BBK 9: ಸಾನ್ಯ ಅಯ್ಯರ್‌ ಆರೋಪಕ್ಕೆ ರೂಪಿ ಕೊಟ್ಟ ಸ್ಪಷ್ಟನೆ | ಕಿಚ್ಚ ಹೇಳಿದ್ದಾದರೂ ಏನು ?

ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಗೆ ಎಂಟ್ರಿ ಆದಾಗಿನಿಂದ ಇಬ್ಬರ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಅಲ್ಲಿ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಕೂಡ ಆಗಿದ್ದರು. ಆ ಗೆಳೆತನ ‘ಬಿಗ್ ಬಾಸ್ ಕನ್ನಡ 9’ ಅಲ್ಲಿಯೂ ಮುಂದುವರೆಯಿತು. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವಿಷಯ ಬಂದಾಗ ಹಲವು ಪರಿಶ್ರಮ, ಗುದ್ದಾಟ, ನೂಕಾಟಗಳ ನಂತರ ಸಾನ್ಯ ಅಯ್ಯರ್ ಔಟ್ ಆಗಿ ಮನೆಯಿಂದ ಹೊರನಡೆದಿದ್ದರು.

 

ಈ ವೇಳೆ ರೂಪೇಶ್ ಶೆಟ್ಟಿ, ಬೆಸ್ಟ್ ಫ್ರೆಂಡ್ ಮನೆಯಿಂದ ಹೊರ ಹೋಗುತ್ತಿರುವುದನ್ನು ಕಂಡು ತುಂಬಾ ಭಾವುಕರಾಗಿದ್ದರು. ಹಾಗೇ ಒಂದು ಮಾತು ಹೇಳಿದ್ದರು, ‘’ನೀನು ನನ್ನನ್ನ ಮಿಸ್ ಮಾಡ್ಕೊಂಡ್ರೆ ಕೆಂಪು ಬಣ್ಣದ ಟಿ-ಶರ್ಟ್ ಕಳುಹಿಸು, ಅದರಲ್ಲಿ ‘S’ ಅಂತ ಅಕ್ಷರ ಇದ್ದರೆ ಸಾಕು’’ ಎಂದು ರೂಪೇಶ್ ಶೆಟ್ಟಿ ಹೇಳಿದ್ದರು. ನಂತರದ ವಾರಗಳಲ್ಲಿ ರೂಪೇಶ್ ಶೆಟ್ಟಿಗೆ ಕೆಂಪು ಬಣ್ಣದ ಎರಡು ಟಿ-ಶರ್ಟ್‌ನ್ನು ಸಾನ್ಯ ಅಯ್ಯರ್ ಬಿಗ್ ಬಾಸ್ ಮನೆಗೆ ಕಳುಹಿಸಿದ್ದರು.

ಮುಂಬರುವ ವಾರಗಳಲ್ಲಿ ಸಾನ್ಯ ಅಯ್ಯರ್ ಟಿ-ಶರ್ಟ್‌ನ್ನು ಕಳುಹಿಸಿದ್ದರಂತೆ ಆದರೆ ಆ ಬಟ್ಟೆಗಳು ರೂಪೇಶ್ ಶೆಟ್ಟಿಗೆ ತಲುಪುತ್ತಿಲ್ಲ ಎಂದು ಸಾನ್ಯ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ತಾನು ಕಳುಹಿಸುತ್ತಿರುವ ಶರ್ಟ್‌ಗಳನ್ನು ‘ಬಿಗ್ ಬಾಸ್’ ರೂಪೇಶ್ ಶೆಟ್ಟಿಗೆ ತಲುಪಿಸುತ್ತಿಲ್ಲ ಎಂದು ಆರೋಪಿಸಿದ್ದರು. ಇದೀಗ ಈ ವಿಚಾರವಾಗಿ ವೇದಿಕೆ ಮೇಲೆ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಅವರು ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ.

ಕಿಚ್ಚ ಸುದೀಪ್ ಹೇಳಿದ್ದೇನೆಂದರೆ, ‘ಬಿಗ್ ಬಾಸ್’ ಮನೆ ಒಳಗೆ ಹೋಗಬೇಕಾದರೆ ತಾವು, ನೀವೆಲ್ಲಾ ಕೊಡೋದು ಒನ್ ಪಾಯಿಂಟ್ ಕಾಂಟ್ಯಾಕ್ಟ್. ಅದು ನಿಮ್ಮ ಫ್ಯಾಮಿಲಿ ಆಗಿರಬಹುದು ಅಥವಾ ಫ್ರೆಂಡ್ಸ್ ಸರ್ಕಲ್ ಕೂಡ ಆಗಿರಬಹುದು. ಪ್ರತಿಯೊಬ್ಬರೂ ‘ಬಿಗ್ ಬಾಸ್’ಗೆ ಒನ್ ಪಾಯಿಂಟ್ ಕಾಂಟ್ಯಾಕ್ಟ್ ಅಂತ ಕೊಡ್ತೀರಿ, ಕರೆಕ್ಟ್ ಆ ರೂಪೇಶ್ ಶೆಟ್ಟಿ ಅವರೇ ಅಂತ ಹೇಳಿದ್ದಾರೆ. ಇದಕ್ಕೆ ರೂಪೇಶ್ ಶೆಟ್ಟಿ, ಹೌದು ಸರ್ ಎಂದು ಉತ್ತರ ನೀಡಿದ್ದಾರೆ.

ಇನ್ನೂ ‘ಬಿಗ್ ಬಾಸ್’ ಏನ್ಮಾಡ್ತಾರೆ, ಏನೇ ವಿಚಾರ ಇರಲಿ ನಿಮ್ಮ ಬಗ್ಗೆ ಆ ಒನ್ ಪಾಯಿಂಟ್ ಜೊತೆಗೆ ಕಾಂಟ್ಯಾಕ್ಟ್‌ನಲ್ಲಿರುತ್ತಾರೆ. ಆದರೆ ಈಗ ಏನಾಗ್ತಿದೆ ಅಂದ್ರೆ ನಿಮ್ಮ ಮನೆಯಿಂದ ಹಾಗೂ ನಿಮ್ಮ ಆಪ್ತರಾದ ಸಾನ್ಯ ಅಯ್ಯರ್ ಇಬ್ಬರ ಕಡೆಯಿಂದಲೂ ನಿಮಗೆ ಬಟ್ಟೆಗಳು ಬರುತ್ತಿವೆ. ಬಟ್ಟೆಗಳು ಬಂದಿದೆ ಅಲ್ವಾ, ಎಂದು ಸುದೀಪ್ ಅವರು ಕೇಳಿದ್ದಾರೆ. ಇದಕ್ಕೆ ರೂಪೇಶ್ ಶೆಟ್ಟಿ, ಹೌದು ಸರ್ ಬಟ್ಟೆಗಳು ಬಂದಿದೆ ಎಂದು ಹೇಳಿದರು.

ಆದ್ರೆ ನಿಮ್ಮ ಮನೆಯವರಿಗೆ ಸಾನ್ಯ ಅಯ್ಯರ್ ಕಡೆಯಿಂದ ಬರುವ ಬಟ್ಟೆಗಳ ಬಗ್ಗೆ ಪ್ರಾಬ್ಲಂ ಇದೆ. ಈಗಾಗಲೇ ಸಾನ್ಯ ಅಯ್ಯರ್ ತಾನು ಕಳುಹಿಸಿರುವ ಬಟ್ಟೆಗಳು ರೂಪೇಶ್ ಶೆಟ್ಟಿಗೆ ತಲುಪುತ್ತಿಲ್ಲ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಕಿಚ್ಚ ಸುದೀಪ್ ಅವರು ಹೇಳಿದರು. ಈ ವಿಷಯ ಕೇಳ್ತಿದ್ದ ಹಾಗೆ ರೂಪೇಶ್ ಶೆಟ್ಟಿ, ಅಯ್ಯೋ..ಹೀಗೆಲ್ಲಾ ಆಯ್ತಾ ಅಂತಾ ಅಂದ್ರು.

ಆಗ ಕಿಚ್ಚ ಸುದೀಪ್, ಸಾನ್ಯ ಅಯ್ಯರ್ ಗೆ ಕೆಲವು ಮಾತು ಹೇಳಿದರು, ‘ಬಿಗ್ ಬಾಸ್’ ಮನೆಯೊಳಗೆ ಈ ಮೊದಲು ನೀವೂ ಕೂಡ ಇದ್ರಿ, ‘ಬಿಗ್ ಬಾಸ್’ನ ಅರ್ಥ ಮಾಡಿಕೊಂಡಿದ್ದೀರಿ ಅಂತ ಅಂದುಕೊಂಡಿದ್ವಿ ನಾವು. ಆದ್ರೂ ಕೂಡ ‘ಬಿಗ್ ಬಾಸ್’ ನಿಮ್ಮಿಬ್ಬರ ಸ್ನೇಹವನ್ನು ಪರಿಗಣಿಸಿ ಎರಡು ವಾರ ಬಟ್ಟೆಯನ್ನು ಕಳುಹಿಸಿಕೊಟ್ಟಿದ್ದಾರೆ ಎಂದಿದ್ದಾರೆ. ಇನ್ನೂ ರೂಪೇಶ್ ಶೆಟ್ಟಿ ಜೊತೆಗೆ ಮಾತು ಮುಂದುವರೆಸಿ, ಈಗ ನಿಮ್ಮ ನಿರ್ಧಾರ ಏನೆಂದು ನೀವೇ ಹೇಳಿ, ನಿಮ್ಮ ಮನೆಯವರ ಎಮೋಷನ್ಸ್‌ನ ನಾವು ರೆಸ್ಪೆಕ್ಟ್ ಮಾಡಿ ಆ ಒನ್ ಪಾಯಿಂಟ್ ಕಾಂಟ್ಯಾಕ್ಟ್‌ನ ಫಾಲೋ ಮಾಡೋದು ಕರೆಕ್ಟಾ, ಇಲ್ವಾ? ಹಾಗೇ ಸಾನ್ಯ ಅಯ್ಯರ್ ಕಳುಹಿಸಿರುವ ಬಟ್ಟೆಯನ್ನು ನಿಮಗೆ ತಲುಪಿಸಬೇಕೋ, ಬೇಡ್ವೋ ಈ ಬಗ್ಗೆ ನಮಗೆ ಕ್ಲಾರಿಟಿ ಕೊಡಿ ಅಂತಾ ಹೇಳಿದ್ದಾರೆ.

ಅದಕ್ಕೆ ರೂಪೇಶ್ ಶೆಟ್ಟಿ, ನೀವು ಹೇಳಿದ್ದು ಕರೆಕ್ಟ್ ಸರ್, ಮನೆಯವರು ಏನೋ ಒಂದು ಹೇಳ್ತಿದ್ದಾರೆ ಅಂದ್ರೆ ಅದರಲ್ಲಿ ಅರ್ಥ ಇದೆ ಅಂತ ಅಂದುಕೊಳ್ಳುತ್ತೇನೆ. ಸದ್ಯಕ್ಕೆ ಮೂರು ವಾರ ಸಾನ್ಯ ಕಳುಹಿಸಿದ ಬಟ್ಟೆಗಳು ಬೇಡ ಸರ್. ಮನೆಯವರು ಏನು ಹೇಳ್ತಾರೆ ಅನ್ನೋದು ನಾನು ಮನೆಗೆ ಹೋದ್ಮೇಲೆ ಅರ್ಥ ಮಾಡಿಕೊಳ್ಳುತ್ತೇನೆ. ಸದ್ಯಕ್ಕೆ ಬಟ್ಟೆಗಳು ಬೇಡ ಸರ್. ಸಾನ್ಯ ಕಳುಹಿಸಿದ ಬಟ್ಟೆಗಳನ್ನು ನನಗೆ ತಲುಪಿಸಬೇಡಿ.

ಹಾಗೇ ಸಾನ್ಯ, ಐ ಆಮ್ ಸಾರಿ. ನಾನು ಮನೆಯಿಂದ ಹೊರಗೆ ಬಂದ್ಮೇಲೆ ನಿನ್ನ ಬಳಿ ಮಾತನಾಡುತ್ತೇನೆ. ನಿನ್ನ ಪ್ರೀತಿ, ಸ್ನೇಹ, ಕಾಳಜಿ ನನಗೆ ಅರ್ಥ ಆಗ್ತದೆ. ಆದ್ರೆ ಮನೆಯವರು ಏನೋ ಹೇಳಿದ್ದಾರೆ ಅಂದ್ರೆ ಅದರಲ್ಲಿ ಅರ್ಥ ಇರುತ್ತದೆ. ನಾನಿಲ್ಲಿಗೆ ಬಂದಿರೋದು ಮನೆಯವರ ಪ್ರೀತಿಯಿಂದ. ಇಲ್ಲಿಗೆ ಬಂದ್ಮೇಲೆ ನನಗೆ ಸಾನ್ಯ ಸ್ನೇಹ ಸಿಕ್ಕಿರೋದು. ಎರಡೂ ಕೂಡ ತುಂಬಾ ಮುಖ್ಯ ನನಗೆ. ಆದ್ರೆ, ನಾನು ಮನೆಯವರು ಏನು ಹೇಳ್ತಾರೆ ಅದನ್ನ ಫಾಲೋ ಮಾಡ್ತೀನಿ. ಸದ್ಯಕ್ಕೆ ಇನ್ನೊಂದು ಮೂರು ವಾರ ಸಾನ್ಯ ಕಳಿಸಿದ ಬಟ್ಟೆ ಬೇಡ ಸರ್.

ಇನ್ನೂ ಈ ಬಗ್ಗೆ ‘ಬಿಗ್ ಬಾಸ್’ಗೆ ಬೇಜಾರಾಗಿರೋದು ನನಗೂ ತುಂಬಾ ಬೇಜಾರು ಉಂಟುಮಾಡಿದೆ ಅಂತ ರೂಪೇಶ್ ಶೆಟ್ಟಿ ಹೇಳಿದ್ರು. ಆಗ ಕಿಚ್ಚ ಸುದೀಪ್ , ಒಂದು ಸ್ಪಷ್ಟನೆ ಕೊಡ್ತೀನಿ ರೂಪೇಶ್ ಶೆಟ್ಟಿ ಅವರೇ ಈ ವಿಚಾರವಾಗಿ ನಮಗೆ ಬೇಜಾರಿಲ್ಲ. ಆದರೆ, ಗೊಂದಲ ಇದೆ. ಅದು ಈಗ ಕ್ಲಿಯರ್ ಆಯ್ತು ಎಂದು ಹೇಳಿದರು.

Leave A Reply

Your email address will not be published.