Storage Issue: ನಿಮ್ಮ ಮೊಬೈಲ್​ ನಲ್ಲಿ ಸ್ಟೋರೇಜ್​ ಬಹಳ ಬೇಗ ಫುಲ್​ ಆಗುತ್ತಾ? ಹಾಗಾದರೆ ಹೇಗೆ ಕ್ಲಿಯರ್‌ ಮಾಡೋದು ? ಈ ಟ್ರಿಕ್ಸ್​ ಫಾಲೋಮಾಡಿ

ಇತ್ತೀಚಿಗೆ ಸ್ಮಾರ್ಟ್ ಫೋನ್ ಹವಾ ಹೆಚ್ಚುತ್ತಿದೆ ಅದಲ್ಲದೆ ವೀಡಿಯೋ, ಸಾಂಗ್,ಫೋಟೋಗಳನ್ನು ಸೇವ್ ಮಾಡಿಕೊಂಡು, ಸಿಕ್ಕ ಸಿಕ್ಕ ಅಪ್ಲಿಕೇಶನ್ ಮೊಬೈಲ್ ಲ್ಲಿ ತುಂಬಿಸಿ ಕೊನೆಗೆ ಸ್ಟೋರೇಜ್ ಫುಲ್ ಅನ್ನೋ ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ಜೊತೆಗೆ ನಿಮ್ಮ ಸ್ಮಾರ್ಟ್​ಫೋನ್​ನ ಸ್ಟೋರೇಜ್​ ಫುಲ್​ ಆದಂತೆ ನಿಮ್ಮ ಮೊಬೈಲ್​ಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಹೌದು ಕೊನೆಗೆ ಮೊಬೈಲ್ ಹ್ಯಾಂಗ್ ಸಮಸ್ಯೆ ಅಂತ ಚಿಂತೆ ಮಾಡಬೇಕಾಗುತ್ತದೆ.

 

ಹಾಗಿದ್ದರೆ ಮೊಬೈಲ್ ಹ್ಯಾಂಗ್ ಆಗದಂತೆ ನೋಡಿಕೊಳ್ಳಬೇಕಾದರೆ ಈ ಟ್ರಿಕ್ಸ್​ ಅನುಸರಿಸಿ .

  • ಬಹುಮುಖ್ಯವಾಗಿ ಹೇಳುವುದೆಂದರೆ ಹಲವಾರು ಮಂದಿ ತಮ್ಮ ಮೊಬೈಲ್​ಗಳಲ್ಲಿ ಅನಗತ್ಯ ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡಿಟ್ಟುಕೊಳ್ಳುತ್ತಾರೆ. ಆದರೆ ಈ ಅಪ್ಲಿಕೇಶನ್​ಗಳು ನಿಮ್ಮ ಮೊಬೈಲ್​ನ ಸ್ಟೋರೇಜ್​ ಇನ್ನಷ್ಟು ಹೆಚ್ಚಿಸುತ್ತದೆ. ಅದ್ರಲ್ಲೂ ಒಟಿಟಿಗೆ ಸಂಬಂಧಪಟ್ಟ ಅಪ್ಲಿಕೇಶನ್​ಗಳನ್ನು ಬಳಸುತ್ತಿದ್ದರೆ ಅದರ cache ಯನ್ನು ಆಗಾಗ ಕ್ಲಿಯರ್ ಮಾಡ್ತಾ ಇರಿ ಇದರಿಂದ ನಿಮ್ಮ ಸ್ಟೋರೇಜ್​ ಫುಲ್​ ಆಗುವುದನ್ನು ತಪ್ಪಿಸಬಹುದು.
  • • ಪ್ರತಿಯೊಬ್ಬರು ಮುಖ್ಯವಾಗಿ ಆನ್​ಲೈನ್​ನಲ್ಲಿ ಫೋಟೋ ಅಥವಾ ವಿಡಿಯೋ ಡೌನ್​ಲೋಡ್​ ಮಾಡುವುದನ್ನು ನಿಲ್ಲಿಸಿ. ಏಕೆಂದರೆ ಈ ಆನ್​ಲೈನ್​ನಲ್ಲಿ ಡೌನ್​ಲೋಡ್​ ಮಾಡುವಂತಹ ಫೈಲ್​ಗಳು ಹೆಚ್ಚು ಸ್ಟೋರೇಜ್ ಹೊಂದಿರುತ್ತವೆ. ಆದ್ದರಿಂದ ನಿಮ್ಮ ಸ್ಮಾರ್ಟ್​ಫೋನ್​ಗಳ ಸ್ಟೋರೇಜ್ ಬೇಗನೆ ಫುಲ್​ ಆಗುತ್ತದೆ.

ಆದ್ದರಿಂದ ನೀವು ಡೌನ್​ಲೋಡ್ ಮಾಡಿದ ಫೋಟೋ ಅಥವಾ ವಿಡಿಯೋಗಳನ್ನು ಕ್ಲೌಡ್​ ಸ್ಟೋರೇಜ್​ನಲ್ಲಿ ಆ್ಯಡ್​ ಮಾಡಿ. ಏಕೆಂದರೆ ಗೂಗಲ್​ ಈ ರೀತಿಯ ಫೈಲ್​ಗಳನ್ನು ಆ್ಯಡ್​ ಮಾಡಲೆಂದೇ 15 ಜಿಬಿಯಷ್ಟು ಸ್ಟೋರೇಜ್​ ಅನ್ನು ನೀಡಿರುತ್ತೆ. ಅದಕ್ಕಾಗಿ ಅಲ್ಲಿ ನೀವು ಆ್ಯಡ್​ ಮಾಡ್ಬಹುದು.

  • ವಾಟ್ಸಪ್​ ಬಳಸಬೇಕಾದರೆ ಅದರ ಸ್ಟೋರೇಜ್​ ಕೂಡ ತಾನಾಗಿ ಫುಲ್ ಆಗುತ್ತದೆ. ಅದರಲ್ಲೂ ವಾಯ್ಸ್​ ರೆಕಾರ್ಡ್​, ಫೋಟೋ, ವಿಡಿಯೋ, ಡಾಕ್ಯುಮೆಂಟ್ಸ್​ಗಳು ಇವುಗಳನ್ನು ಶೇರ್ ಮತ್ತು ಡೌನ್​ಲೋಡ್​ ಮಾಡುವುದರಿಂದ ನಿಮ್ಮ ಮೊಬೈಲ್​ನ ಸ್ಟೋರೇಜ್​ ಫುಲ್​ ಆಗುವ ಸಾಧ್ಯತೆಗಳಿರುತ್ತದೆ.
    ಆದರೆ ನಿಮ್ಮ ವಾಟ್ಸಪ್​ನ ಸ್ಟೋರೇಜ್​ ಫುಲ್​ ಆಗದಾಗೆ ನೋಡಬೇಕಾದರೆ ವಾಟ್ಸಪ್​ ಸ್ಟೋರೇಜ್​ ಮ್ಯಾನೇಜರ್​ ಅನ್ನು ಬಳಸಬೇಕು. ಇದನ್ನು ಬಳಸುವುದರಿಂದ ನಿಮ್ಮ ವಾಟ್ಸಪ್​ಗೆ ಬರುವಂತಹ ಫೋಟೋ, ವಿಡಿಯೋಗಳನ್ನು ಇನ್​ಸ್ಟಂಟ್​ ಆಗಿ ಡಿಲೀಡ್​ ಮಾಡಬಹುದು.
  • ನಿಮ್ಮ ಸ್ಮಾರ್ಟ್​​ಫೋನ್​ಗಳಲ್ಲಿ ಅನಗತ್ಯವಾಗಿ ಬಿಗ್​​ಸೈಜ್​ ಫೈಲ್​ಗಳು ತುಂಬಿಕೊಳ್ಳುತ್ತದೆ. ಈ ರೀತಿಯ ಫೈಲ್​ಗಳನ್ನು ನಿಮಗೆ ಸರ್ಚ್​ ಮಾಡಿ ಡಿಲೀಟ್​ ಮಾಡುವಂತಹ ಅವಕಾಶಗಳಿವೆ. ಹಲವಾರು ಜನರು 16 ಜಿಬಿ, 32 ಜಿಬಿ, 128 ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್​ಫೋನ್​ಗಳನ್ನು ಹೊಂದಿರುತ್ತಾರೆ.

ಆದರೆ ಇದೂ ಕೂಡ ಸ್ಟೋರೇಜ್ ಫುಲ್​ ಆಗಿ ಹ್ಯಾಂಗ್​ ಆಗಲು ಶುರುವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಮೊಬೈಲ್​ನಲ್ಲಿರುವ ಅಪ್ಲಿಕೇಶನ್​ಗಳು. ಇದನ್ನು ಓಪನ್ ಮಾಡುವುದರಿಂದ ನಿಮ್ಮ ಸ್ಮಾರ್ಟ್​​ಫೋನ್​ನ ಸ್ಟೋರೇಜ್​ ಫುಲ್​ ಆಗುತ್ತದೆ. ಇದನ್ನು ನೀವು ಮೊಬೈಲ್​ನ ಸೆಟ್ಟಿಂಗ್ಸ್​ಗೆ ಹೋಗಿ ಅಪ್ಲಿಕೇಶನ್ ಆಯ್ಕೆಯಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ.

ಒಟ್ಟಾರೆ ಸ್ಮಾರ್ಟ್ ಫೋನಲ್ಲಿ ಸ್ಟೋರೇಜ್ ಸಮಸ್ಯೆ ಪ್ರತಿಯೊಬ್ಬರಿಗೂ ಬಂದೇ ಬರುತ್ತದೆ ಹಾಗಾಗಿ ನೀವು ಗೂಗಲ್ ಅಕೌಂಟ್ ಮಾಡಿ ಇರಿಸಿಕೊಳ್ಳಬಹುದು ಅಥವಾ ಫೋಟೋ ವೀಡಿಯೋ ಗಳನ್ನು ಮೆಮೊರಿ ಅಥವಾ ಬೇರೆ ಸಿಸ್ಟಮ್ ನಲ್ಲಿ ಶೇಕರಿಸಿ ಇಡಬಹುದಾಗಿದೆ.

Leave A Reply

Your email address will not be published.