ಗೋಲ್​ಗೊಪ್ಪದಿಂದಾಗಿ ಪ್ರೊಫೆಸರ್​ ಹುದ್ದೆಗೇರಿದ ವ್ಯಕ್ತಿ!!

ಸಾಧಿಸುವ ಛಲ ಒಂದಿದ್ದರೆ ಯಾವುದು ಅಸಾಧ್ಯ ಎಂಬುದಿಲ್ಲ. ಉತ್ತಮವಾದ ಆಸಕ್ತಿಯೊಂದಿಗೆ ತನ್ನ ಕೆಲಸದಲ್ಲಿ ತೊಡಗಿಕೊಂಡರೆ ಯಶಸ್ಸು ಖಂಡಿತ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ ಈ ವ್ಯಕ್ತಿ. ಹೌದು. ಇಲ್ಲೊಂದು ಕಡೆ ಗೋಲ್​ಗೊಪ್ಪದಿಂದಾಗಿ ಪ್ರೊಫೆಸರ್​ ಹುದ್ದೆಗೇರಿದ್ದಾರೆ.

ಹೌದು. ಕಳೆದ ಹಲವಾರು ವರ್ಷಗಳಿಂದ ಗೋಲ್​ಗೊಪ್ಪ ಮಾರಾಟ ಮಾಡಿ, ತನ್ನ ಶಿಕ್ಷಣದ ಖರ್ಚನ್ನು ತಾನೇ ನೋಡಿಕೊಳ್ಳುತ್ತಿರುವ ಯುವಕ, ಇದೀಗ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಯುಜಿಸಿ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರ ನಡೆಸಿದ ಪರೀಕ್ಷೆಯನ್ನೂ ಬರೆದು ಪ್ರೊಫೆಸರ್​ ಹುದ್ದೆಗೇರಿದ್ದಾರೆ.

ಇಂತಹ ಉತ್ತಮ ಸಾಧನೆ ಮಾಡಿ ಇತರರಿಗೆ ಮಾದರಿ ಆಗಿದ್ದೆ ಶಿವಲಿಂಗ್‌ ಎನ್ನುವ ವ್ಯಕ್ತಿ. ನಾನು ಚಿಕ್ಕವನಿರುವಾಗಲೇ ತಂದೆ ಕೆಲಸ ಬಿಟ್ಟರು. ಆ ಸಮಯದಲ್ಲಿ ಮನೆಯ ಆರ್ಥಿಕ ಪರಿಸ್ಥಿತಿಯೂ ಹದೆಗೆಟ್ಟಿತ್ತು. ಹೀಗಾಗಿ ನಾನು ಬೆಳಗ್ಗೆ ಬೇಗ ಎದ್ದು ಓದು ಮುಗಿಸಿ ಶಾಲೆಗೆ ಹೋಗುತ್ತಿದ್ದೆ. ಸಂಜೆ ಬಂದು ಗೋಲ್​ಗೊಪ್ಪಕ್ಕೆ ಬೇಕಾದ ಸಿದ್ದತೆಯನ್ನು ಮಾಡಿಕೊಂಡು ಮಾರಾಟ ಆರಂಭಿಸುತ್ತಿದೆ. ನನ್ನ ಶಾಲೆಯಲ್ಲಿನ ಮಕ್ಕಳೆಲ್ಲರೂ ಕಾರು, ಬೈಕ್​ನಲ್ಲಿ ಬರುತ್ತಿದ್ದರು. ಆದರೆ ನಾನೊಬ್ಬನೇ ಸೈಕಲ್​ನಲ್ಲಿ ತೆರಳುತ್ತಿದ್ದೆ ಎಂದು ಶಿವಲಿಂಗ್‌ ಹೇಳಿದ್ದಾರೆ.

ಕೆಲವು ಮಕ್ಕಳು ನನ್ನನ್ನು ಗೇಲಿ ಮಾಡಿ ನಗುತ್ತಿದ್ದರು. ಇನ್ನು ಕೆಲವರು ನನ್ನೊಂದಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಹೀಗಾಗಿಯೇ ನಾನಿವತ್ತೂ ಇಲ್ಲಿಗೆ ತಲುಪಿದ್ದೇನೆ. ನನಗಾಗಿ ತಾಯಿ ಬಹಳಷ್ಟು ಕಷ್ಟಪಟ್ಟಿದ್ದಾರೆ. ಅವರ ಎಲ್ಲಾ ಕನಸುಗಳನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು.

ಪ್ರೊಫೆಸರ್​ ಆಗಿದ್ದರೂ ಸಂಜೆಯ ಬಿಡುವಿನ ವೇಳೆ ಗೋಲ್​ಗೊಪ್ಪ ಮಾರಾಟದಲ್ಲಿ ತೊಡಗುತ್ತೇನೆ. ಈ ದುಡಿಮೆಯಿಂದಲೇ ಇಂದು ಇದೆಲ್ಲ ಮಾಡಲು ಸಾಧ್ಯವಾಗಿದೆ ಎಂದು ಯುವಕ ಶಿವಲಿಗ್​ ತಮ್ಮ ಕೆಲಸದ ಬಗ್ಗೆ ಹೆಮ್ಮೆ ಪಡುತ್ತಾರೆ.

Leave A Reply

Your email address will not be published.