ನಿಮ್ಮ ಸಾವು ನಿಮ್ಮ ಕಂಗಳಲ್ಲಿಯೇ ಅಡಗಿದೆ | ಸಾವಿನ ಉತ್ತರ ಕಣ್ಣು ನೀಡುತ್ತೆ | ಸಂಶೋಧನೆ ಈ ರೀತಿ ಹೇಳುತ್ತೆ!!!
ನಮ್ಮ ದೇಹದಲ್ಲಿರುವ ಪಂಚೇಂದ್ರಿಯ ಗಳಲ್ಲಿ ಕಣ್ಣು ನಮಗೆ ಬಹಳ ಮುಖ್ಯವಾದುದು. ಸುಂದರ ಪ್ರಪಂಚದಲ್ಲಿ ಪ್ರಕೃತಿಯ ಆನಂದ ಸವಿದು ಜೀವಿಸಲು ಕಣ್ಣುಗಳು ಬೇಕೇ ಬೇಕು ಆದರೆ ಕಣ್ಣುಗಳು ಆರೋಗ್ಯವಾಗಿರುವುದು ಸಹ ಅಷ್ಟೇ ಮುಖ್ಯ. ಅದಲ್ಲದೆ ನಮ್ಮ ನೋವು ಮತ್ತು ನಲಿವಿನ ಭಾವನೆಗಳನ್ನು ಸಹ ಕಣ್ಣುಗಳ ಮೂಲಕವೇ ವ್ಯಕ್ತ ಪಡಿಸುತ್ತೇವೆ. ಆದ್ದರಿಂದ ಕೆಲವೊಂದು ಸ್ಥಿತಿ ಗತಿಗಳನ್ನು ಕಣ್ಣು ನೋಡಿಯೇ ತಿಳಿದುಕೊಳ್ಳಬಹುದಾಗಿದೆ.
ಕೆಲವೊಮ್ಮೆ ನಮ್ಮ ಕಣ್ಣುಗಳು ಅದುರುತ್ತಿರುತ್ತದೆ, ಸೆಳೆತವು ಅಪಶಕುನವಾಗಿ ಕಂಡುಬರುತ್ತದೆ ಎಂಬುದು ಹಿರಿಯರ ನಂಬಿಕೆ. ಆದರೆ ಇದು ಮತ್ತೆ ಮತ್ತೆ ಸಂಭವಿಸಿದರೆ, ಅದು ಆರೋಗ್ಯಕ್ಕೆ ಆಗುವ ಹಾನಿಯನ್ನು ಸೂಚಿಸುತ್ತದೆ. ಹಾಗೆಯೇ ನಮ್ಮ ಸಾವು ಯಾವಾಗ ಸಂಭವಿಸುತ್ತೆ, ಈ ಪ್ರಶ್ನೆಗೆ ಸಹ ನಮ್ಮ ಕಣ್ಣುಗಳಲ್ಲೇ ಉತ್ತರ ನೀಡಲಿದೆಯಂತೆ ಹೌದು ಅದು ಹೇಗೆಂದು ತಿಳಿದುಕೊಳ್ಳೋಣ.
ಬ್ರಿಟಿಷ್ ಜರ್ನಲ್ ಆಫ್ ನೇತ್ರವಿಜ್ಞಾನ’ದಲ್ಲಿ ವಿಜ್ಞಾನಿ ಪ್ರಕಟಿಸಿದ ಇತ್ತೀಚಿನ ವರದಿಯ ಪ್ರಕಾರ, ನಿಮ್ಮ ಕಣ್ಣಿನ ರೆಟಿನಾ(ಅಕ್ಷಿಪಟಲ) ನಿಮ್ಮ ವಯಸ್ಸನ್ನು ಬಹಿರಂಗಪಡಿಸುತ್ತದೆ. ನೀವು ಸಮಯಕ್ಕಿಂತ ಮುಂಚೆ ಸಾಯುವುದಿಲ್ಲ ಎಂದು ನಿಮ್ಮ ಕಣ್ಣಿನ ರೆಟಿನಾ ಹೇಳುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.
ಸಂಶೋಧನೆಯಲ್ಲಿ, ನೀವು ಅಕಾಲಿಕವಾಗಿ ಸಾಯುತ್ತೀರಾ ಎಂದು ಕಂಡುಹಿಡಿಯಲು ರೆಟಿನಾದ ವಯಸ್ಸಿನ ಅಂತರ ವನ್ನು ಸ್ಕ್ರೀನಿಂಗ್ ಸಾಧನವಾಗಿ ಬಳಸಲಾಗುತ್ತದೆ.
ನೀವು ಅನಾರೋಗ್ಯಕ್ಕೆ ಒಳಗಾದಾಗ ವೈದ್ಯರು ಮೊದಲು ನಿಮ್ಮ ಕಣ್ಣುಗಳನ್ನು ನೋಡುತ್ತಾರೆ ಎಂಬ ಅಂಶವೂ ಈ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಇದರೊಂದಿಗೆ ಕಣ್ಣಿನ ಹಿಂಭಾಗವನ್ನು ಆಳವಾಗಿ ನೋಡುವ ಮೂಲಕ ವ್ಯಕ್ತಿಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು ಎಂದು ಈ ಸಂಶೋಧನೆಯಲ್ಲಿ ಹೇಳಲಾಗಿದೆ.
ಕಿಡ್ನಿ ಮತ್ತು ಹೃದಯ ಆರೋಗ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದು ಕಣ್ಣುಗಳ ಮೂಲಕವೂ ತಿಳಿಯುತ್ತದೆ. ಕಣ್ಣುಗಳ ಆಳವನ್ನು ಎಚ್ಚರಿಕೆಯಿಂದ ನೋಡುವುದರಿಂದ, ನಿಮ್ಮ ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂದು ತಿಳಿಯುತ್ತದೆ. ಇದರೊಂದಿಗೆ ನಿಮ್ಮ ಹೃದಯ ಮತ್ತು ರಕ್ತನಾಳಗಳ ಆರೋಗ್ಯದ ಬಗ್ಗೆಯೂ ಹೇಳುತ್ತದೆ ಎಂಬ ವಿಚಾರ ತಿಳಿದು ಬಂದಿದೆ.
ವರ್ಷಕ್ಕೆ ಎರಡು ಬಾರಿಯಾದರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂಬುದೂ ಈ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಇದರಿಂದ ಎಲ್ಲಾ ರೀತಿಯ ಕಾಯಿಲೆಗಳನ್ನು ತಪ್ಪಿಸಬಹುದು ಮತ್ತು ಮುಂಚಿತವಾಗಿ ಎಚ್ಚರದಿಂದಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಪ್ರಮುಖವಾಗಿ ಅಧ್ಯಯನ ಪ್ರಕಾರ ಕಣ್ಣುಗಳು ಸ್ಥಿತಿ ಗತಿಯ ಅಂಶಗಳು :
- ಕಣ್ಣುಗಳ ಮೂಲಕ ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಅನ್ನು ಸಹ ಸೂಚಿಸುತ್ತವೆ ಕಣ್ಣುಗಳು ನಿಮ್ಮ ದೇಹದ ಕನ್ನಡಿ ಆಗಿದೆ.
- ಕಣ್ಣುಗಳು ನಿಮ್ಮ ಆರೋಗ್ಯದ ಸಂಪೂರ್ಣ ಸ್ಥಿತಿಯನ್ನು ಹೇಳುತ್ತದೆ ಎಂದು ಈ ಸಂಶೋಧನೆಯಲ್ಲಿ ತಿಳಿದುಬಂದಿದೆ.
- ಅಲ್ಲದೆ ಡ್ರೈ ಕಣ್ಣುಗಳು ಸಂಧಿವಾತದ ಸಂಕೇತವಾಗಿದೆ.
- ಕಣ್ಣುಗಳ ಸುತ್ತ ಬಿಳಿ ಬಣ್ಣವು ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಅನ್ನು ಸಂಕೇತವಾಗಿದೆ.
- ನಿಮ್ಮ ರೆಟಿನಾದ ಬಣ್ಣವು ಬೂದು ಬಣ್ಣದ್ದಾಗಿದ್ದರೆ, ಯಕೃತ್ತು, ಮೆದುಳು ಮತ್ತು ಇತರ ಅಂಗಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗಬಹುದು.
- ಹಾಗೆಯೇ ಕಣ್ಣಿನ ಕೋಶಗಳ ಅವನತಿಯು ನಿಮ್ಮ ನಿಜವಾದ ವಯಸ್ಸು ಏನು ಮತ್ತು ಈಗ ಎಷ್ಟು ಉಳಿದಿದೆ ಎಂದು ಹೇಳುತ್ತದೆ.
ಈ ಮೇಲಿನಂತೆ ಸಂಪೂರ್ಣ ಸಂಶೋಧನೆಯಲ್ಲಿ, ಕಣ್ಣುಗಳಿಗೆ ಸಂಬಂಧಿಸಿದಂತೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗ ಮಾಡಲಾಗಿದೆ, ಅದನ್ನು ತಿಳಿದ ನಂತರ ನೀವು ಕೂಡ ಒಂದು ಕ್ಷಣ ಬೆರಗಾಗುವುದು ಖಂಡಿತ.
ಕಣ್ಣುಗಳು ನಮ್ಮ ದೇಹದಲ್ಲಿ ಅಮೂಲ್ಯವಾದ ಭಾಗವು ಹೌದು. ಆದ್ದರಿಂದ ಕಣ್ಣುಗಳ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ.