Traffic Rules : ಇನ್ನು ಮುಂದೆ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದರೆ 5 ಸೆಕೆಂಡ್‌ಗೇ ಬರುತ್ತೆ ಫೈನ್‌ ರಶೀದಿ | ಹೇಗೆ ಅಂತೀರಾ? ಇಲ್ಲಿದೆ ಉತ್ತರ

ಬೈಕ್ ಸವಾರರು ಇಲ್ಲಿ ಸ್ವಲ್ಪ ಗಮನಿಸಿ. ಬೆಂಗಳೂರು ಸಂಚಾರಿ ಪೊಲೀಸರು ಫುಲ್ ಅಪ್ಡೇಟ್ ಆಗಿದ್ದು ಅಲ್ಲದೆ ರೂಲ್ಸ್ ಬ್ರೇಕ್ ಮಾಡಿದ್ರೆ ವಿಡಿಯೋ ಸಮೇತ ಸಂಚಾರಿ ಪೊಲೀಸರು ಫೈನ್ ಹಾಕ್ತಾರೆ. ಹೌದು ಇನ್ನುಮುಂದೆ ಹೆಲ್ಮೆಟ್ ಧರಿಸದೇ ಬೇಕು ಬೇಕಾದಂತೆ ಸವಾರಿ ಮಾಡುವ ಹಾಗಿಲ್ಲ ಹೌದು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ 5 ಸೆಕೆಂಡ್​ನಲ್ಲಿ ವಿಡಿಯೋ ಸಮೇತ ಫೈನ್ ರಶೀದಿ ನಿಮ್ಮ ಮುಂದೆ ಬರಲಿದೆ.

 

ಸಿಗ್ನಲ್​ನಲ್ಲಿ ಪೊಲೀಸರು ಇಲ್ಲ ಅಂತ ಸಿಗ್ನಲ್​ ಜಂಪ್ ಮಾಡೋರು ಎಚ್ಚರ ವಹಿಸಿ ಯಾಕೆಂದರೆ ಇನ್ನುಮುಂದೆ ಯಾರೂ ಪೊಲೀಸರಿಲ್ಲ ಅಂತ ತ್ರಿಬಲ್ ರೈಡಿಂಗ್ ಮಾಡಿದ್ರೆ ಮೂರು ಜನರ ಫೋಟೋ ಸಮೇತ ಕೇಸ್ ಬೀಳಲಿದೆ.

ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ಕಾರ್ಯಾಚರಣೆ ನಡೆಸುತ್ತಿದ್ದು ಹೈಯೆಂಡ್ ಕ್ಯಾಮೆರಾ ಮೂಲಕ ರೂಲ್ಸ್ ಬ್ರೇಕ್ ಮಾಡುವವರ ಮೇಲೆ ಪೊಲೀಸರು ನಿಘ ವಹಿಸಿದ್ದಾರೆ. ಅದಲ್ಲದೆ ಹೈ ರೆಸಲ್ಯೂಷನ್ ಇರೋ ಹೈಯೆಂಡ್ ಕ್ಯಾಮರಾ ನಿಮ್ಮ ಪ್ರತಿ ಮೂಮೆಂಟ್ ರೆಕಾರ್ಡ್ ಮಾಡಲಾಗುತ್ತದೆ . 24 ಗಂಟೆಯೂ ನಿಮ್ಮ ಪ್ರತೀ ವೈಯ್ಲೇಷನ್ ಮೂಮೆಂಟ್ ರೆಕಾರ್ಡ್ ಆಗುತ್ತದೆ.

ಅಷ್ಟೇ ಅಲ್ಲದೆ ತ್ರಿಬಲ್ ರೈಡಿಂಗ್ ಇದ್ರೆ ಮೂರು ಜನರ ಫೋಟೋ, ಸೀಟ್ ಬೆಲ್ಟ್ ಹಾಕದಿದ್ರೆ, ಜೀಬ್ರಾ ಕ್ರಾಸ್ ದಾಟಿದ್ರೆ ಸಹ ಫೈನ್ ಬೀಳಲಿದೆ. ಮತ್ತು ಈ ಕ್ಯಾಮೆರಾಗಳು ರಾತ್ರಿ ಹೊತ್ತಿನಲ್ಲೂ ಸಹ ಕಾರ್ಯನಿರ್ವಹಿಸಲಿದೆ. ಈಗಾಗಲೇ 50 ಜಂಕ್ಷನ್ ಗಳಲ್ಲಿ 250 ITMS ಕ್ಯಾಮರಾ ಅಳವಡಿಕೆ ಮಾಡಲಿದೆ.

ನೀವು ಅಪ್ಪಿತಪ್ಪಿ ರೂಲ್ಸ್ ಬ್ರೇಕ್ ಮಾಡಿದ ತಕ್ಷಣವೇ 5 ಸೆಕೆಂಡ್ ಗೆ ನಿಮ್ಮ ಮೊಬೈಲ್ ಫೋನಿಗೆ ವಿಡಿಯೋ ಜೊತೆ ಬರುತ್ತೆ ಫೈನ್ ರಶೀದಿಯೂ ಬರುತ್ತದೆ.
ಸದ್ಯ ಮೊಬೈಲ್ ನಲ್ಲೇ ಕ್ಯೂ ಆರ್ ಕೋಡ್ ಮೂಲಕ ಫೈನ್ ಕಟ್ಬೇಕು. ಫೈನ್ ಕಟ್ಟಿಲ್ಲ ಅಂದ್ರೆ 24 ಗಂಟೆಗಳಲ್ಲಿ ಮನೆ ಬಾಗಿಲಿಗೆ ಬರುತ್ತೆ ನೊಟೀಸ್. ನೊಟೀಸ್ ಬಂದ್ಮೇಲೆ ಕೋರ್ಟ್ ಗೆ ಹೋಗಿ ಫೈನ್ ಕಟ್ಟಬೇಕಾಗುತ್ತದೆ.

ಒಟ್ಟಾರೆಯಾಗಿ ಸರ್ಕಾರದ ನಿಯಮಗಳ ಪಾಲನೆ ಆಗದೆ ಇರುವುದರಿಂದ ವಾಹನ ಸವಾರರಿಗೆ ಈ ನಿಯಮ ರೂಪಿಸಲಾಗಿದೆ .

Leave A Reply

Your email address will not be published.