ಪ್ರತಿ ದಿನ ರಾತ್ರಿ ಎರಡೆರಡು ಬಾರಿ ‘ಸೆಕ್ಸ್’ ಗೆ ಒತ್ತಾಯಿಸಿದ ಗಂಡ | ಒಪ್ಪದ ಹೆಂಡತಿಯ ಹತ್ಯೆ | ಗಂಡನ ನಾಟಕ ಪೊಲೀಸರ ಮುಂದೆ!!!
ಕಾಮದ ಅಮಲು ಏರಿದ್ದ ಗಂಡನೋರ್ವ ತನ್ನ ಹೆಂಡತಿಯ ಜೊತೆ ಮಾಡಿದ ವಿಚಿತ್ರ ಹಾಗೂ ವಿಕೃತ ಬಯಕೆ. ಅದೇನೆಂದರೆ, ಒಂದು ರಾತ್ರಿ ಎರಡೆರಡು ಬಾರಿ ಸೆಕ್ಸ್ ಮಾಡುವಂತೆ ಪತ್ನಿಯನ್ನು ಕೇಳಿದ್ದು. ಆದರೆ ಇದೇ ಬೇಡಿಕೆ ಹಾಗೂ ಹಿಂಸೆ ಹೆಚ್ಚಾಗುತ್ತಿದ್ದಂತೆ ಮತ್ತೆ ನಡೆದೋಯ್ತು ಭೀಕರ ಕೊಲೆ. ಒಂದೇ ರಾತ್ರಿ ಎರಡನೇ ಬಾರಿ ಸೆಕ್ಸ್‌ಗೆ ನಿರಾಕರಿಸಿದ್ದಾಳೆ ಎನ್ನೋ ಒಂದೇ ಕಾರಣಕ್ಕೆ ಈ ಪಾಪಿ ಪತಿ ಹೆಂಡತಿಯ ಕೊಲೆ ಮಾಡಿದ್ದಾನೆ.
ಬಳಿಕ 50 ಕಿಲೋಮೀಟರ್ ದೂರದಲ್ಲಿ ಮೃತದೇಹ ಎಸೆದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿ ನಾಟಕವಾಡಿದ್ದಾನೆ.
ಈ ವಿಕೃತ ಕಾಮದಾಹದ ಪತಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಮೊಹ ಜಿಲ್ಲೆಯಲ್ಲಿ. ಇದೀಗ ಪೊಲೀಸರ ಮುಂದೆ ತಪ್ಪೋಪ್ಪಿಕೊಂಡಿರುವ ಗಂಡ ಜೈಲು ಪಾಲಾಗಿದ್ದಾನೆ. ಇತ್ತ ಮೂವರು ಮಕ್ಕಳು ಅನಾಥರಾಗಿದ್ದಾರೆ.
ಈ ಕೊಲೆ ಆರೋಪ ಹೊತ್ತಿರುವ ಗಂಡನೇ, 34 ವರ್ಷದ ಮೊಹಮ್ಮದ್ ಅನ್ವರ್. ಈತನಿಗೆ 9 ವರ್ಷಗಳ ಹಿಂದೆ ಮದುವೆಯಾಗಿದ್ದಾನೆ. ಇವರಿಗೆ ಮೂರು ಮಕ್ಕಳಿದ್ದಾರೆ. ಕಳೆದ ಕೆಲ ದಿನಗಳಿಂದ ಈತನಿಗೆ ಸೆಕ್ಸ್ ದಾಹ ಹೆಚ್ಚಾಗಿದೆ. ಹಾಗಾಗಿ ಗಂಡ ಹೆಂಡತಿಯ ಮಧ್ಯೆ ಸೆಕ್ಸ್ ವಿಚಾರಕ್ಕಾಗಿ ವಿಪರೀತ ಜಗಳವಾಗಿದೆ.
ಅದ್ರೋಹದಲ್ಲಿ ಬೇಕರಿ ಅಂಗಡಿ ಇಟ್ಟುಕೊಂಡಿರುವ ಮೊಹಮ್ಮದ್ ಅನ್ವರ್ ರಾತ್ರಿ 10 ಗಂಟೆ ಸುಮಾರಿಗೆ ಶಾಪ್ ಕ್ಲೋಸ್ ಮಾಡಿ ಮನೆ ಸೇರಿಕೊಳ್ಳುತ್ತಾನೆ. ಬಳಿಕ ರಾತ್ರಿಯಲ್ಲಿ ಕನಿಷ್ಠ ಎರಡು ಬಾರಿ ಸೆಕ್ಸ್ ಮಾಡುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದ. ಆದರೆ ಒಂದೆರಡು ದಿನ ಪತಿಯ ಬೇಡಿಕೆಗೆ ಒಪ್ಪಿದ್ದ ಪತ್ನಿ ಬಳಿಕ ಈತನ ಬೇಡಿಕೆ ಹೆಚ್ಚಾಗತೊಡಗಿದೆ.
ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದೇ ಪತ್ನಿ ಒಂದು ರಾತ್ರಿ ಒಂದು ಬಾರಿ ಮಾತ್ರ ಸೆಕ್ಸ್ ನಡೆಸುವುದಾಗಿ ಹೇಳಿದ್ದಾಳೆ. ಇದರಿಂದ ರೊಚ್ಚಿಗೆದ್ದ ಮೊಹಮ್ಮದ್ ಅನ್ವರ್ ಪ್ರತಿ ದಿನ ರಾತ್ರಿ ಕನಿಷ್ಠ ಎರಡು ಬಾರಿ ಸೆಕ್ಸ್ ಮಾಡಲೇಬೇಕು ಎಂದು ರಂಪಾಟ ಮಾಡಿದ್ದಾನೆ. ಬಳಿಕ ದಾರದಿಂದ ಪತ್ನಿ ಕೈಗಳಳನ್ನು ಕಟ್ಟಿ ಥಳಿಸಿದ್ದಾನೆ. ಅದೇ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ.
ಈತನ ಕ್ರೌರ್ಯಕ್ಕೆ ಪತ್ನಿ ಪ್ರಾಣ ಬಿಟ್ಟಿದ್ದಾಳೆ. ಇತ್ತ ಪತ್ನಿಯ ಹತ್ಯೆ ಮಾಡಿದ ಮೊಹಮ್ಮದ್ ಅನ್ವರ್, 50 ಕಿಲೋಮೀಟರ್ ದೂರದಲ್ಲಿ ಪತ್ನಿ ಶವ ಎಸೆದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾನೆ. ಈತನ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
ಪೊಲೀಸರು ಪತ್ನಿಯ ಸಂಬಂಧಿಕರು, ಆಪ್ತರು, ನೆರಮನೆಯರ ವಿಚಾರಣೆ ನಡೆಸಿ, ನಂತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಮೊಹಮ್ಮದ್ ಅನ್ವರ ಮೇಲೆ ಪೊಲೀಸರಿಗೆ ಅನುಮಾನ ಹೆಚ್ಚಾಗಿದೆ. ಹೀಗಾಗಿ ಅನ್ವರ್ ವಶಕ್ಕೆ ಪಡೆದ ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಣೆ ಮಾಡಿದಾಗ, ಈ ವೇಳೆ ಪತ್ನಿಯ ಹತ್ಯೆ ಮಾಡಿರುವುದಾಗಿ ಹೇಳಿದ್ದಾನೆ. ವಿಚಾರಣೆಯಲ್ಲಿ ಈ ಮೊಹಮ್ಮದ್ ಅನ್ವರ್ ಮತ್ತೊಬ್ಬಳ ಜೊತೆ ಸಂಸಾರ ನಡೆಸಲು ಸಜ್ಜಾಗಿದ್ದ ಅನ್ನೋ ಮಾಹಿತಿಯೂ ಇದೆ. ಇದೀಗ ಮೊಹಮ್ಮದ್ ಅನ್ವರ್ ಜೈಲು ಪಾಲಾಗಿದ್ದು, ಈತನ ಮೂರು ಮಕ್ಕಳು ತಾಯಿ ಕಳೆದುಕೊಂಡು ಅನಾಥರಾಗಿದ್ದಾರೆ.