Abhishek – Aviva Engagement : ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮದುವೆಗೆ ತಯಾರಿ | ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ನಾಳೆ!

ಸ್ಯಾಂಡಲ್ ವುಡ್ ನಲ್ಲಿ ಮದುವೆ ಸದ್ದು ಜೋರಾಗಿದ್ದು, ನಟಿ ಅದಿತಿ ಪ್ರಭುದೇವ ಅವರ ಬಳಿಕ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಜೋಡಿಯ ಸಪ್ತಪದಿ ತುಳಿಯುವ ಸುದ್ದಿ ನಡುವೆ ಇದೀಗ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

 

ಹೌದು!!.ಅಭಿಷೇಕ್ ಹಾಗು ಅವಿವಾ ನಿಶ್ಚಿತಾರ್ಥ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದ ಬೆನ್ನಲ್ಲೆ ಇದೀಗ ಅಭಿಷೇಕ್ ಮತ್ತು ಅವಿವಾ ನಿಶ್ಚಿತಾರ್ಥಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ರೆಬೆಲ್ ಸ್ಟಾರ್ ಅಂಬಿಯವರ ಸುಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ನಾಳೆ (ಡಿಸೆಂಬರ್ 11) ನಿಶ್ಚಿತಾರ್ಥ ಶುಭ ಕಾರ್ಯ ಜರುಗಲಿದೆ.

(Abhishek Ambarish) ಹಾಗೂ ಅವಿವಾ ನಿಶ್ಚಿತಾರ್ಥ (Engagement) ಬಗ್ಗೆ ಬಾರಿ ಜನ ಮಾನಸದಲ್ಲಿ ಚರ್ಚೆ ನಡೆಯುತ್ತಿದ್ದ ನಡುವೆ ಇದೀಗ , ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದು, ಅಭಿಷೇಕ್ ಮತ್ತು ಅವಿವಾ ನಿಶ್ಚಿತಾರ್ಥಕ್ಕೆ ಭರದ ತಯಾರಿ ನಡೆಯುತ್ತಿವೆ. ಈ ಕುರಿತು, ಅಭಿಷೇಕ್ ಅಂಬರೀಶ್ ಅವಿವಾ ನಿಶ್ಚಿತಾರ್ಥದ ಕುರಿತು ಅಭಿಷೇಕ್ ಅವರ ತಾಯಿ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದು, ಈ ಶುಭ ಸಮಾರಂಭ ನಾಳೆ ಖಾಸಗಿ ಹೋಟೇಲ್​​ನಲ್ಲಿ ನಡೆಯಲಿದ್ದು , ಸಂಕ್ರಾತಿ ನಂತರ ಮದುವೆ ದಿನವನ್ನು ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಅಭಿಷೇಕ್ ಅವರ ಮದುವೆಯ ಶುಭ ಸಮಾರಂಭಕ್ಕೆ ಕೂಡ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಕುಟುಂಬದವರ ಸಮ್ಮುಖದಲ್ಲಿ ಈಗಾಗಲೇ ಉಂಗುರ ಪೂಜೆ ನೆರವೇರಿದೆ ಎನ್ನಲಾಗಿದೆ.

ಅಂಬರೀಶ್ ಸುಮಲತ ವಿವಾಹ ವಾರ್ಷಿಕೋತ್ಸವದ ದಿನ ಉಂಗುರ ಪೂಜೆ ಮಾಡಲಾಗಿದೆ ಎಂಬ ಸುದ್ದಿ ಇದ್ದು, ಡಿಸೆಂಬರ್ 11 ರಂದು ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಸದ್ಯದಲ್ಲೇ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಸಪ್ತಪದಿ ತುಳಿಯಲಿದ್ದಾರೆ.ಸದ್ಯ ಈ ಕಾರ್ಯಕ್ರಮ ಕೇವಲ ಕುಟುಂಬಸ್ಥರು ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ನಿಶ್ಚಿತಾರ್ಥ ನಡೆಯಲಿದೆ.

ಅಭಿಷೇಕ್ ತಮ್ಮ ಬಹುಕಾಲದ ಗೆಳತಿಯ ಜೊತೆಗೆ ಹಸೆ ಮಣೆ ಏರಲಿದ್ದು , ಸದ್ಯ ಅಭಿ ಮತ್ತು ಅವಿವಾ ಮೊತ್ತ ಮೊದಲ ಬಾರಿಗೆ ಭೇಟಿಯಾಗಿದ್ದ ಹೋಟೆಲ್​ನಲ್ಲಿ ಉಂಗುರ ಬದಲಾಯಿಸಿಕೊಂಡು ನವ ಜೀವನಕ್ಕೆ ಮುನ್ನುಡಿ ಬರೆಯಲಿದ್ದಾರೆ.

ನಾಳೆ ನಡೆಯಲಿರುವ ನಿಶ್ಚಿತಾರ್ಥ ದಶುಭ ಗಳಿಗೆಗೆ ಶಿವಣ್ಣ ,ರಾಕಿಂಗ್ ಸ್ಟಾರ್ ಯಶ್ ದಂಪತಿ, ದುನಿಯಾ ಸೂರಿ ಸೇರಿದಂತೆ ಸಾಕಷ್ಟು ಸ್ಯಾಂಡಲ್​​ವುಡ್ ಗಣ್ಯರು ಆಗಮಿಸಲಿದ್ದಾರೆ. ಅಲ್ಲದೆ ವಧುವಿನ ಕಡೆಯಿಂದ 50 ಮಂದಿ ಹಾಗೂ ಅಭಿ ಅವರ ಕಡೆಯಿಂದ 50 ಒಟ್ಟು 100 ಜನ ನಿಶ್ಚಿತಾರ್ಥದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.