Vastu Tips : ವಾಸ್ತು ಪ್ರಕಾರ ರಾತ್ರಿ ಬಟ್ಟೆ ಒಗೆಯೋದು ಸರಿಯಾ,ತಪ್ಪಾ?

ಭಾರತೀಯರಲ್ಲಿ ಆಚಾರ ವಿಚಾರ ರೂಢಿ ಸಂಪ್ರದಾಯಗಳ ಸೊಗಡು ಎಲ್ಲೆಡೆ ಹರಡಿದೆ. ಹಿರಿಯರ ಅನುಭವ ಮತ್ತು ಶಾಸ್ತ್ರ ಪುರಾಣಗಳ ಪ್ರಕಾರ ಸಂಜೆಯ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ರೋಗ, ಅಸಂತೋಷ ಮತ್ತು ಸಮಸ್ಯೆಗಳು ಉಂಟಾಗಬಹುದು. ಅಷ್ಟೇ ಅಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮಿಯೂ ನೆಲೆಸುವುದಿಲ್ಲ ಎಂಬ ನಂಬಿಕೆ ಇದೆ.

ಹಿಂದಿನ ಕಾಲದ ನಂಬಿಕೆಗೂ ಇಂದಿನ ಕಾಲದ ಜೀವನಕ್ಕೂ ಹೋಲಿಸಲು ಹೋದರೆ ಉತ್ತರ ಶೂನ್ಯ ಆಗಿರುತ್ತದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಜನರು ತಮ್ಮ ಆಚಾರ ವಿಚಾರ ರೂಢಿ ಸಂಪ್ರದಾಯ ನಂಬಿಕೆಯೇ ಅವರ ಜೀವಾಳ ಆಗಿತ್ತು ಆದರೆ ಈಗಿನ ಕಾಲದವರರು ತಂತ್ರಜ್ಞಾನನಕ್ಕೆ ಒಗ್ಗಿಕೊಂಡರು ಸಹ ನಂಬಿಕೆಗಳು ಯಾವುತ್ತೂ ಸುಳ್ಳಾಗುವುದಿಲ್ಲ. ಜೀವನ ಶೈಲಿ ಬದಲಾದರೂ ನಂಬಿಕೆಗಳು ಸುಳ್ಳಾಗಳು ಸಾಧ್ಯವಿಲ್ಲ. ಇದಕ್ಕೆ ನಮ್ಮ ಹಿರಿಯರೇ ಸಾಕ್ಷಿ.

ಹಾಗೆಯೇ ಹಿಂದೂ ಧರ್ಮ ಮತ್ತು ವಾಸ್ತು ಶಾಸ್ತ್ರದಲ್ಲಿ, ನಿರ್ದಿಷ್ಟ ಸಮಯದಲ್ಲಿ ಮಾಡಬೇಕಾದ ಅನೇಕ ಕೆಲಸಗಳಿವೆ. ಕೆಲವು ಚಟುವಟಿಕೆಗಳನ್ನು ಸಂಜೆ ಅಥವಾ ಸೂರ್ಯಾಸ್ತದ ನಂತರ ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ.ಹೌದು ವಾಸ್ತು ಪ್ರಕಾರ ರಾತ್ರಿ ಬಟ್ಟೆ ಒಗೆಯುವುದು ಸರಿಯೋ ಅಥವಾ ತಪ್ಪೋ ಎಂಬ ಉತ್ತರ ಇಲ್ಲಿದೆ.

ವಾಸ್ತುಶಾಸ್ತ್ರದ ಪ್ರಕಾರ, ನಾವು ಯಾವಾಗಲೂ ಹಗಲಿನಲ್ಲಿ ಬಟ್ಟೆ ಒಗೆಯಬೇಕು. ಹಗಲಿನಲ್ಲಿ ಬಟ್ಟೆ ಒಗೆಯುವಾಗ ಉತ್ತಮವಾದ ಸೂರ್ಯನ ಬೆಳಕು ಮತ್ತು ಗಾಳಿ ಸಿಗುತ್ತದೆ. ಇದರಿಂದ ಬಟ್ಟೆಗಳಲ್ಲಿರುವ ಸೂಕ್ಷ್ಮಜೀವಿಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಮತ್ತೊಂದೆಡೆ ರಾತ್ರಿ ವೇಳೆ ಬಟ್ಟೆ ಒಗೆಯುವುದು ಇದಕ್ಕೆ ವಿರುದ್ಧವಾಗಿದೆ. ಸಾಕಷ್ಟು ಸೂರ್ಯನ ಬೆಳಕು ಮತ್ತು ಗಾಳಿ ಇರದ ಕಾರಣ ಎಲ್ಲಾ ಸೂಕ್ಷ್ಮಜೀವಿಗಳು ರಾತ್ರಿಯಲ್ಲಿ ಒದ್ದೆಯಾದ ಬಟ್ಟೆಯ ಮೇಲೆ ಅಂಟಿಕೊಳ್ಳುತ್ತವೆ, ಇದು ನಂತರ ಅನೇಕ ರೋಗಗಳನ್ನು ತರುತ್ತದೆ.

ಸಾಧ್ಯವಾದಷ್ಟು ರಾತ್ರಿ ಬಟ್ಟೆ ಒಗೆಯುವುದನ್ನು ತಪ್ಪಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಕೆಲವು ಕಾರಣಗಳಿಂದ ಹಗಲಿನಲ್ಲಿ ಸಮಯವಿಲ್ಲದಿದ್ದರೆ ಮತ್ತು ರಾತ್ರಿಯಲ್ಲಿ ನೀವು ಬಟ್ಟೆ ತೊಳೆಯಬೇಕಾದರೆ ಅವುಗಳನ್ನು ತೆರೆದ ಸ್ಥಳದಲ್ಲಿ ಒಣಗಿಸಬಾರದು. ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಸಣ್ಣ ಸೂಕ್ಷ್ಮಾಣುಗಳು ಅವುಗಳ ಮೇಲೆ ಅಂಟಿಕೊಳ್ಳುತ್ತವೆ. ನಂತರ ಇದು ನಿಮಗೆ ದೊಡ್ಡ ಹಾನಿಯನ್ನುಂಟು ಮಾಡುತ್ತದೆ. ಇದರೊಂದಿಗೆ ಮನೆಯ ಸುಖ-ಸಮೃದ್ಧಿಯೂ ಶಾಶ್ವತವಾಗಿ ಹೋಗುತ್ತದೆ.

ಅದಲ್ಲದೆ ಧಾರ್ಮಿಕ ವಿದ್ವಾಂಸರ ಪ್ರಕಾರ, ರಾತ್ರಿಯಲ್ಲಿ ಬಟ್ಟೆ ಒಗೆಯುವಾಗ ನಕಾರಾತ್ಮಕ ಶಕ್ತಿಯು ಸೂಕ್ಷ್ಮಜೀವಿಗಳ ರೂಪದಲ್ಲಿ ಪ್ರವೇಶಿಸುತ್ತದೆ. ಬೆಳಗ್ಗೆ ಆ ಬಟ್ಟೆಗಳನ್ನು ಧರಿಸಿದಾಗ ನಕಾರಾತ್ಮಕ ಶಕ್ತಿಯು ವ್ಯಕ್ತಿಯನ್ನು ಪ್ರವೇಶಿಸುತ್ತದೆ. ಇದರ ನಂತರ ಆ ವ್ಯಕ್ತಿಯ ಎಲ್ಲಾ ಕೆಲಸಗಳು ಹಿಮ್ಮುಖವಾಗಲು ಪ್ರಾರಂಭಿಸುತ್ತವೆ. ಆತ ಮಾಡುವ ಯಾವುದೇ ಕೆಲಸದಲ್ಲಿ ಅಡಚಣೆ ಇರುತ್ತದೆ. ಇದರಿಂದ ವ್ಯಕ್ತಿಗೆ ದೊಡ್ಡ ನಿರಾಶೆಯಾಗುತ್ತದೆ ಎಂದು ಸಲಹೆ ನೀಡುತ್ತಾರೆ.

ಈ ಮೇಲಿನ ಹಿಂದೂ ಧರ್ಮ ವಿದ್ವಾಂಸಕರು ಮತ್ತು ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತೆ ಸಂಜೆಯಾದ ನಂತರ ಬಟ್ಟೆ ತೊಳೆಯುವ ರೂಢಿ ಶೋಭೆಯಲ್ಲ ಎಂಬ ನಿಲುವನ್ನು ತಿಳಿಸಲಾಗಿದೆ.

Leave A Reply

Your email address will not be published.