ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ದರೆ ಓಲಾ ಕಂಪನಿಯಿಂದ ಇದೆ ಬಂಪರ್ ಆಫರ್ | ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ ಪಡೆಯಿರಿ 10ಸಾವಿರ ಡಿಸ್ಕೌಂಟ್

ವಾಹನ ನಮಗೆ ಅಗತ್ಯ ಸಂಪರ್ಕ ಸಾಧನ ಆಗಿದೆ. ಅದರಲ್ಲೂ ಆಧುನಿಕ ಯುಗದಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಹಾಗೆಯೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕ ಉತ್ತಮ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ.

 

ಅದರಂತೆ ಇದೀಗ ಓಲಾ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಅದ್ಭುತ ಆಫರ್‌ಗಳನ್ನು ನೀಡುತ್ತಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಚಿಸುತ್ತಿದ್ದರೆ ಇದು ಉತ್ತಮ ಅವಕಾಶವಾಗಿದೆ. ಹೌದು. ಓಲಾ ಎಲೆಕ್ಟ್ರಿಕ್‌ನಿಂದ ಈ ವರ್ಷದ ಕೊನೆಯಲ್ಲಿ ‘ಡಿಸೆಂಬರ್ ಟು ರಿಮೆಂಬರ್’ ಕೊಡುಗೆಯ ಅಡಿಯಲ್ಲಿ, ನೀವು ಕಂಪನಿಯ ಸ್ಕೂಟರ್‌ಗಳಾದ S1 ಮತ್ತು S1 ಪ್ರೊ ಎರಡನ್ನೂ ಬಂಪರ್ ರಿಯಾಯಿತಿ ಮೇಲೆ ಖರೀದಿ ಮಾಡಬಹುದು.

ಓಲಾ ಎಲೆಕ್ಟ್ರಿಕ್ ಸೆಪ್ಟೆಂಬರ್‌ನಲ್ಲಿ ಎಸ್ 1 ಪ್ರೊನಲ್ಲಿ 10,000 ರೂಪಾಯಿಗಳ ರಿಯಾಯಿತಿ ಕೊಡುಗೆಯನ್ನು ಪರಿಚಯಿಸಿದೆ. ಇದೀಗ ಕಂಪೆನಿ ಆ ಆಫರ್‌ನ್ನು ಡಿಸೆಂಬರ್‌ವರೆಗೆ ವಿಸ್ತರಿಸಿದೆ. ನೀವು ಈ ತಿಂಗಳು Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದರೆ, ನೀವು ಅದರ ಮೇಲೆ 10,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಈ ಸ್ಕೂಟರ್‌ನ ಬೆಲೆ 1.30 ಲಕ್ಷ (ಎಕ್ಸ್ ಶೋ ರೂಂ) ಆಗಿದ್ದು, ಇದರ ಮೇಲೆ ನೀವು 10,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.

ನೀವು Ola ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ EMI ನಲ್ಲಿ ಖರೀದಿಸಿದರೆ, ನೀವು ಶೇ.5 ರಷ್ಟು ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಈ ಆಫರ್‌ ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಗಳಿಗೆ ಮಾತ್ರ ಲಭ್ಯವಿದೆ. ಅಷ್ಟೇ ಅಲ್ಲದೇ S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿಯ ಮೇಲೆ, ನೀವು ಒಂದು ವರ್ಷಕ್ಕೆ 3,999 ರೂ ಮೌಲ್ಯದ ಉಚಿತ ಸೇವೆಯನ್ನು ಪಡೆಯಬಹುದು ಮತ್ತು ಓಲಾ ಹೈಪರ್‌ಚಾರ್ಜರ್ ನೆಟ್‌ವರ್ಕ್‌ಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಇದರ ಜೊತೆಯಲಿ ಕಂಪನಿಯು ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕ ಯೋಜನೆಯನ್ನು ಸಹ ಘೋಷಿಸಿದೆ. ಅಂದರೆ ಗ್ರಾಹಕರು ಸಾಲವನ್ನು ಪಡೆಯಲು ಯಾವುದೇ ಪ್ರೊಸೆಸಿಂಗ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

Leave A Reply

Your email address will not be published.