iPhone Offer: ಅತೀ ಹೆಚ್ಚು ಮಾರಾಟವಾದ ಐಫೋನ್​ ನಿಮ್ಮದಾಗಿಸಿಕೊಳ್ಳಬಹುದು, ಅದು ಕೂಡಾ ಅತೀ ಕಡಿಮೆ ಬೆಲೆಯಲ್ಲಿ, ಈ ಆಫರ್​ ಮತ್ತೆ ಬರುವುದಿಲ್ಲ

ಇತ್ತೀಚೆಗೆ ಸ್ಮಾರ್ಟ್ಫೋನ್ ಕಂಪನಿಗಳಿಂದ ಹೊಸ ಹೊಸ ಸ್ಮಾರ್ಟ್ಫೋನ್ ಗಳು ಉತ್ತಮ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಗ್ರಾಹಕರ ಕಣ್ಮನ ಸೆಳೆಯಲು ಸ್ಮಾರ್ಟ್ಫೋನ್ ಗಳು ಪೈಪೋಟಿಗೆ ನಿಂತಿವೆ. ಅದರಲ್ಲೂ iPhone ಗ್ರಾಹಕರ ಕಣ್ಮನ ಸೆಳೆದಿರುವ ಸ್ಮಾರ್ಟ್ ಫೋನ್ ಆಗಿದೆ. ಇದೀಗ ನಿಮ್ಮ ನೆಚ್ಚಿನ ಐಫೋನ್ ಅತೀ ಕಡಿಮೆ ಬೆಲೆಗೆ ಲಭ್ಯವಿದೆ. 2020 ರಲ್ಲಿ ಅತೀ ಹೆಚ್ಚು ಮಾರಾಟವಾದ ಐಫೋನ್​ 11 ಅನ್ನು ರಿಯಾಯಿತಿಯ ಜೊತೆಗೆ ನಿಮ್ಮದಾಗಿಸಬಹುದು. ಇನ್ನೂ ಈ ಐಫೋನ್ ನ ಬೆಲೆ ಎಷ್ಟು? ಫೀಚರ್ಸ್ ಹೇಗಿದೆ? ಎಂಬುದನ್ನು ನೋಡೋಣ.

 

ಫ್ಲಿಪ್‌ಕಾರ್ಟ್ ಇದೀಗ ಐಫೋನ್ 11 ನಲ್ಲಿ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಈ ಐಫೋನ್ 11 ರ ಆರಂಭಿಕ ಬೆಲೆ 64,900 ರೂಪಾಯಿ ಆಗಿದೆ. 2020 ರಲ್ಲಿ, ಈ ಸ್ಮಾರ್ಟ್ಫೋನ್ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಫೋನ್ ಎಂಬ ದಾಖಲೆಯನ್ನು ಕೂಡ ಪಡೆದಿದೆ.

ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ಆಗಿರುವ ಫ್ಲಿಪ್‌ಕಾರ್ಡ್ ಇದೀಗ ಐಫೋನ್​ 11 ರ ಮೇಲೆ ರೂ.3991 ರ ಭರ್ಜರಿ ರಿಯಾಯಿತಿಯನ್ನು ಗ್ರಾಹಕರಿಗೆ ನೀಡುತ್ತಿದೆ. ಗ್ರಾಹಕರು ರೂ.39,999 ಕ್ಕೆ ಐಫೋನ್ 11 ಅನ್ನು ಪಡೆಯಬಹುದಾಗಿದೆ. ಇನ್ನೂ ನೀವು ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಮೂಲಕ ರೂ.5000 ಕ್ಕಿಂತ ಹೆಚ್ಚಿನ ಶಾಪಿಂಗ್ ಮಾಡಿದರೆ, 10% ರಿಯಾಯಿತಿಯನ್ನು ಅಂದ್ರೆ ರೂ.1500 ವರೆಗೆ ಈ ಸ್ಮಾರ್ಟ್​​ಫೋನ್ ಅನ್ನು ಪಡೆಯಬಹುದಾಗಿದೆ.

ಈ ಸ್ಮಾರ್ಟ್ಫೋನ್ ಕೇವಲ ರೂ.38,499 ಕ್ಕೆ ಫ್ಲಿಪ್​ಕಾರ್ಟ್​​ನಲ್ಲಿ ಲಭ್ಯವಿದೆ. ಹಾಗೇ ನಿಮ್ಮ ಹಳೆಯ ಫೋನ್ ಅನ್ನು ಇದರ ಜೊತೆಗೆ ವಿನಿಮಯ ಮಾಡಿಕೊಂಡರೆ ನೀವು ಫ್ಲಿಪ್‌ಕಾರ್ಟ್‌ನಲ್ಲಿ 20,500 ರೂ.ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಆಗ ನೀವು ರೂ.17,499 ಗೆ ಈ ಫೋನ್ ಅನ್ನು ಖರೀದಿಸಬಹುದಾಗಿದೆ‌.

ಇನ್ನೂ ಈ ಐಫೋನ್ 11 ರ ಫೀಚರ್ಸ್ ಹೇಗಿದೆ ಎಂದರೆ, ಇದು 6.1-ಇಂಚಿನ ಲಿಕ್ವಿಡ್ ರೆಟಿನಾ HD ಡಿಸ್ಪ್ಲೇಯನ್ನು ಹೊಂದಿದೆ. ಹಾಗೂ 12MP ಡ್ಯುಯಲ್ ಸೆನ್ಸಾರ್ ಹಿಂಬದಿಯ ಕ್ಯಾಮೆರಾ, 12MP ಸೆಲ್ಫಿ ಶೂಟರ್ ಕ್ಯಾಮೆರಾ, A13 ಬಯೋನಿಕ್ ಚಿಪ್ ಸೆಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಐಫೋನ್ 11 ಸೀರಿಸ್​ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಸೇಲ್, ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದ ಸ್ಮಾರ್ಟ್​ಫೋನ್ ಆಗಿದೆ. ಇದರ ಅತ್ಯುತ್ತಮ ಫೀಚರ್ಸ್ ನಿಂದಾಗಿ ಇದು 2020 ರಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಆಗಿದೆ. ಇನ್ನೂ ಈ ಉತ್ತಮ ಆಫರ್ ಮಿಸ್ ಮಾಡ್ಕೊಂಡ್ರೆ ಮತ್ತೆ ಬರೋದಿಲ್ಲ.

Leave A Reply

Your email address will not be published.