ಫಲಿಸಲಿಲ್ಲ ಪ್ರಾರ್ಥನೆ : ರೈಲು ಫ್ಲಾಟ್‌ಫಾರ್ಮ್ ನಡುವೆ ಸಿಲುಕಿದ ಯುವತಿ ಸಾವು

ಆಂಧ್ರ ಪ್ರದೇಶದ ವಿಶಾಖಪಟ್ಟಣಂ ವ್ಯಾಪ್ತಿಯ ದುವ್ವಾಡ ರೈಲು ನಿಲ್ದಾಣದಲ್ಲಿ ಬೋಗಿ ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಅಣ್ಣಾವರಂ ಯುವತಿ ಎಂ.ಶಶಿಕಲಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು ಕೂಡ ಫಲಕಾರಿಯಾಗದೆ ಅಸುನೀಗಿದ್ದಾರೆ.

 


ಮೇರಪಾಲ ಬಾಬುರಾವ್ ಮತ್ತು ವೆಂಕಟಲಕ್ಷ್ಮಿ ದಂಪತಿಯ ಏಕೈಕ ಸುಪುತ್ರಿ ಯಾಗಿದ್ದ ಶಶಿಕಲಾ ಕಳೆದ ತಿಂಗಳು 20 ರಿಂದ ದುವ್ವಾಡದ ಕಾಲೇಜಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದರು ಎನ್ನಲಾಗಿದೆ. ಪ್ರತಿದಿನ ಬೆಳಗ್ಗೆ ಅಣ್ಣಾವರಂ ನಿಲ್ದಾಣದಿಂದ ಗುಂಟೂರು-ರಾಯಗಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ದುವ್ವಾಡದ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ವ್ಯಾಸಾಂಗ ನಡೆಸಲು ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಈ ದುರ್ಘಟನೆ ಜರುಗಿದೆ.

ಎಂ.ಶಶಿಕಲಾ ದುವ್ವಾಡದಲ್ಲಿ ಎಂಸಿಎ ಓದುತ್ತಿದ್ದರು. ಹಾಗಾಗಿ, ಬುಧವಾರ ಬೆಳಗ್ಗೆ ಅಣ್ಣಾವರಂನಿಂದ ಗುಂಟೂರು – ರಾಯಗಡ ರೈಲಿನಲ್ಲಿ ದುವ್ವಾಡ ರೈಲು ನಿಲ್ದಾಣದಲ್ಲಿ ಇಳಿಯುತ್ತಿದ್ದ ಸಂದರ್ಭ ಅಪಘಾತಕ್ಕೆ ಈಡಾಗಿದ್ದರು. ತಕ್ಷಣವೇ ರೈಲ್ವೆ ರಕ್ಷಣಾ ತಂಡವು ಪ್ಲಾಟ್‌ಫಾರ್ಮ್‌ ಹಾಗೂ ರೈಲಿನ ಮಧ್ಯ ಸಿಲುಕಿದ್ದ ಯುವತಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಬಗ್ಗೆ ಶಶಿಕಲಾ ಕುಟುಂಬದವರಿಗೆ ಮಾಹಿತಿ ದೊರೆತ ಕೂಡಲೇ ಕುಟುಂಬ ಸದಸ್ಯರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ತಮ್ಮ ಮಗಳ ಪರಿಸ್ಥಿತಿ ಕಂಡು ಹೆತ್ತವರು ಕುಟುಂಬದವರಿಗೆ ಕಂಬನಿ ಮಿಡಿದಿದ್ದರು . ಅಷ್ಟೆ ಅಲ್ಲದೆ, ಆಕೆಯ ತಂದೆ-ತಾಯಿ, ಕುಟುಂಬಸ್ಥರು, ಸ್ನೇಹಿತರು, ಗ್ರಾಮಸ್ಥರು ಮಾತ್ರವಲ್ಲದೆ ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಈ ದುರ್ಘಟನೆ ನೋಡಿದ ಪ್ರತಿಯೊಬ್ಬರೂ ಕೂಡ ಶಶಿಕಲಾ ಆದಷ್ಟು ಶೀಘ್ರದಲ್ಲಿ ಆರೋಗ್ಯ ಚೇತರಿಕೆ ಕಂಡು ಗುಣಮುಖಳಾಗಲಿ. ಎಂದು ಹಾರೈಸಿದ್ದರು.

ಚಿಕಿತ್ಸೆ ಫಲಕಾರಿಯಾಗಿ ಆಕೆ ಸುರಕ್ಷಿತವಾಗಿ ಮನೆಗೆ ಬರಲಿ. ಹಾಗೆಯೇ ಆಕೆಯ ಮುಂದಿನ ಭವಿಷ್ಯ ಉಜ್ವಲ ವಾಗಲಿ ಎಂದು ನೋಡಿದವರೆಲ್ಲ ಪ್ರಾರ್ಥನೆ ನಡೆಸುತ್ತಿದ್ದರು. ಆದ್ರೆ, ವಿಧಿಲಿಖಿತ ಬೇರೆಯೇ ಇತ್ತು. ಎಷ್ಟೇ ಪ್ರಾರ್ಥನೆ ಸಲ್ಲಿಸಿದರು ಕೂಡ ಇದೀಗ ಶಶಿಕಲಾ ತನ್ನ ಇಹಲೋಕದ ಪಯಣವನ್ನು ಮುಗಿಸಿಬಿಟ್ಟಿದ್ದಾಳೆ.

ಶಶಿಕಲಾ ಅವರ 30 ಗಂಟೆಗಳ ಕಾಲ ಸುಧೀರ್ಘ ಸಾವಿನೊಂದಿಗೆ ಸೆಣಸಾಡಿದ್ದು ಆದರೂ, ವಿಧಿಯ ಕರೆಗೆ ಓಗೊಟ್ಟು ಅಕಾಲಿಕ ಮೃತ್ಯು ಸಂಭವಿಸಿದೆ. ನಿನ್ನೆಯವರೆಗೂ ಜೊತೆಗಿದ್ದ ಗೆಳತಿ ಶಶಿಕಲಾ ಇನ್ನಿಲ್ಲ ಎಂದು ತಿಳಿದಾಗ ವಿದ್ಯಾರ್ಥಿಗಳು ಕೂಡ ದುಃಖಿತರಾಗಿದ್ದಾರೆ. ಗುರುವಾರ ಬೆಳಗ್ಗೆ ವಿಶಾಖಪಟ್ಟಣದ ಆಸ್ಪತ್ರೆಗೆ ಆಗಮಿಸಿ ಶಶಿಕಲಾ ನೋಡಲು ಬಂದ ಸ್ನೇಹಿತರು ಅವಳ ಜತೆ ಕಳೆದ ದಿನಗಳನ್ನು ಮೆಲುಕು ಹಾಕುತ್ತಾ ಕಂಬನಿ ಮಿಡಿದಿದ್ದಾರೆ . ಈ ನಡುವೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

https://twitter.com/HateDetectors/status/1600463835999064064?ref_src=twsrc%5Etfw%7Ctwcamp%5Etweetembed%7Ctwterm%5E1600463835999064064%7Ctwgr%5E02f75afe53f9b3cb2ebc6e7c4be26a9b6d43c677%7Ctwcon%5Es1_c10&ref_url=http%3A%2F%2Fapi-news.dailyhunt.in%2F

Leave A Reply

Your email address will not be published.