ಅಡಿಕೆ ಬೆಳೆಗಾರರಿಗೆ ಬಿಗ್ ಶಾಕಿಂಗ್ ನ್ಯೂಸ್!
ಅಡಿಕೆ ಬೆಳೆಗಾರರು ಈಗಾಗಲೆ ಎಲೆ ಚುಕ್ಕಿ ರೋಗ, ಹಳದಿ ರೋಗ, ಕೊಳೆ ರೋಗ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಈಗ ಮತ್ತೊಂದು ಶಾಕ್ ಎದುರಾಗಿದೆ. ಅಡಿಕೆ ಬೆಲೆಯಲ್ಲಿ ಕುಸಿತ ಕಂಡುಬಂದಿದ್ದೂ ಮತ್ತೊಮ್ಮೆ ಬೆಳೆಗಾರರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.
ಅಡಿಕೆ ಧಾರಣೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಕ್ವಿಂಟಲ್ ಗೆ 15,000 ರೂ. ಕುಸಿತ ಕಂಡಿದೆ. ಸೆಪ್ಟೆಂಬರ್ ಮೊದಲ ವಾರ ರಾಶಿ ಇಡಿ ಅಡಿಕೆ ಬೆಲೆ ಕ್ವಿಂಟಲ್ ಗೆ 58,000 ರೂ.ವರೆಗೂ ಇತ್ತು. ಅಕ್ಟೋಬರ್ ನಲ್ಲಿ 50,000 ರೂ.ಗೆ ಇಳಿದು ನಂತರ ಕಡಿಮೆಯಾಗಿದ್ದೂ, ಡಿಸೆಂಬರ್ ಎರಡನೇ ವಾರದಲ್ಲಿ 39 ಸಾವಿರ ರೂ.ಗೆ ತಲುಪಿದೆ.
2014 -15ರಲ್ಲಿ ರಾಶಿ ಇಡಿ ಅಡಿಕೆಯ ದರ ಒಂದು ಲಕ್ಷ ರೂ.ವರೆಗೂ ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ನಂತರದ ದಿನಗಳಲ್ಲಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ನಾಲ್ಕು ವರ್ಷಗಳಿಂದ 50 ಸಾವಿರ ರೂ. ಆಸುಪಾಸಿನಲ್ಲಿದ್ದ ಅಡಿಕೆಯ ಬೆಲೆ ಈಗ ಕುಸಿತವಾಗಿದೆ. ಇದಕ್ಕೆಲ್ಲಾ ಕಾರಣ ಭೂತಾನ್ ಸೇರಿದಂತೆ ಕೆಲವು ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು. ಹಾಗೂ ಗುಟ್ಕಾ ಕಂಪನಿಗಳು ಖರೀದಿ ಕಡಿಮೆ ಮಾಡಿರುವುದು ಕೂಡ ದರ ಕುಸಿತಕ್ಕೆ ಕಾರಣವೆಂದು ಹೇಳಲಾಗಿದೆ.