Samsung Galaxy M04 ಫೋನ್ ಬಿಡುಗಡೆ: ಬೆಲೆ ಕೇವಲ 8,499 ರೂ.! ಇದರ ವೈಶಿಷ್ಯ ಇಲ್ಲಿದೆ
ದಿನೇ ದಿನೇ ಸ್ಮಾರ್ಟ್ ಫೋನ್ ಹವಾ ಹೆಚ್ಚುತ್ತಿದೆ. ಪ್ರಸ್ತುತ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್ಫೋನ್ಗಳು ರಿಲೀಸ್ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್‌ಫೋನ್ ಉಪಯೋಗಿಸದವರು ಯಾರು ಇಲ್ಲ. ಕಂಪನಿಗಳು ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ಹೊಸ ಸ್ಮಾರ್ಟ್ಫೊನ್ಗಳು ಬರುತ್ತಲೇ ಇದೆ.
ಹೌದು ಸದ್ಯ Samsung ಕಂಪೆನಿಯ ಅತ್ಯಂತ ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾದ ಬಹುನಿರೀಕ್ಷಿತ Samsung Galaxy M04 ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ನೀವು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಒಂದನ್ನು ಹುಡುಕುತ್ತಿರುವ ಗ್ರಾಹಕರಿಗಾಗಿ ಕೇವಲ 8,499 ರೂ. ಬೆಲೆಯಲ್ಲಿ ಈ ಹೊಸ Samsung Galaxy M04 ಸ್ಮಾರ್ಟ್‌ಫೋನನ್ನು ಪರಿಚಯಿಸಲಾಗಿದೆ.
Samsung Galaxy M04 ಸ್ಮಾರ್ಟ್‌ಫೋನ್ ವಿಶೇಷತೆಗಳು :
- ಹೊಸ Samsung Galaxy M04 ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯ ಸಾಧನವಾಗಿದ್ದರು ಸಹ ವಾಟರ್ ಡ್ರಾಪ್ ಶೈಲಿಯ ನಾಚ್ ವಿನ್ಯಾಸದಲ್ಲಿ ದೊಡ್ಡದಾದ 6.5 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ.
- 20:9 ಅನುಪಾತದಲ್ಲಿರುವ ಈ ಡಿಸ್‌ಪ್ಲೇಯು 270 ಪಿಪಿಐ ಪಿಕ್ಸೆಲ್ ಸಾಂದ್ರತೆ ಮತ್ತು 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ.
- ಪ್ರೊಸೆಸರ್ ವಿಭಾಗದಲ್ಲಿ, 4GB RAM + 128GB ಮೆಮೊರಿ ಜೊತೆಗೆ ಮೀಡಿಯಾಟೆಕ್ ಹಿಲಿಯೋ P35 SoC ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ RAM ಪ್ಲಸ್ ಫೀಚರ್ ಹೊಂದಿದೆ.
- 8GB ವರೆಗೆ RAM ವಿಸ್ತರಿಸಿಕೊಳ್ಳುವ ಸಾಮರ್ಥವನ್ನು ಹೊಂದಿದೆ. ಮೈಕ್ರೊ SD ಕಾರ್ಡ್ ಮೂಲಕ ಈ ಸ್ಮಾರ್ಟ್‌ಫೋನಿನ ಮೆಮೊರಿಯನ್ನು 1TB ವರೆಗೆ ವಿಸ್ತರಿಸಬಹುದಾದ ಆಯ್ಕೆ ಇರುವುದು ಪ್ರಮುಖ ವಿಶೇಷತೆಯಾಗಿದೆ.
- ಕ್ಯಾಮೆರಾ ವಿಭಾಗದಲ್ಲಿ, Samsung Galaxy M04 ಸ್ಮಾರ್ಟ್‌ಫೋನ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ.
- ಇದರ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿವೆ.
- ಸೆಲ್ಫಿಗಳಿಗಾಗಿ, 5 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.
- ಬ್ಯಾಟರಿ ವಿಭಾಗದಲ್ಲಿ, ಶಕ್ತಿಯುತ ಬೃಹತ್ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ Samsung Galaxy M04 ಸ್ಮಾರ್ಟ್‌ಫೋನ್ ಸಜ್ಜುಗೊಂಡಿದೆ.
- ಸ್ಮಾರ್ಟ್‌ಫೋನಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ವೈಶಿಷ್ಟ್ಯಗಳನ್ನು ನಾವು ನೋಡಬಹುದು.
- ಸ್ಟೋರೇಜ್ ಬಗ್ಗೆ ಹೇಳುವುದಾದರೆ 4GB RAM + 64GB ಗೆ ಅವಕಾಶ ಇದೆ.
ಪ್ರಸ್ತುತ ಭಾರತದಲ್ಲಿ ನೂತನ Samsung Galaxy M04 ಸ್ಮಾರ್ಟ್‌ಫೋನ್ ಬೆಲೆ ಕೇವಲ 8,499 ರೂ.ಗಳಾಗಿವೆ.ಅತೀ ಶೀಘ್ರದಲ್ಲಿ ಅಂದರೆ ಇದೇ ಡಿಸೆಂಬರ್ 16 ರಂದು ಅಮೆಜಾನ್ ನಲ್ಲಿ ಕೊಂಡುಕೊಳ್ಳಬಹುದಾಗಿದೆ. ನೀವು ನೀಲಿ, ಗೋಲ್ಡ್, ಮಿಂಟ್ ಗ್ರೀನ್ ಮತ್ತು ವೈಟ್ ಬಣ್ಣದ ಫೋನನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.ಅದಲ್ಲದೆ ಈ ಸ್ಮಾರ್ಟ್‌ಫೋನ್‌ಗೆ ಎರಡು ವರ್ಷಗಳವರೆಗೆ OS ನವೀಕರಣಗಳನ್ನು ಒದಗಿಸುವುದಾಗಿ ಸ್ಯಾಮ್‌ಸಂಗ್ ಕಂಪೆನಿ ಭರವಸೆ ನೀಡಿದೆ.