IRCTC Ticket Booking : ಇನ್ನು ರೈಲ್ವೆ ಟಿಕೆಟ್ ಬುಕಿಂಗ್ ‘ದಿಶಾ’ ಮಾಡ್ತಾಳೆ!
ಮೊದಲು ರೈಲು ಟಿಕೆಟ್ಗಾಗಿ ರೈಲ್ವೆ ಕೌಂಟರ್ಗೆ ಹೋಗಬೇಕಾಗಿತ್ತು. ಬಳಿಕ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಇ-ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪ್ರಾರಂಭ ಮಾಡಿತು. ಇದರ ಸಹಾಯದಿಂದಾಗಿ ರೈಲ್ವೆ ಪ್ರಯಾಣಿಕರು ಆನ್ಲೈನ್ನಲ್ಲೇ ರೈಲ್ವೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಆದರೆ ಇದೀಗ IRCTC ಮೊಬೈಲ್ ಅಪ್ಲಿಕೇಶನ್ ಕೂಡ ಲಭ್ಯವಿದೆ.
IRCTC ಯೊಂದಿಗೆ Paytm ನಂತಹ ಕಂಪನಿಗಳು ಒಪ್ಪಂದವನ್ನು ಮಾಡಿಕೊಂಡಿದೆ. ಈ ಮೂಲಕ ತಮ್ಮ ಮೊಬೈಲ್ ಅಪ್ಲಿಕೇಶನ್ಗಳಿಂದ ರೈಲು ಟಿಕೆಟ್ಗಳನ್ನು ಬುಕ್ ಮಾಡಲು ಅವಕಾಶ ಒದಗಿಸುತ್ತಿದೆ. ಇದೀಗ ರೈಲ್ವೆ ಪ್ರಯಾಣಿಕರು ಅತಿಸುಲಭವಾಗಿ ರೈಲು ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ. AskDISHA 2.0 ರೈಲು ಟಿಕೆಟ್ಗಳನ್ನು ಬುಕ್ ಮಾಡಲು AI ವರ್ಚುವಲ್ ಸಹಾಯಕ ಸೇವೆಗಳನ್ನು ಒದಗಿಸುತ್ತದೆ. ಇದರಿಂದ ಸುಲಭವಾಗಿ ರೈಲು ಟಿಕೇಟ್ ಗಳನ್ನು ಬುಕ್ ಮಾಡಬಹುದು. ಇನ್ನೂ ಹೇಗೆ ಬುಕ್ ಮಾಡೋದು? ಎಂಬುದರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ನೀವು ವಾಟ್ಸ್ಆ್ಯಪ್ನಲ್ಲಿ ಚಾಟ್ ಮಾಡುವ ಹಾಗೆ ವರ್ಚುವಲ್ ಅಸಿಸ್ಟೆಂಟ್ ಜೊತೆ ಚಾಟ್ ಮಾಡಬೇಕು. ಈ ರೀತಿಯಾಗಿ ರೈಲು ಟಿಕೆಟ್ ಬುಕ್ ಮಾಡಬಹುದು. ಅಲ್ಲದೆ, IRCTC ಬಳಕೆದಾರರು ಧ್ವನಿ ಸೂಚನೆಗಳ ಮೂಲಕ ಪಾಸ್ವರ್ಡ್ ಇಲ್ಲದೆ ರೈಲು ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ.
ಇನ್ನೂ, AskDISHA 2.0 ಸಹಾಯದಿಂದ ರೈಲು ಟಿಕೆಟ್ ಬುಕ್ ಮಾಡೋದು ಹೇಗೆಂದರೆ, IRCTC ಬಳಕೆದಾರರು ಆಸ್ಕ್ ದಿಶಾ 2.0 ಚಾಟ್ಬಾಟ್ ಅನ್ನು ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ನಲ್ಲಿ ಓಪನ್ ಮಾಡಬೇಕು. ನಂತರ ಧ್ವನಿ ಐಕಾನ್ ಮೇಲೆ ಕ್ಲಿಕ್ ಮಾಡಬೇಕು ಆಗ ಧ್ವನಿ ಸೇವೆ ತೆರೆಯುತ್ತದೆ. ಅದರಲ್ಲಿ ಧ್ವನಿ ಸಂದೇಶದ ಮೂಲಕ ನೀವು ಎಲ್ಲಿಂದ ಎಲ್ಲಿಗೆ ಪ್ರಯಾಣಿಸಬೇಕು. ಹಾಗೂ ಯಾವ ದಿನಾಂಕದಂದು ಪ್ರಯಾಣಿಸುತ್ತೀರಿ ಎಂಬುದನ್ನು ಹೇಳಬೇಕು. ಆಗ ಆ ದಿನದಂದು ಯಾವ ರೈಲುಗಳು ಲಭ್ಯವಿರುತ್ತವೆ ಎಂಬ ಪಟ್ಟಿ ಕಾಣಿಸುತ್ತದೆ. ಇಷ್ಟಾದ ಮೇಲೆ, ರೈಲು ಮತ್ತು ವರ್ಗವನ್ನು ಆಯ್ಕೆಮಾಡಿ. ದೃಢೀಕರಣದ ನಂತರ, ಅಲ್ಲಿ ಪ್ರಯಾಣಿಕರ ವಿವರಗಳನ್ನು ನಮೂದಿಸಬೇಕು. ಅದಾದ ಬಳಿಕ ಮೊಬೈಲ್ ನಂಬರ್ ಅನ್ನು ಹಾಕಿ, ಆಗ OTP ಜನರೇಟ್ ಆಗುತ್ತದೆ. ಆ OTP ಯನ್ನು ನಮೂದಿಸಿ ಹಾಗೂ ಪಾವತಿ ಮಾಡಿ. ಆಗ ರೈಲು ಟಿಕೆಟ್ ಬುಕ್ ಆಗುತ್ತದೆ. ಅದನ್ನು ಡೌನ್ಲೋಡ್ ಮಾಡಿ, ಸೇವ್ ಮಾಡಿಕೊಳ್ಳಿ.
ಇದು CoRover ಒದಗಿಸಿದ ತಂತ್ರಜ್ಞಾನವಾಗಿದ್ದು, AI ಚಾಟ್ಬಾಟ್ ಪ್ಲಾಟ್ಫಾರ್ಮ್ ಆಗಿದೆ. ಈ ಸೇವೆಯನ್ನು ಇಂಗ್ಲಿಷ್, ಹಿಂದಿ ಮತ್ತು ಹಿಂಗ್ಲಿಷ್ ಭಾಷೆಗಳಲ್ಲಿ ಕೂಡ ಬಳಸಬಹುದಾಗಿದೆ. ರೈಲು ಟಿಕೆಟ್ ಬುಕಿಂಗ್ ಅಲ್ಲದೆ ಇ-ಟಿಕೆಟ್, PNR ಸ್ಥಿತಿ ಪರಿಶೀಲನೆ, ಮರುಪಾವತಿ ಸ್ಥಿತಿ ಮತ್ತು ಬುಕಿಂಗ್ ಇತಿಹಾಸದಂತಹ ಸೇವೆಗಳನ್ನು ಕೂಡ ನೀವು ಪಡೆಯಬಹುದು. IRCTC ಯ ಪ್ರಕಾರ ಲಕ್ಷಾಂತರ ಬಳಕೆದಾರರು Ask Disha 2.0 ಚಾಟ್ಬಾಟ್ ಸೇವೆಗಳನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ.