ಗೇಮಿಂಗ್ ಆಡುವಾಗ ಮೊಬೈಲ್ ಸ್ಫೋಟ | ಬಾಲಕನಿಗೆ ಗಂಭೀರ ಗಾಯ
ಉತ್ತರ ಪ್ರದೇಶದ ಮಥುರಾದಲ್ಲಿ ಹದಿಮೂರು ವರ್ಷದ ಬಾಲಕ ಮೊಬೈಲ್ ನಲ್ಲಿ ಗೇಮ್ ಆಡ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡ ಘಟನೆ ನಡೆದಿದೆ. ಮೊಬೈಲ್ ಸ್ಫೋಟದಿಂದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕ ತನ್ನ ಕೊಠಡಿಯಲ್ಲಿ ಕುಳಿತು ದಿನನಿತ್ಯದ ಹಾಗೆ ಅಂದು ಕೂಡ ಮೊಬೈಲ್ ನಲ್ಲಿ ಆಟವಾಡುತ್ತಿದ್ದ. ಅದಾಗಲೇ ಮನೆಯವರಿಗೆ ಆತನ ಕೋಣೆಯಿಂದ ದೊಡ್ಡ ಸ್ಫೋಟದ ಸದ್ದು ಕೇಳಿಸಿದೆ. ತಕ್ಷಣ ಎಲ್ಲರೂ ಗಾಬರಿಯಿಂದ ಬಾಲಕನಿರುವ ಕೋಣೆಗೆ ಓಡಿದ್ದಾರೆ, ಅಲ್ಲಿ ನೋಡಿದರೆ ಗಾಯಾಳುವಾಗಿ ಬೆಡ್ ಮೇಲೆ ಬಾಲಕ ಮಲಗಿದ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ ಎಂದು ಬಾಲಕನ ತಂದೆ ಮೊಹಮ್ಮದ್ ಜಾವೇದ್ ಹೇಳಿದ್ದಾರೆ.
ಆತನ ಭೀಕರ ಸ್ಥಿತಿ ನೋಡಿದ ಮನೆಯವರು ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕನ ಚಿಕಿತ್ಸೆ ನಡೆಯುತ್ತಿದ್ದು, ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಈ ಆಕಸ್ಮಿಕ, ಆಘಾತಕಾರಿ ಘಟನೆಯಿಂದ ಕುಟುಂಬಸ್ಥರೆಲ್ಲಾ ಬೆಚ್ಚಿಬಿದ್ದಿದ್ದು, ಸ್ಥಳೀಯರ ಗುಂಪು ಮನೆಯಲ್ಲಿ ಜಮಾಯಿಸಿದೆ.
ಇನ್ನೂ, ಆತ ಹಿಡಿದಿದ್ದ ಮೊಬೈಲ್ ಸುಟ್ಟು ಕರಕಲಾಗಿತ್ತು. ಈ ಮೊಬೈಲ್ ಎಂಐ ಕಂಪನಿಗೆ ಸೇರಿದ್ದಾಗಿದೆ. ಪ್ರತಿದಿನದಂತೆ ಅಂದು ಕೂಡ ಮಗು ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದ. ಈ ವೇಳೆ ಏಕಾಏಕಿ ಮೊಬೈಲ್ ಸ್ಫೋಟಗೊಂಡಿದೆ. ಮೊಬೈಲ್ ಸ್ಫೋಟಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ ಎಂದು ಗಾಯಾಳು ಮಗುವಿನ ತಂದೆ ಮಾಹಿತಿ ನೀಡಿದ್ದಾರೆ. ಇನ್ನೂ ಈ ಪ್ರಕರಣ ಮಥುರಾ ಪೊಲೀಸ್ ಠಾಣೆಯ ಕೊಟ್ವಾಲಿಯ ಮೇವಾಟಿ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ.