Trending Video: ದೈತ್ಯ ಹಾವಿನ ಜೊತೆ ಪುಟ್ಟ ಮಗುವಿನ ಆಟ | ಎದೆ ಒಮ್ಮೆ ಝಳ್‌ ಎನ್ನುವಂಥ ವಿಡಿಯೋ ವೈರಲ್‌

Share the Article

ದಿನಂಪ್ರತಿ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಕೆಲವೊಂದು ವಿಡಿಯೋಗಳು ನೆಟ್ಟಿಗರನ್ನು ಬೆಚ್ಚಿ ಬೇಳಿಸುತ್ತದೆ. ಇದೀಗ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಕೆಲವೊಮ್ಮೆ ಜನರು ತಮಾಷೆ ಮಾಡಲು ಹೋಗಿ ಅಪಾಯಕ್ಕೆ ಆಹ್ವಾನ ತಂದುಕೊಡುವ ಪ್ರಸಂಗಗಳು ನಡೆಯುತ್ತಿವೆ. ಆದರೆ ಇದೀಗ ವೈರಲ್‌ ಆಗಿರುವ ವಿಡಿಯೋ ಮತ್ತಷ್ಟು ಅಪಾಯಕಾರಿಯಾಗಿದೆ.

ಬೆಕ್ಕಿಗೆ ಆಟ.. ಇಲಿಗೆ ಪ್ರಾಣಸಂಕಟ.. ಎನ್ನುವಂತೆ ಕೆಲವೊಮ್ಮೆ ಏನೋ ಮಾಡಲು ಹೋಗಿ ಮತ್ತೇನೋ ಆಗುವ ಪ್ರಮೇಯ ಕೂಡ ಇರುವುದನ್ನು ಅಲ್ಲಗಳೆಯುವಂತಿಲ್ಲ. ಅಪಾಯಕಾರಿ ಹಾವು ಮತ್ತು ಚಿಕ್ಕ ಮಗುವಿಗೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿ ದ್ದು, ಮಗುವು ಅಂಗಳದಲ್ಲಿ ಕುಳಿತು ಸಂತೋಷದಿಂದ ಆಟವಾಡುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಅಪಾಯಕಾರಿ ಹಾವು ಮಗುವಿನ ಬಳಿ ಬರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪುಟ್ಟ ಮಗುವೊಂದು ಅಂಗಳದಲ್ಲಿ ಖುಷಿಯಿಂದ ಆಟವಾಡುತ್ತಿದ್ದು ಆದರೆ ಸ್ವಲ್ಪ ಸಮಯದ ಬಳಿಕ ತುಂಬಾ ಅಪಾಯಕಾರಿ ಹಾವು ತೆವಳುತ್ತಾ ಮಗುವಿನ ಬಳಿಗೆ ತಲುಪುತ್ತದೆ. ಏನೊಂದು ಅರಿವಿಲ್ಲದೆ , ಮಗು ಹಾವನ್ನು ಆಟದ ವಸ್ತು ಎಂದು ಭಾವಿಸಿ ಹಾವಿನೊಂದಿಗೆ ಆಟವಾಡಲು ಪ್ರಾರಂಭಿಸುತ್ತದೆ . ಹೀಗೆ ದೀರ್ಘಕಾಲದವರೆಗೆ ಆಡುತ್ತಾ ಇದ್ದರೂ ಕೂಡ ಅದೃಷ್ಟವಶಾತ್‌ ಹಾವು ಮಗುವಿಗೆ ಕಚ್ಚದೆ ಸುಮ್ಮನೆ ಇದ್ದದ್ದೇ ಅಚ್ಚರಿ.

ವಿಡಿಯೋ ನೋಡಿದ ನೆಟ್ಟಿಗರು ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಡಿಯೋವನ್ನು rajibul9078 ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಇದುವರೆಗೂ ಸಾವಿರಾರು ಲೈಕ್‌, ಕಾಮೆಂಟ್‌ಗಳನ್ನು ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.


ಸಣ್ಣ ಮಕ್ಕಳನ್ನು ಆಟವಾಡಲು ಬಿಟ್ಟು ಪೋಷಕರು ಅತಿತ್ತ ಹೋಗುವಾಗ ಮಕ್ಕಳ ಮೇಲೆ ನಿಗಾ ವಹಿಸುವುದು ಅವಶ್ಯ. ಇಲ್ಲದೇ ಹೋದರೆ, ಅನಾಹುತ ಸಂಭವಿಸಿದ ಮೇಲೆ ಮರುಗುವ ಬದಲಿಗೆ ಮುಂಜಾಗ್ರತೆ ವಹಿಸಿದರೆ ಉತ್ತಮ.

https://www.instagram.com/reel/Ckj37LovgQA/?utm_source=ig_embed&utm_campaign=loading
Leave A Reply