಟೋಗಳಿಗೆ ಬಣ್ಣ ಬದಲಾವಣೆ | ಇಂತಹುದೇ ಬಣ್ಣ ಹಾಕಲು ಜಿಲ್ಲಾಡಳಿತ ಸೂಚನೆ!!

ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರು ನಗರದ ಆಟೋ ರಿಕ್ಷಾ ಚಾಲಕರಿಗೆ ಸೂಚನೆಯೊಂದನ್ನು ನೀಡಿದೆ. ಹೌದು!!..ಮಂಗಳೂರು ನಗರ ವ್ಯಾಪ್ತಿಯ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸಂಚರಿಸುವ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಇಂತಹದ್ದೇ ಬಣ್ಣ ಹಾಕಿಸಿಕೊಳ್ಳುವಂತೆ (Auto Colour Code) ದಕ್ಷಿಣ ಕನ್ನಡ (Daksina Kannada) ಜಿಲ್ಲಾಡಳಿತವು ಸೂಚನೆ ನೀಡಿದೆ.

 

ಮಂಗಳೂರು ನಗರ ವ್ಯಾಪ್ತಿಯ ವಲಯ 1 ಹಾಗೂ ಗ್ರಾಮಾಂತರ ವ್ಯಾಪ್ತಿಯ ವಲಯ 2 ರ ಆಟೋ ರಿಕ್ಷಾಗಳು (Auto Rickshaw) ಜಿಲ್ಲಾಡಳಿತದ ಸೂಚನೆಯ ಅನ್ವಯ  ಇನ್ನು ಮುಂದಿನ ದಿನಗಳಲ್ಲಿ ಬಣ್ಣದ ಜೊತೆಗೆ ಪೊಲೀಸ್ ಇಲಾಖೆ ನೀಡುವ ಗುರುತು ಸ್ಟಿಕ್ಕರ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕೆಂದು ತಿಳಿಸಲಾಗಿದೆ .

ವಲಯ ಒಂದು ಮತ್ತು ಎರಡರಲ್ಲಿ ಬರುವ ಎಲ್ಲಾ ಮಾದರಿಯ ಆಟೋ ರಿಕ್ಷಾಗಳು ಅಂದರೆ ಪೆಟ್ರೋಲ್ ಮಾತ್ರವಲ್ಲದೇ ಎಲೆಕ್ಟ್ರಿಕಲ್, ಸಿಎನ್ ಜಿ ಹಾಗೂ ಡೀಸೆಲ್ ಆಟೋಗಳು ಕಡ್ಡಾಯವಾಗಿ ಜಿಲ್ಲಾಡಳಿತ ನಿಗದಿಪಡಿಸಿದ ಬಣ್ಣವನ್ನ ಬಳಿಸಬೇಕಾಗುತ್ತದೆ.

ಕಡ್ಡಾಯವಾಗಿ ಬಣ್ಣವನ್ನೇ ಹಾಕಬೇಕೆಂದು  ಹೇಳಲಾಗಿದ್ದು, ಹೊರತಾಗಿ ಯಾವುದೇ ಕಾರಣಕ್ಕೂ ಆ ಬಣ್ಣಗಳ ಸ್ಟಿಕ್ಕರ್ ಕಟ್ಟಿಂಗ್ ಮಾಡಿಕೊಳ್ಳುವಂತಿಲ್ಲ ಎಂದು ಜಿಲ್ಲಾಡಳಿತವು ಸ್ಪಷ್ಟವಾಗಿ ಮಾಹಿತಿ ನೀಡಿದೆ.

ಸದ್ಯ ಮಂಗಳೂರು ನಗರ  ಮಾತ್ರವಲ್ಲದೇ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವಂತಹ ಬಹುತೇಕ ಎಲ್ಲ  ಆಟೋ ರಿಕ್ಷಾಗಳು ಕಪ್ಪು ಮತ್ತು ಹಳದಿ ಬಣ್ಣವನ್ನು  ಹೊಂದಿದೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ವಲಯ 1 ರ ನಗರ ವ್ಯಾಪ್ತಿಯ ಆಟೋಗಳು ಹಳದಿ ಮತ್ತು ಕಪ್ಪು ಹಾಗೂ ಗ್ರಾಮಾಂತರ (ವಲಯ-2) ರಲ್ಲಿ ಬರುವ ಆಟೋ ರಿಕ್ಷಾ ಗಳಿಗೆ ಹಸಿರು ಹಾಗೂ ಹಳದಿ ಬಣ್ಣ ಹಾಕಿಸಿಕೊಳ್ಳಬೇಕು .

ಟ್ರಾಫಿಕ್ ಪೊಲೀಸರಿಗೆ ಬಣ್ಣ ಬದಲಾವಣೆಯ ಮೂಲಕ ಸುಲಭವಾಗಿ ಆಟೋ ರಿಕ್ಷಾಗಳ ವ್ಯಾಪ್ತಿಯನ್ನು ಅಂದಾಜಿಸಬಹುದಾಗಿದೆ. ಯಾಕೆಂದರೆ ವಲಯ 1 ಕ್ಕೆ ವಲಯ 2 ರ ಆಟೋಗಳು ಸಂಚರಿಸುವಂತಿರುವುದಿಲ್ಲ ಹೀಗಾಗಿ ಅವುಗಳ ವ್ಯಾಪ್ತಿಯನ್ನು ನಿರ್ಧರಿಸಿಕೊಳ್ಳಲು ಬಣ್ಣ ಬದಲಾವಣೆ ಅನುಕೂಲವಾಗಲಿದೆ ಎನ್ನಲಾಗಿದೆ. ಆ ಮೂಲಕ ಗೊಂದಲಗಳಿಗೆ ತೆರೆ ಎಳೆಯಲು ಸಾಧ್ಯವಾಗಲಿದೆ.


ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸುವ ಆಟೋ ರಿಕ್ಷಾಗಳು ಮಾತ್ರ ತಮ್ಮ ವ್ಯಾಪ್ತಿಯನ್ನು ಮೀರಬಹುದಾಗಿದ್ದು,ಇಂತಹ ಸಂದರ್ಭಗಳಲ್ಲಿ ಅಗತ್ಯ ದಾಖಲಾತಿ ಇಟ್ಟುಕೊಳ್ಳಬೇಕಾಗುತ್ತದೆ.ಇದನ್ನು  ಹೊರತುಪಡಿಸಿ ತಮ್ಮ ವ್ಯಾಪ್ತಿ ಮೀರಿದ್ದಲ್ಲಿ ಸಂಬಂಧಿಸಿದ ಪ್ರಾಧಿಕಾರದವರು ಕ್ರಮ ಕೈಗೊಳ್ಳಲಿದ್ದಾರೆ.

ಇದರ ಜೊತೆಗೆ ವಲಯ 1 ಹಾಗೂ ವಲಯ 2ಕ್ಕೆ ಪೊಲೀಸ್ ಇಲಾಖೆಯಿಂದ ನೀಡುವ ಗುರುತು ಸ್ಟಿಕ್ಕರ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕಾಗುತ್ತದೆ. ವಲಯ 1 ರ ಸ್ಟಿಕ್ಕರ್ ಚೌಕಾಕಾರದಲ್ಲಿದ್ದರೆ, ವಲಯ 2 ರ ಸ್ಟಿಕ್ಕರ್ ವೃತ್ತಾಕಾರದಲ್ಲಿ ಇರಲಿದೆ.

ಒಂದೊಮ್ಮೆ ಇಂಧನ ಅಥವಾ ಎಲ್ ಪಿ ಜಿ ಭರಿಸಿಕೊಂಡು ಹಿಂತಿರುಗುವಾಗ ಕೂಡಾ ಯಾವುದೇ ಕ್ರಮ ಕೈಗೊಳ್ಳಲು ಅವಕಾಶವಿರುವುದಿಲ್ಲ. ಆದರೆ  ಈ ವೇಳೆ ಯಾವುದೇ ಕಾರಣಕ್ಕೂ ಬಾಡಿಗೆ ಮಾಡುವಂತಿರುವುದಿಲ್ಲ ಎಂಬುದನ್ನು ಗಮನಿಸಬೇಕು.

Leave A Reply

Your email address will not be published.